ಅವನೇ ಶ್ರೀಮನ್ನಾರಾಯಣ “ಅವತಾರ”

ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ” ಭಕ್ತ ಪ್ರಹ್ಲಾದ “ಚಿತ್ರದ ದೃಶ್ಯ  ನಮ್ಮ ಬಿಗ್ ಬಾಸ್ ಡಾ ರಾಜ್ ಕುಮಾರ್ ರವರ ಜೊತೆ ಪ್ರೀತಿಯ ಪುಟ್ಟ ಪುನೀತ್ ರವರ ಸನ್ನಿವೇಶ ಮೈರೋಮಾಂಚನ 🔥 🔥 🔥

ಎಂದೆಂದಿಗೂ ಅಜರಾಮರ ಚಿತ್ರರಂಗದ ಗಾಡ್ ಫಾದರ್ ನಮ್ ದೇವೃ🙏

ಡಾಕ್ಟರ್ ರಾಜ್ ಅಭಿಮಾನಿಯಾಗಿ  ಹೇಳಿ ಕೊಳ್ಳಲು ಹೆಮ್ಮೆ ಆಗುತ್ತದೆ ವಿಷಯ ರಕ್ಷಿತ್ ಶೆಟ್ಟಿ ಇಂಟರ್ಡಕ್ಷನ್ ಸ್ಕ್ರೀನ್ ನಿಂದ ಈಚೆ ಬರುತ್ತಾರೆ ಇದು ಅಣ್ಣಾವ್ರು ಯಾವಾಗಲೋ ಮಾಡಿ ಆಯ್ತು ಗುರಿ ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು ಅವರನ್ನು ಕೊಲ್ಲಲು ಸ್ಕ್ರೀನ್ ಒಳಗಿಂದ ಅಣ್ಣ ಜಂಪ್ ಮಾಡಿ ಬರುತ್ತಾರೆ  ಈ ಸಿನಿಮಾ ನೋಡಿ ಮಾಡಿರ ಬಹುದು.

 ಪಿ. ವಿ.ಆರ್  ಚಿತ್ರಮಂದಿರದಲ್ಲಿ ವಿಭಿನ್ನ ಕುತೂಹಲ ಕೆರಳಿಸುವ ಕಥೆ ರಕ್ಷಿತ್ ಶೆಟ್ಟಿ ಅಭಿನಯ “ಹ್ಯಾಂಡ್ಸ್ ಅಪ್ ಇದು ಚರಿತ್ರೆ ಸೃಷ್ಟಿಸೊ ಅವತಾರ  “

ಇವನೇ ಶ್ರೀ ಮನ್ ನಾರಾಯಣ ಚಿತ್ರ ನನ್ನ ಕಣ್ಣಲಿ ಕನ್ನಡಲ್ಲಿ:

ಅಪ್ರತಿಮ ಕಥಾ ನಿರೂಪಣ ಶೈಲಿ, ಅತ್ಯಂತ ಅಮೂರ್ತ, ಎಲ್ಲವೂ ಅನಿರೀಕ್ಷಿತ, ಪ್ರತಿಯೊಂದು ಸಣ್ಣ ದೃಶ್ಯ ಒಂದು ಹೊಸ ಪ್ರಾಕಾರ.

ಒಂದು ಹೊಸ ಶೈಲಿಯ ವ್ಯಾಖ್ಯಾನ, ಒಂದು ಗಂಭೀರ ಚಿತ್ರ ಆದರೆ ನಾಯಕ ಎಂದೂ ಗಂಭೀರತೆ ತೊರಲ್ಲ!! ಒಂದು ಹೊಸ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ.. ಅಮೆರಿಕದ cowboy ರೀತಿ ರಾಬಿನ್ ಹುಡ್ ರೀತಿ ಒಂದು ಶೃಷ್ಟಿ ಜೊತೆಗೆ ಅರಮನೆ ರಾಜ ವಂಶದ ರೀತಿ theme ಗಳು,  ಜಾನಪದ ಕಥೆಗಳ ರೀತಿಯ ಜೊತೆಯಲಿ ಈಗಿನ ಜನರ ವೇಷ ಭೂಷಣಗಳನ್ನು ಒಗ್ಗೋ ಯರೀತಿಯಲ್ಲಿ ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡಲಾಗಿದೆ.

ಅತ್ಯದ್ಭುತವಾದ ಯೋಚನೆ, ಪ್ರಬುದ್ಧ ಬರವಣಿಗೆ, ಬಗೆ ಬಗೆಯ ದೃಶ್ಯಗಳ ಬರುವ , ಹೋಗುವ ಚಿತ್ರ ಗಳ ಬೆಸುಗೆ , ಸಂಭಾಷಣೆ ಪೋಣಿಕೆ ಅತ್ಯಂತ ಚಾತುರ್ಯ ವಾಗಿದೆ.

ವೇಷಭೂಷಣಗಳು ಅಷ್ಟೆ ಅಧ್ಬುತ, ಹೊಸತನ ಮತ್ತು ಹಳೆಕಾಲದ ಅಂಶಗಳು ಸೇರಿ ಹೊಸ ನವೀನತೆ ಇಂದ ಕೂಡಿದೆ.ಇಂಥಾ ದುಬಾರಿ ಚಿತ್ರದಲ್ಲಿ ಪೇಮದ ಹಾಡುಗಳು ಇಲ್ಲದಿರುವುದು,

ಹೆಣ್ಣಿನ ವಯ್ಯಾರ, ಬೆಡಗು ಬಿನ್ನಾಣಗಳು ಇಡದಿರುವುದು ಆಶ್ಚರ್ಯವೇ ಸರಿ. ಇಂಥಾ ಭಾರಿ , ದುಬಾರಿ ಚಿತ್ರಗಳಲ್ಲಿ ಈ ಅಂಶಗಳನ್ನು ಬಿಟ್ಟು ಚಿತ್ರ ಮಾಡುವುದು ವಿರಳ.

ಚಿತ್ರದ ಛಾಯಾಗ್ರಾಹಕರ ಹಿಂದೆ ದೊಡ್ಡ ದೊಡ್ಡ ತಲೆಗಳು ಕೆಲಸ ಮಾಡಿವೆ ಎಂಬುದು ಸುಲಭವಾಗಿ ಗೋಚರಿಸುತ್ತದೆ.ಉಗುರು ಕಚ್ಚುವಂತ ದಿಗ್ಭ್ರಮೆ ದೃಶ್ಯಗಳು ಸಾಕಷ್ಟು ಇವೆ.

ಈ ಚಿತ್ರ ವೀಕ್ಷಿಸಲು ಹೊಟ್ಟೆ ತುಂಬಾ ಊಟ ಮಾಡಿ ಹೋಗಿ ಏಕೆಂದರೆ ಚಿತ್ರ 3 ಘಂಟೆಯದು ಆದರೆ ಎಲ್ಲೂ ನೀರಸವಾಗಿ ಇಲ್ಲ!!

ಇದು ಒಂದು ಹೊಸ ಅಧ್ಯಾಯವನ್ನು ತೆರೆಯುತ್ತದೆ ಕನ್ನಡ ಚಿತ್ರ ರಂಗದಲ್ಲಿ. ಈ ಚಿತ್ರ ವನ್ನ  ನೋಡಿ ಆನಂದಿಸಲು, ಜೀರ್ಣಿಸಿಕೊಳ್ಳಲು ಒಂದು ಬೇರೆಯ ಮನಸ್ಥಿತಿಯ ನ್ನೇ ಅಳವಡಿಸಿಕೊಳ್ಳಬೇಕು!

ಮಾಮೂಲಿ ರೀತಿಯ ಚಿತ್ರದ ರೀತಿ ಇದನ್ನು ಪರಿಗಣಿಸುವುದ ಕ್ಕೇ ಆಗುವುದಿಲ್ಲ. ಅಂತ ಅಂಶಗಳು ಇಲ್ಲಿ ಸೂಕ್ಷ್ಮ ಅದ್ದೂರಿ ಕಿತ್ತಾಟದ ದೃಶ್ಯಗಳಲ್ಲಿ ನೋಡಬಹುದು ಅಷ್ಟೆ.

ಕೆಲ ಪ್ರೇಕ್ಷಕರಿಗೆ ಈ ಚಿತ್ರ ಹಿಡಿಸದೆ ಇರಬಹುದು ಏಕೆಂದರೆ ಇದರಲ್ಲಿ ಮಾಮೂಲಿ ಚಿತ್ರಗಳ ಮಸಾಲೆಗಳು ಇಲ್ಲ. ಎಲ್ಲಾ ಹೊಸ ಮಸಾಲೆ!ಈ ಚಿತ್ರದಲ್ಲಿ  ನಿಧಿಯು ಯಾರಿಗೂ ಸಿಗುವುದಿಲ್ಲ… ಆದರೆ ಈ ಚಿತ್ರವು ಗಳಿಕೆಯಲ್ಲಿ ರಾಶಿ ರಾಶಿ ಹಣ, ನಿಧಿ ಸಂಪಾದಿಸಿದೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply