ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಪುನೀತ್ ರಾಜಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲು ಸಿದ್ದವಾಗಿದ್ದಾರೆ. ಯಾವ ರೀತಿಯ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಕುತೂಹಲ ಪ್ರತಿಯೊಬ್ಬ ಅಭಿಮಾನಿಯಲ್ಲೂ ಮೂಡಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಉಣ ಬಡಿಸಿ, ತನ್ನದೇ ಆದ ಹೊಸಾ ಛಾಪು ಮೂಡಿಸಿರುವ ಪವನ್ ಕುಮಾರ್ ಈ ತನಕ ಯಾವುದೇ ಸ್ಟಾರ್ ನಟರಿಗೆ ಸಿನಿಮಾ ಮಾಡಿರಲಿಲ್ಲ, ಕನ್ನಡವಷ್ಟೇ ಅಲ್ಲದೆ ತಮಿಳು ಹಾಗು ತೆಲುಗಿನಲ್ಲಿ ತಮ್ಮದೇ ಸಿನಿಮಗಳನ್ನ ಅಲ್ಲಿಯ ನಟರನ್ನ ಮುಖ್ಯ ಭೂಮಿಕೆಯಲ್ಲಿ ಇರಿಸ್ಕೊಂಡು ನಿರ್ದೇಶಿಸಿದ್ದಾರೆ. ಕಥೆಗೆ ಹೆಚ್ಚು ಒತ್ತು ಕೊಟ್ಟು ಸಿನಿಮಾ ಮಾಡುವುದೇ ಇವರ ಶೈಲಿಯಾಗಿದ್ದು ಮೊದಲ ಬಾರಿಗೆ ಓರ್ವ ದೊಡ್ಡ ಸ್ಟಾರ್ ನಟನಿಗೆ ಕ್ಯಾಮೆರಾ ಇಡಲಿದ್ದಾರೆ… ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೆ ಹೊಂಬಾಳೆ ಸಿನಿಮಾದವರ ಕಾಂಬಿನೇಷನ್ ನಲ್ಲಿ ಎರಡು ಸದಭಿರುಚಿಯ ಸೂಪರ್ ಹಿಟ್ ಸಿನಿಮಾಗಳನ್ನ ಈಗಾಗಲೇ ನೀಡಿದ್ದು, ಇದು ಮೂರನೆಯದು. “ಹ್ಯಾಟ್ರಿಕ್” ಮೋಡಿ ಎಂಬ ಮಾತು ಆಗಲೇ ಕೇಳಿ ಬಂದಿದೆ. ಜುಲೈ 22 ಕ್ಕೆ ಮೂಹರ್ತವಾಗಲಿದೆ. ಸದ್ಯಕ್ಕೆ ಸಿನಿಮಾದ ಹೆಸರು ಇನ್ನು ಹೊರಬಂದಿಲ್ಲ.
Related Posts
ಹಾಸ್ಯ ಚಕ್ರವರ್ತಿ ನರಸಿಂಹರಾಜು
(ಮುಂದುವರೆದ ಭಾಗ) ಈ ಯುಗದಲ್ಲಿ ರಾರಾಜಿಸಲು ಆರಂಭಿಸಿದ ನರಸಿಂಹರಾಜು ೧೯೫೪ ರಲ್ಲಿ ತೆರೆ ಕಂಡ ಬೇಡರ ಕಣ್ಣಪ್ಪ ಚಿತ್ರದಿಂದ ೧೯೭೯ ರಲ್ಲಿ ತೆರೆ ಕಂಡ ಪ್ರೀತಿ ಮಾಡು…
ಸೂರ್ಯವನ್ಶಿ (2021)(ಹಿಂದಿ)- ಮಸಾಲೆ ಮನರಂಜನೆ!
ಸೂರ್ಯವನ್ಶಿ (2001) – ಹಿಂದಿ- ಚಿತ್ರ ವಿಮರ್ಶೆ~~~~~~~~~~~~ ಸದಾ ದೇಶಸೇವೆ ಮಾಡುವ ಪ್ರಾಣ ಪಣಕ್ಕಿಡುವ ವೀರ ಪೋಲೀಸ್ ಅಧಿಕಾರಿಗಳು, ತಮ್ಮ ಕುಟುಂಬದ ಹಿತವನ್ನೇ ಲೆಕ್ಕಿಸದವರು, ಕ್ರೂರ ದೇಶದ್ರೋಹಿ…
ಅಮೇರಿಕ ಅಮೇರಿಕ @ 25
“ನೂರು ಜನ್ಮಕೂ ನೂರಾರೂ ಜನ್ಮಕೂ” ಎಂಬ ಹಾಡು ಕಿವಿಗೆ ಬಿದ್ದೊಡನೆಯೇ ತೊಂಬತ್ತರ ದಶಕದ ಹೃದಯಗಳು ಒಮ್ಮೆ ಝಲ್ ಎನ್ನುತ್ತದೆ. ರಾಜೇಶ್ ಕಂಠದಿಂದ ಬಂದ ಸುಶ್ರಾವ್ಯವಾದ ಹಾಡಿಗೆ ಕಿವಿ…