ಅಭಿಮಾನಿಗಳಿಗೆ ಅಣ್ಣಾವ್ರೆಂದರೆ ಪಂಚ ಪ್ರಾಣ, ಅಣ್ಣಾವ್ರಿಗೆ ಇವರೆಂದರೆ ಅಷ್ಟೇ ಪ್ರೀತಿ, ಅಣ್ಣಾವೃ ಅಭಿಮಾನಿಗಳೇ ದೇವರು ಅಂದ್ರು ಆದ್ರೆ ಅಣ್ಣಾವ್ರೇ ದೇವೃ ಅಂದ್ಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ದೇವರು ಪೂಜೆ ಮಾಡೋ ಹಾಗೆ ಅಣ್ಣಾವ್ರ ಫೋಟೋ ಇಟ್ಟು ಪೂಜೆ ಮಾಡ್ತಾರೆ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು, ಪ್ರೀತಿಯಿಂದ ಅಣ್ಣಾವ್ರಿಗೆ ಬಿರುದು ಕೊಟ್ಟಿರೋದು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ, ಕನ್ನಡ ಕಂಠೀರವ, ಕಲಾ ತಪಸ್ವಿ, ಕನ್ನಡ ಕುವರ, ಕನಾ೯ಟಕ ರತ್ನ, ದಾದಾಸಾಹೇಬ್ ಫಾಲ್ಕೆ ಹೀಗೆ…
ಯಾವುದೇ ಒಂದು ಐಚ್ಛಿಕ ವಿಷಯದಲ್ಲಿ ಪರಿಣತಿ ಹೊಂದಿದ ಮಹನೀಯರಿಗೆ ಪ್ರತಿಷ್ಟಿತ ವಿಶ್ವ ವಿದ್ಯಾನಿಲಯದಿಂದ ನೀಡುವ ಗೌರವ ಪದವಿ ಡಾಕ್ಟರೇಟ್, ಆದರೆ ಏನೂ ಓದದ ಹಳ್ಳಿ ಹುಡುಗನಿಗೆ ಗೌರವಾನ್ವಿತ ಪದವಿ ನೀಡ್ತಾರೆ ಅನ್ನೋದು ಸುಲಭದ ಮಾತಲ್ಲ. ಅಣ್ಣಾವೃ ತಾವು ನಟಿಸಿದ ಚಿತ್ರಗಳಲ್ಲಿ ನಮಗೆ ಅರಿವಿಲ್ಲದಂತೆ ನಾವು ಅವರಿಂದ ಒಳ್ಳೆಯ ಗುಣಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡಿರೋ ನಿದಶ೯ನಗಳು ಬಹಳಷ್ಟಿವೆ, ಈಗ ಯಾಕೆ ಈ ರೀತಿ ಹೇಳ್ತಿದೀನಿ ಅನ್ನೋದು ಮುಂದೆ ನಿಮಗೆ ಗೊತ್ತಾಗುತ್ತೆ .
ಅಣ್ಣಾವ್ರ ಡಾಕ್ಟರೇಟ್ ಗೆ 45 ವರ್ಷ
ಫೆಬ್ರವರಿ 8, 1976 ರಂದು ಕನ್ನಡ ಕಲಾ ಕಂಠೀರವ ರಾಜ್ ಕುಮಾರ್ ಅವರಿಗೆ ಮೈಸೂರಿನ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಡಾಕ್ಟರೇಟ್ ಬಗ್ಗೆ ಡಾ.ರಾಜ್ ಏನ್ ಹೇಳಿದ್ದರು?
”ಏನ್ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ? 🙏🙏 ನಾನು ವಿದ್ಯಾವಂತನಲ್ಲ, ಓದಿದವನಲ್ಲ, ನಾನೇನೂ ಎಂ.ಎ ಆಗಲಿ ಪಿ.ಎಚ್.ಡಿ ಮಾಡಿದ್ದೀನಾ. ಬಾಲ್ಯದಲ್ಲಿ ನಾನು ಹಳ್ಳಿನಲ್ಲಿ ಎಮ್ಮೆ ಮೇಯಸ್ತಾ ಇದ್ದೆ ನಾನು” ಅಂತಾ ಹೇಳಿದ್ದರು.🙏👏💐 ಈ ಒಂದು ರಾಜಚರಿತ್ರೆಯ ರಾಜಮಾರ್ಗದ ಸುವರ್ಣದಿನದ ಸವಿನೆನಪು…
ಅಭಿಮಾನಿಗಳ ಖುಷಿಗಾಗಿ ಮಾಡಬಾರದ ಪಾತ್ರಗಳು ಇಲ್ಲ, ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರವಿಲ್ಲ. ಕಲೆಗಾಗಿ ತಮ್ಮ ಇಡೀ ಜೀವನ ಮೀಸಲಿಟ್ಟ ಕನ್ನಡ ಕಣ್ಮಣಿ ಅಣ್ಣಾವೃ.
ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ, ಈ ಸುದಿನ ಅಭಿಮಾನಿಗಳು ಎಂದಿಗೂ ಮರೆಯಲಾಗದ ದಿನ. ಮುತ್ತು ರಾಜ್ ಡಾ ರಾಜ್ ಆದ ದಿನ. ಅಣ್ಣಾವೃ ಎಂದಿಗೂ ಅಜರಾಮರ, ಇವರ ನೆನಪೇ ನಟನೆಯೇ ಎಂದೆಂದಿಗೂ ಜೀವಂತ, ಮತ್ತೆ ಈ ಕರುನಾಡಲ್ಲಿ ಹುಟ್ಟಿ ಬನ್ನಿ ದೇವೃ 🙏