ಅನುರಾಗ ಏನಾಯ್ತು ಮನಸೇಕೆ ಕಲ್ಲಾಯ್ತು… ವಿರಹ ವೇದನೆ ಗೀತೆ ಈಗ ಯಾಕೆ ಅಂದ್ರಾ.. ಪದ್ಮಭೂಷಣ ಡಾ ರಾಜ್ ಕುಮಾರ್ ಮತ್ತು ಮಂಜುಳ ಅಭಿನಯದ ಸೂಪರ್ ಹಿಟ್ ಚಿತ್ರ “ನೀ ನನ್ನ ಗೆಲ್ಲಲಾರೆ ” ಬಿಡುಗಡೆಯಾಗಿ ಇಂದಿಗೆ 40 ವಷ೯ಗಳು 🌹

ಹಟಮಾರಿ, ಬಜಾರಿ ಹೆಣ್ಣು ನಳಿನಿ, ಈಕೆಯನ್ನು ನೃತ್ಯದಲ್ಲಿ ಸೋಲಿಸೋ ಗಂಡು ಬೇರಾರು ಇಲ್ಲ ಎಂಬ ಭಾವನೆ, ಶ್ರೀಕಾಂತ್ ಮತ್ತು ನಳಿನಿ ಮಧ್ಯೆ ಸ್ಪೋಟ್ಸ್ ಕ್ಲಬ್ ನಲ್ಲಿ ನೃತ್ಯ ಪೈಪೋಟಿ, ಪೈಪೋಟಿಯಲ್ಲಿ ಗೆದ್ದರೆ ಕೆಲ ಶರತ್ತು, ಇಬ್ಬರಲ್ಲಿ ಯಾರು ಗೆಲ್ತಾರೆ,
“ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ” ಹಾಡಿನಲ್ಲಿ ವಿಶಿಷ್ಟ ಗಾಯನ ಅಣ್ಣಾವ್ರ ಮತ್ತು ಎಸ್ ಜಾನಕಿ ರವರ ಜುಗಲ್ಬಂಧಿ ತೆರೆ ಮೇಲೆ ನೋಡಬೇಕು.

ಹಯವದನ ರಾವ್ ನಳಿನಿ ತಂದೆ, ಇವರ ಜೊತೆ ಹೆಚ್ಚು ಸ್ನೇಹದಿಂದ ಇದ್ದು ಅವರ ಮಗಳಿಗೆ ಬುಧ್ಧಿ ಕಲಿಸುವ ಮತ್ತು ತಾನೊಂದು ಹೆಣ್ಣು ಎಂಬುದನ್ನು ಮರೆತಿರೋದನ್ನು ಜ್ಞಾಪಿಸೋದು, ತನ್ನ ತಪ್ಪು ತಿದ್ದುಕೊಳ್ತಾರೋ.. ಇಲ್ವೋ.. ಇಬ್ಬರ ಮಧ್ಯೆ ಸಣ್ಣ ವಿಷಯ ಮನಸ್ತಾಪ ಬಂದರೆ ಅದನ್ನು ದೊಡ್ಡದು ಮಾಡಿಕೊಂಡಾಗ ಆಗೋ ಅನಾಹುತಗಳು …

ಚಿತ್ರದ ಮುಖ್ಯ ಆಕಷ೯ಣೆ ಹಾಡುಗಳು ಜೊತೆಗೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿದೇ೯ಶಕ ಶ್ರೀ ಇಳಯರಾಜ ವಿಭಿನ್ನ ಸಂಗೀತ ಜನಮನ್ನಣೆ, ಎಲ್ಲಾ ಹಾಡುಗಳೂ ಜನಪ್ರಿಯ.

“ಡ್ಯುಯೆಟ್ ಸಾಂಗ್ ಐ ಲವ್ ಯೂ ಜೀವ ಹೂವಾಗಿದೆ ಭಾವ ಜೇನಾಗಿದೆ ವಿಶೇಷ ಆಕರ್ಷಣೆ, ಈ ಗೀತೆ ಕನಾ೯ಟಿಕ್ ರಾಗ ಕಪಿ, ಇದೇ ಟ್ರಾಕನ್ನು ಮೂರನೆ ಕ್ಲಾಸ್ ಮಂಜ ಬಿ ಕಾಂ ಭಾಗ್ಯ ಚಿತ್ರದಲ್ಲಿ ಬಳಕೆ, ಸಕ೯ಸ್ ಚಿತ್ರದ ಪ್ರಾರಂಭದ ಗೀತೆಯ ಸಾಲುಗಳಾಗಿ ಬಳಕೆ,
ದಿ ವಿಲನ್ ಚಿತ್ರದಲ್ಲಿ ಇದೇ ಸಾಲುಗಳು ಬಳಸಿರೋದು ವಿಶೇಷ”.

ಅನುರಾಗ ಏನಾಯ್ತು ಈ ಗೀತೆ ಮಧುವಂತಿ ರಾಗ, ನನ್ನ ನೀನು ಗೆಲ್ಲಲಾರೆ ಗೀತೆ ಸುಧಾ ಧನ್ಯಾಸಿ ಮತ್ತು ಹಿಂಡೋಲಿ ರಾಗ ಒಳಗೊಂಡಿದೆ.

ಬಹಳ ಕಾಲದ ನಂತರ ಅಣ್ಣಾವ್ರು ಹಾಗೂ ಮಂಜುಳಾ ಅಭಿನಯಿಸಿರುವ ಚಿತ್ರ ನೀ ನನ್ನ ಗೆಲ್ಲಲಾರೆ. ಪ್ರಥಮ ಬಾರಿಗೆ ಅಣ್ಣಾವ್ರ ಚಿತ್ರಕ್ಕೆ ಇಳಯರಾಜ ರವರು ಸಂಗೀತ ನೀಡಿದ್ದಾರೆ. ಅರ್. ಮಧುಸೂದನ್ ರವರ ಕ್ಯಾಮೆರಾ ಕೆಲಸ ತುಂಬಾ ನಯನ ಮನೋಹರವಾಗಿ ಮೂಡಿ ಬಂದಿದೆ. ಸುದರ್ಶನ್ ರವರ ಪಾತ್ರ ನೆಗೆಟಿವ್ ಇದ್ದರೂ, ಲುಕ್ ಹೀರೋ ರೀತಿಯಲ್ಲಿದೆ. ಕಥೆ ಒಂದೇ ಚೌಕಟ್ಟಿನಲ್ಲಿ ಹೋಗುತ್ತ ಸುಮಾರಾಗಿದ್ದರೂ ಎಲ್ಲೂ ಬೇಜಾರು ಮಾಡಿಕೊಂಡು ಹೋಗುವುದಿಲ್ಲ. ಟೈಟಲ್ ಕಾರ್ಡ್ ವಿಭಿನ್ನವಾಗಿ ಗಮನ ಸೆಳೆಯಿತು. ಅಭಿಮಾನಿಗಳಿಗೆ ಹಬ್ಬ. ಚಿತ್ರ ನೋಡಿ ಹೊರ ಬಂದ ನಂತರ ಯಾಕೋ ಬೇಗನೇ ಮುಗಿಯಿತು ಎನಿಸುತ್ತದೆ. ಶತದಿನ ಸಂಭ್ರಮ ಕಾಣಲಿಲ್ಲ. ಬೆಂಗಳೂರು ಸಾಗರ್, ಮೈಸೂರು ಉಡ್‌ಲ್ಯಾಂಡ್ಸ್ ಮತ್ತು ಲಕ್ಷ್ಮಿ, ಡಾವಣಗೆರೆ ಗೀತಾಂಜಲಿಯಲ್ಲಿ ೫೦ ರ ಸಂಭ್ರಮ. ಬಿಡುಗಡೆ ದಿಃ ೧೨-೦೬-೧೯೮೧.

ತಾರಾಗಣದಲ್ಲಿ ಡಾ ರಾಜ್ ಕುಮಾರ್, ಮಂಜುಳ, ಕೆ ಎಸ್ ಅಶ್ವಥ್, ಬಾಲಕೃಷ್ಣ, ಚಿ ಉದಯಶಂಕರ್, ತೂಗುದೀಪ ಶ್ರೀನಿವಾಸ್, ಸುಧೀರ್, ಶಿವಪ್ರಕಾಶ್, ಉಮಾ ಶಿವಕುಮಾರ್ ಮತ್ತಿತರರು.

ಚಿತ್ರದ ಕೆಲವು ಮಾಹಿತಿಗಳು :
💜ನಿದೇ೯ಶನ : ವಿಜಯ್ .
💪ನಿಮಾ೯ಪಕರು : ಎಸ್ ಎ ಶ್ರೀನಿವಾಸ್.
🎶ಸಾಹಿತ್ಯ : ಚಿ ಉದಯಶಂಕರ್.
🌻ಚಿತ್ರಕಥೆ : ಎಂ ಡಿ ಸುಂದರ್.
🎩ಸಂಗೀತ : ಇಳಯರಾಜ.
🐅ಛಾಯಾಗ್ರಹಣ : ಜೆ ಪಿ ಸೆಲ್ವರಾಜ್, ಇ ಎಸ್ ರೆಡ್ಡಿ.
📟ಸಂಕಲನ : ಪಿ ಭಕ್ತವತ್ಸಲಂ.
🎸ಸ್ಟುಡಿಯೋ : ಎ ವಿ ಎಂ.
🐿ವಿತರಕರು : ವಜ್ರೇಶ್ವರಿ ಕಂಬೈನ್ಸ್.

ಡಾ ರಾಜ್ ಕುಮಾರ್ ರವರ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ನಿದೇ೯ಶನ ಮಾಡಿದ ಇಳಯರಾಜ ರವರು.

ಅಣ್ಣಾವ್ರ ಮತ್ತು ಎಸ್ ಜಾನಕಿ ಧ್ವನಿ ಎಲ್ಲಾ ಹಾಡುಗಳೂ ಕೇಳೋಕೆ ಚೆನ್ನಾಗಿದೆ.

“ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ, ನನ್ನಂಥ ಗಂಡಿಂದ ಸೋಲೋಕೆ ಆಸೆಯೆ ನಿನಗೇ…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply