ಅಮ್ಮಚ್ಚಿ ಎಂಬ ನೆನಪು

( ವೈದೇಹಿಯವರ ಮೂರು ಕತೆಗಳ ಆಧಾರಿತ)

ಹೂವಂತೆ ಹುಟ್ಟಿ ಹೂವಂತೆ ಬೆಳೆದು ಹೂವಂತೆ ಬಾಳಲಾರವು…….

ಒಂದು ವೇಳೆ ನೀವು ಮೊಟ್ಟೆಯ ಕತೆಯ ರಾಜ್ ಶೆಟ್ಟಿಯವರನ್ನೇ ಇನ್ನೊಮ್ಮೆ ನೋಡಲು ಹೋದರೆ..ಕ್ಷಮಿಸಿ…ಇದು ನಿಮಗಾಗಿ ಅಲ್ಲ…ಮೊಟ್ಟೆಗಿಲ್ಲಿ( ಬೋಳು ಮಂಡೆ ಕಾಕ ) ಸೀಮಿತ ಪಾತ್ರ..ಅಷ್ಟಾಗಿ ಮನದಲ್ಲುಳಿಯುವುದೂ ಇಲ್ಲ..
ಅದಿರಲಿ…
ಇದು ಮೂವರು ಹೆಣ್ಮಕ್ಕಳ ಕತೆ..
(ವೈದೇಹಿಯವರ ಮೂರು ಬಿಡಿ ಕತೆಗಳ ಸಂಗ್ರಹ)..
ಹೆಣಿಗೆ ಚೆನ್ನಾಗಿದೆ..


ಅಮ್ಮಾಚಿ ತರುಣಿ..ಅಕ್ಕು ಗಂಡ ಬಿಟ್ಟೋದ ನಡು ಪ್ರಾಯಸ್ಥೆ..ಸಮಾಜ ಕಂಡಂತೆ ಹುಚ್ಚಿ.. ಪುಟ್ಟಮ್ಮತ್ತೆ ಇಳಿ ಪ್ರಾಯದವಳು..ಇಲ್ಲಿ ಅಮ್ಮಚ್ಚಿ ಆ ಅಜ್ಜಿಯ ಮೊಮ್ಮಗಳು..ಅವಳಿಗೊಂದು ಸ್ನೇಹಿತೆ..ಸೀತೆ..ಆಕೆ ಕತೆಗಾರ್ತಿ ವೈದೇಹಿ..
ಮೂವರ ಕತೆಗಳು ಭಿನ್ನವಾದರೂ ಪ್ರತಿಯೊಬ್ಬರೂ ಮನೆಯ ಕಿಟಕಿಯೊಳಗೆ ಬಂಧಿ…ಅದರಿಂದವರು ಹೊರಬರಲು ಸಾಧ್ಯವೇ? ಬರುತ್ತಾರೆಯೇ..
ಮೊದಲರ್ಧ ನಿಧಾನ..ಮಧ್ಯಂತರದ ವರೆಗೆ ಏನೂ ಆಗುವುದಿಲ್ಲ…

ಹಾಡು..ಹಾಗೂ ಸಮುದಾಯದ ಪರಿಚಯದಲ್ಲೇ ಚಿತ್ರ ಸಾಗುತ್ತದೆ…ಹಾಗೂ ಸ್ವಲ್ಪ stage drama ದಂತೆ ಭಾಸವಾಗುತ್ತದೆ..
ದೀಪಾವಳಿ ಆಚರಣೆಯನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ..screen time ಸ್ವಲ್ಪ ಜಾಸ್ತಿಯಾಯ್ತೇನೋ…..ಬಲೀಂದ್ರ ಪೂಜೆ..ತುಳಸಿ ಪೂಜೆ..
(ನಮ್ಮದೇ ಬಲೀಂದ್ರನನ್ನು ಮಲಯಾಳಿಗಳು ತಮ್ಮದಾಗಿಸಿಕೊಂಡು ಓಣಮ್ ಎಂಬ ಹಬ್ಬ ಸೃಷ್ಟಿಸಿಕೊಂಡರೆಂಬ ಯಾರದೋ ಬರಹವೊಂದು ಆ ಸಮಯದಲ್ಲಿ ನೆನಪಾಯಿತು)

ಭಾಷೆ ಸಂಪೂರ್ಣ ಕುಂದ ಕನ್ನಡ…ನಮ್ಮ ಮನೆ ಭಾಷೆಯಾದ್ದರಿಂದ ಸಮಸ್ಯೆಯಾಗಿಲ್ಲ…
ಉಳಿದವರಿಗೆ ಕಷ್ಟವಾಗಬಹುದೇನೋ?..
ಆದರೂ..”ತಿಥಿ” ಮಂಡ್ಯದ ಭಾಷೆಯನ್ನೊಳಗೊಂಡಿದ್ದರೂ ನಾವೂ ಇಷ್ಟ ಪಟ್ಟ ಕಾರಣ ಇದೂ ಎಲ್ಲರಿಗೆ ತಲುಪಬಲ್ಲದು ಎಂಬ ಭರವಸೆ..
ಇಲ್ಲಿ ಭಾಷೆ ಮುಖ್ಯವಲ್ಲ..ಏನನ್ನು ಹೇಳಲು ಪ್ರಯತ್ನಿಸಿದ್ದಾರೆ ಎಂಬುವುದೇ ಮುಖ್ಯ..

Rajesh Aithal

Rajesh Aithal

Leave a Reply