ಅನ್ನದಾತೆ ಸಂಯುಕ್ತ ಹೊರನಾಡು

“ಅನ್ನಂ ಪರಬ್ರಹ್ಮ್ ಸ್ವರೂಪಮ್” ಅನ್ನೊ ಮಾತಿದೇ. ಈ ವಿಪತ್ತಿನ ಸಮಯದಲ್ಲಿ ನೂರಾರು ಸಂಘ ಸಂಸ್ಥೆಗಳು ಮತ್ತು ಸಾಮಾನ್ಯರು ;ಸ್ವಯಂಪ್ರೇರಿತರಗಿ ನಗರದೆಲ್ಲೆಡೆ ಇರುವ ನಿರಾಶ್ರಿತರಿಗೆ ಮತ್ತು ಹಸಿದವರಿಗೆ ನಿತ್ಯವು ಅನ್ನ -ನೀರು ಒದಗಿಸುವ  ಪುಣ್ಯದ ಕಾರ್ಯದಲ್ಲಿ ತೊಡಗಿದ್ದಾರೆ..,” ಜನರ ಹಸಿವಿಗೆ ಉತ್ತರ ಸಿಗುತ್ತಿದೆ” ಆದರೆ  ಮೂಕಪ್ರ್ರಾನಿಗಳ ಗತಿ!!

ನಾವು ತಿನ್ನುವ ಊಟದಲ್ಲಿ ತನಗೂ ಒಂದು ಪಾಲಿದೆ ಎಂದು  ಸಾವಿರಾರು ಮೂಕಪ್ರಾಣಿಗಳು ನಮ್ಮ ಮಧ್ಯೆಯೇ ಜೀವಿಸುತ್ತಿದೆ.

ಈ ಸಂಧರ್ಭದಲ್ಲಿ ಅಂತಹ ಮೂಕ ಜೀವಿಗಳ ಹಸಿವನ್ನ ನೀಗಿಸಿವು ಮಹತ್ವಪೂರ್ಣ ಕೆಲಸದಲ್ಲಿ ತೊಡಗಿದ್ದಾರೆ ನಟಿ ಸಂಯುಕ್ತ ಹೊರನಾಡು, ಏಕಾಭಿಪ್ರಾಯಾ ಉಳ್ಳ ಹಲವು ಸ್ವಯಂ ಸೇವಕರ  ಜೊತೆಗೂಡಿ ದಿನಕ್ಕೆ” 200-250 ರಸ್ತೆ ಬದಿಯ ಶ್ವಾನಗಳಿಗೆ” ಗುಣಮಟ್ಟದ ತಾಜಾ ಆಹಾರ ನೀಡುತ್ತಿದ್ದಾರೆ.ಪ್ಯಾಕಡ್ ಡಾಗ್ ಫುಡ್(ಪೆಡಿಗ್ರಿ) ಜೊತೆಗೆ ಅನ್ನಾ ಹಾಲು,ಚಿಕನ್ ಇಷ್ಟನ್ನು ಮನೆಯಲ್ಲೇ ತಯಾರಿಸಿ,ಎಲ್ಲೆಡೆ ಹಂಚುತ್ತಿದ್ದಾರೆ.

ವಾಟ್ಸಾಪ ಗ್ರೂಪೊಂದರಲ್ಲಿ (ಸಂಯುಕ್ತರ ಸ್ನೇಹಿತರು,ಅಕ್ಕ ಪಕ್ಕದ ಮನೆಯವರು) ಚರ್ಚೆಯಿಂದ ಪ್ರಾರಂಭಗೊಂಡ ಈ ಕೆಲಸ,ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವ್ ಸೂರ್ಯರ ಗಮನಕ್ಕೆ ತಲುಪಿ,ಅವರ ಶ್ಲಾಘನೆ ಮತ್ತು ಬೆಂಬಲ ಎರಡೂ ದೊರಕಿದ್ದು,ಇದೀಗ ಯೋಜನೆ ಮತಷ್ಟು ಹಿರಿಯದಾಗಿದೆ.. ಸೌತ್ ಬೆಂಗಳೂರಿನ ಹಲವು ಜಾಗಗಳಲ್ಲಿ ರಸ್ತೆ ಬದಿಯ ಶ್ವಾನಗಳಿಗೆ ಅನ್ನ ನೀಡುವ ದೊಡ್ಡ ಜಾವಾಬ್ದಾರಿ ನಟಿ ಸಂಯುಕ್ತ ಹೊರನಾಡು ಅವರಿಗೆ ದೊರಕಿದೆ, ಯಾವುದೇ ಅಬ್ಬರದ ಪ್ರಚಾರವಿಲ್ಲದೆ, ಲಾಭ ಅಪೇಕ್ಷಗಳಿಲ್ಲದೆ,ನಿಸ್ಸ್ವಾರ್ಥವಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಅವುಗಳ ಪಾಲಿಗೆ “ಅನ್ನಪೂರ್ಣೆಯಾಗಿದ್ದರೆ ಸಂಯುಕ್ತ ಹೊರನಾಡು’. ಇವರ ಈ ನಡೆ ನಿಲುವುಗಳು ಎಲ್ಲರಿಗೂ ಸ್ಪೂರ್ತಿದಾಯಕ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply