ಸುಮಾರು ೮೦ ವರ್ಷಗಳಿಗಿಂತಲೂ ಅಧಿಕ ಇತಿಹಾಸವನ್ನು ಹೊಂದಿರುವ ಆಸ್ಸಾಮ್ ಚಿತ್ರರಂಗ ಆದರೂ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣದೇ ಇಂದಿಗೂ ಹಿಂದುಳಿದಿದೆ. ಈ ರಾಜ್ಯದಲ್ಲಿ ರೂಪ್ ಕೊನ್ವರ್ ಜ್ಯೋತಿ ಪ್ರಸಾದ್ ಅಗರ್ ವಾಲ್ ಎಂಬ ವ್ಯಕ್ತಿಯು ವಾಸವಾಗಿದ್ದರು.
ಕವಿ, ನಾಟಕಕಾರ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಇವರು ೧೯೩೫ ರಲ್ಲಿ ಚಿತ್ರ ಲೇಖಾ ಮೂವಿ ಟೋನ್ ಲಾಂಛನದ ಅಡಿಯಲ್ಲಿ ಮೊದಲ ಬಾರಿಗೆ ಜೋಯ್ ಮತಿ ಎಂಬ ಅಸ್ಸಾಮಿ ಭಾಷೆಯ ಚಿತ್ರವನ್ನು ನಿರ್ಮಿಸುವುದರ ಮೂಲಕ ಚಿತ್ರ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದರೆ ೨೧ ನೇ ಶತಮಾನದಲ್ಲಿ ಬಾಲಿವುಡ್ ಶೈಲಿಯಲ್ಲಿ ಅಸ್ಸಾಮಿ ಭಾಷೆಯ ಚಿತ್ರಗಳು ತೆರೆ ಕಂಡರೂ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವಷ್ಟು ಈ ಚಿತ್ರರಂಗವು ಬಲಿಷ್ಟವಾಗಿಲ್ಲ. ಈ ಚಿತ್ರರಂಗದ ಕುರಿತು ತಿಳಿದುಕೊಳ್ಳುವ ಇಚ್ಛೆಯಿದ್ದಲ್ಲಿ ರೂಪ್ ಕೊನ್ವರ್ ಜ್ಯೋತಿ ಪ್ರಸಾದ್ ಅಗರ್ ವಾಲ್ ಬರೆದ ಕ್ರಾಂತಿಕಾರಿ ಕನಸಿಗನ ಕೃತಿಗಳನ್ನು ಓದಿದರೆ ತಿಳಿಯುತ್ತದೆ.
ವಿಶೇಷ ಸೂಚನೆ : ನನಗೆ ದೊರೆತ ಅಲ್ಪ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ.