ಶಿವಣ್ಣ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ.. ಅವರ ಜೊತೆ ಚಿತ್ರ ಮಾಡೋಕೆ ನಟ ನಟಿಯರು ಕಾಯ್ತಿತಾ೯ರೆ, ಇವರು ಹಾಗೇನೇ ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದರೂ ಅಹಂ ಇಲ್ಲದೆ ಎಲ್ಲರ ಜೊತೆ ಮತ್ತು ಹೊಸಬರಿಗೆ ಅವಕಾಶ ನೀಡೋ ಗುಣ ಇವರದು, ಈಗಾಗಲೇ ಹೊಸಬರ ಜೊತೆ ಚಿತ್ರ ಮಾಡಿದ್ದಾರೆ ಮುಂದೇನೂ ಮಾಡ್ತಾ ಇತಾ೯ರೆ.
ಟಗರು ಚಿತ್ರದ ಕ್ರೂರಿ ಡಾಲಿ ಧನಂಜಯ್ ಈಗಾಗಲೇ ಶಿವಣ್ಣ ಜೊತೆ ತೆರೆ ಹಂಚಿಕೊಂಡಿದ್ದಾರೆ ಮತ್ತೊಂದು ಚಿತ್ರ ನೆನ್ನೆ ತಾನೆ ಸೆಟ್ಟೇರಿದೆ 23 ನವೆಂಬರ್ ರಿಂದ ಚಿತ್ರೀಕರಣ ಪ್ರಾರಂಭ. ಶಿವಣ್ಣ ರವರ ಮೊದಲ ದೃಶ್ಯ ದೊಡ್ಡಗಣಪತಿ ದೇವಸ್ಥಾನ, ಬಸವನಗುಡಿಯಲ್ಲಿ ಚಿತ್ರೀಕರಿಸಲಾಯಿತು, ಇವರ ಜೊತೆ ಮತ್ತೊಬ್ಬ ಯುವನಟ ದಿಯಾ ಚಿತ್ರದಲ್ಲಿ ತಮ್ಮ ವಿಭಿನ್ನ ನಟನೆ ಮತ್ತು ಮ್ಯಾನರಿಸಂನಿಂದ ಜನಪ್ರಿಯಗಳಿಸಿದ ಪೃಥ್ವಿ ಅಂಬಾರ್ ನಟಿಸುತ್ತಿದ್ದಾರೆ, ಚಿತ್ರದ ಹೆಸರು “ಶಿವಪ್ಪ ” ಟೈಟಲ್ ಸೂಪರ್ ಅಲ್ವಾ..
ನಾಟ್ಯಸಾವ೯ಭೌಮ ಜೊತೆ ನಟನೆ ಮಾಡೋದು ಅಷ್ಟು ಸುಲಭದ ಮಾತಲ್ಲ ನಿದೇಶಕರು ವಿಜಯ್ ಮಿಲ್ಟನ್, ಸಂಗೀತ ಅನೂಪ್ ಸಿಳೀನ್ ಎಲ್ಲರಿಗೂ ಆಲ್ ದಿ ಬೆಸ್ಟ್…
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆರ್ ಚಂದ್ರು ನಿರ್ದೇಶನದ ಬಹುಕೋಟಿ ವೆಚ್ಚದ “ಕಬ್ಜಾ” ಸಿನಿಮಾದ ಶೂಟಿಂಗ್ ಡಿಸೆಂಬರ್ 20 ನೇ ತಾರೀಖಿನಿಂದ ಪುನರಾರಂಭಗೊಳ್ಳಲಿದೆ. ಕಬ್ಜಾ ಒಂದು ಪ್ಯಾನ್…
ಹುಬ್ಬಳ್ಳಿಯ ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿಯು ಚೇತನಾ ಫೌಂಡೇಶನ್ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅದ್ಧೂರಿ ಕರ್ನಾಟಕ ಚಲನಚಿತ್ರೋತ್ನವಕ್ಕೆ ಅದ್ಭುತ…