ಅಭಿನಯ “ಶಾರದೆ” ಜನ್ಮ ದಿನ 🌹

“ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ “💘

ನೋಡೋಕೆ ಸುಂದರವಾಗಿ, ಮೀನಿನಂತ ಕಣ್ಣುಗಳು, ತೊಂಡೆಹಣ್ಣಿನಂತ ತುಟಿಗಳು, ಸಂಪಿಗೆಯಂತ ಮೂಗು, ಸ್ಪುರದ್ರೂಪಿ ಹೆಣ್ಣು, ನಾಯಕಿ, ಅಣ್ಣಾವ್ರ ಜೊತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಪ್ರಖ್ಯಾತಿ ನಟಿ ಅಭಿನಯ ಶಾರದೆ , ಕಮಲ ಕುಮಾರಿ (ಜಯಂತಿ) ರವರಿಗೆ ಜನುಮ ದಿನದ ಶುಭಾಶಯಗಳು 05.01.2021 🌹❤🌺

ಇವರು ಕನ್ನಡ ಭಾಷೆ ಅಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಮರಾಠಿ ಭಾಷೆಯಲ್ಲಿ ನಟಿಸಿ ಪಂಚಭಾಷೆ ತಾರೆ ಎನಿಸಿಕೊಂಡಿದ್ದಾರೆ.

ಇವರ ಚಿತ್ರರಂಗದ ಪಯಣ ಶುರುವಾಗಿದ್ದು ಜೇನುಗೂಡು, ಚಂದವಳ್ಳಿಯ ತೋಟ ಅಣ್ಣಾವ್ರ ಜೊತೆ ನಟಿಸಿದ ಮೊದಲ ಚಿತ್ರ ,ಜೇಡರ ಬಲೆ, ದೇವರ ಗೆದ್ದ ಮಾನವ, ಪರೋಪಕಾರಿ, ಚಕ್ರತೀರ್ಥ, ಕುಲಗೌರವ, ಬೆಟ್ಟದ ಹುಲಿ, ದೇವರ ಮಕ್ಕಳು, ಭಲೇರಾಜ, ಇಮ್ಮಡಿ ಪುಲಿಕೇಶಿ, ಸಿಂಹಸ್ವಪ್ನ, ಕ್ರಾಂತಿವೀರ, ಚೂರಿ ಚಿಕ್ಕಣ್ಣ, ಪುನಜ೯ನ್ಮ, ಪ್ರತಿಜ್ನೆ, ಕಸ್ತೂರಿ ನಿವಾಸ, ಬಹದ್ದೂರ್ ಗಂಡು, ಮಂತ್ರಾಲಯ ಮಹಾತ್ಮೆ, ದೇವರು ಕೊಟ್ಟ ತಂಗಿ, ಬಾಳು ಬೆಳಗಿತು, ಬಾಳ ಬಂಧನ, ಮುರಿಯದ ಮನೆ ಇನ್ನೂ ಮುಂತಾದವು.

ಇವರು ಪುಟ್ಟಣ್ಣ ಕಣಗಾಲ್ ರವರ ನಿದೇ೯ಶನದಲ್ಲಿ ನಾಗರಹಾವು ಚಿತ್ರದ ( ಒನಕೆ ಓಬವ್ವ) ಅತಿಥಿ ಪಾತ್ರ ಮಾಡಿದ್ದಾರೆ, ಮದುವೆಯಾಗಿ ವಿರಹ ವೇದನೆಯ ಘಟನೆಗಳನ್ನು ಸಾರುವ ಚಿತ್ರ “ಎಡಕಲ್ಲು ಗುಡ್ಡದ ಮೇಲೆ ” ಚೆನ್ನಾಗಿ ಅಭಿನಯಿಸಿದ್ದಾರೆ, ಮಸಣದ ಹೂವು ಚಿತ್ರದಲ್ಲೂ ಕೂಡ ನಟನೆ ಮಾಡಿದ್ದಾರೆ .

ಇವರು ಹಲವು ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ, ಆನಂದ್, ಟುವ್ವಿ ಟುವ್ವಿ , ಮುಂತಾದ ಚಿತ್ರಗಳಲ್ಲಿ.

ಶಂಕರ್ ನಾಗ್, ವಿಷ್ಣು ವಧ೯ನ್, ಅನಂತ್ ನಾಗ್, ರಾಜೇಶ್ ಮುಂತಾದ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ, ದೇವರ ದುಡ್ಡು, ಜನ್ಮ ಜನ್ಮದ ಅನುಬಂಧ, ಚಿನ್ನ ನಿನ್ನ ಮುದ್ದಾಡುವೆ, ಬೆಂಕಿ ಬಿರುಗಾಳಿ, ತಾಯಿಗಿಂತ ದೇವರಿಲ್ಲ, ನನ್ನ ದೇವರು, ನಾಗ ಕಾಳ ಭೈರವ ಇನ್ನೂ ಹಲವಾರು.

ಇವರ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ,
🍀ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂವು ರಾಜ್ಯ ಸರ್ಕಾರ ಉತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
🌹ಆನಂದ್, ಟುವ್ವಿ ಟುವ್ವಿ, ಉತ್ತಮ ಪೋಷಕ ನಟಿ ಪ್ರಶಸ್ತಿ.
🍁ಡಾ. ರಾಜ್ ಕುಮಾರ್ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಹರಸಿ ಬಂದಿದೆ.

ಕೊನೆಯ ಮಾತು ಕೆಲವು ಕಲಾವಿದರು ಎರಡು ಮೂರು ಚಿತ್ರ ಮಾಡಿ ನಂತರ ಪರಭಾಷೆಯಲ್ಲಿ ಅವಕಾಶ ಸಿಕ್ಕಿ ನಟಿಸಿ ಪ್ರಸಿದ್ಧರಾದ ಕೂಡಲೇ ತಮ್ಮ ತಾಯಿನಾಡು ಭಾಷೆಯನ್ನು ಮರೆತು ಅಲ್ಲಿನ ಭಾಷೆಗೆ ಹೊಂದಿಕೊಳ್ಳುವ ನಟಿಯರ ಮಧ್ಯೆ ಹಲವು ಚಿತ್ರಗಳಲ್ಲಿ ನಟಿಸಿ ನಮ್ಮ ಕನ್ನಡ ನಾಡಿನಲ್ಲೇ ನೆಲೆಸಿರುವುದು ಅನ್ನ ಕೊಟ್ಟ ನಾಡಿಗೆ ಋುಣ ತೀರಿಸಿದಂತೆ ಅಲ್ಲವೇ…

ದೇವರು ಇವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚು ಸಂತೋಷ ಇವರಿಗೆ ತರಲಿ .

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply