ಆದಶ೯ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

“ಕನಾ೯ಟಕದ ರಾಜ ರಾಣಿ ದೊಡ್ಮನೆ ಆದಶ೯ ದಂಪತಿಗಳು ಜನಪ್ರಿಯ ಮಾದರಿ ಜೋಡಿಗಳು ರಾಜರತ್ನರ ಹೆತ್ತವರು ಮುತ್ತುರಾಜ್ ಹಾಗೂ ಪಾರ್ವತಮ್ಮನವರ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ಪುಟ್ಟಸ್ವಾಮಯ್ಯನವರಿಗೆ ಅಪ್ಪಾಜಿಗೌಡರ ಮಗಳಾದ ಪಾರ್ವತಿಯನ್ನು ಮುತ್ತು ರಾಜರಿಗೆ ತಂದುಕೊಳ್ಳ ಬೇಕೆಂಬ ಆಸೆ ಇತ್ತು …ಪಾರ್ವತಿಯ ನಾಮಕರಣವಾದಗಳೇ ಪುಟ್ಟಸ್ವಾಮಯ್ಯ ಅಪ್ಪಾಜಿ ಗೌಡರ ಮನೆಗೆ ಬಂದು ಮಗುವಿನ ಕೈಯಲ್ಲಿ ಒಂದು ರುಪಾಯಿ ನಾಣ್ಯ ಇಟ್ಟು ..ಇವಳೇ ನನ್ನ ಮಗನ ಹೆಂಡತಿ ಎಂದು ಗೌಡರಿಗೆ ಹೇಳಿದರು.

ಮುತ್ತುರಾಜ್ ಸಂಗೀತ ಕಲಿತಿದ್ದು ಪಾರ್ವತಮ್ಮ ನವರ ಮನೆಯಲ್ಲೇ .ಆಗ ಮುತ್ತು ರಾಜರಿಗೆ ಹತ್ತು ವರ್ಷ, ಪಾರ್ವತಮ್ಮ ಅವರು ಇನ್ನೂ ಮಗು.. ಪಾರ್ವತಮ್ಮನವರಿಗೆ ಹನ್ನೆರಡು ವರ್ಷವಾದಾಗ ಪುಟ್ಟಸ್ವಾಮಯ್ಯನವರು ಮಗನ ಮದುವೆ ಮಾಡಿಬಿಡಬೇಕು ಹೇಗೋ ನಿಶ್ಚಿಯಿಸಿ ಆಗಿದೆ ಎಂದು ಯೋಚಿಸಿದೆರು ..ಅಪ್ಪಾಜಿಗೌಡರಿಗೆ ಪಾರ್ವತಿಗೆ ಇನ್ನೂ ಚಿಕ್ಕ ವಯಸ್ಸು ಹೇಗೋ ಮಾತು ಕೊಟ್ಟಾಗಿದೆ ಮದುವೆ ಮಾಡಿದ ರಾಯಿತು… ಈಗ ಬೇಡ ಎಂಬ ಭಾವನೆ ..ಅದಾಗಲೇ ಪುಟ್ಟಸ್ವಾಮಯ್ಯ ಅವರಿಗೆ ಆರೋಗ್ಯ ಕೆಟ್ಟು ಹಾಸಿಗೆ.ಹಿಡಿದರು..

ಪುಟ್ಟಸ್ವಾಮಯ್ಯನವರಿಗೆ ಪಾರ್ವತಿಯನ್ನು ಸೊಸೆಯಾಗಿ ಕಾಣಬೇಕೆಂಬ ಆಸೆ ಈಡೇರಲಿಲ್ಲ.. ಅವರು ಹೆಚ್ಚು ಕಾಲ ಬದುಕಲಿಲ್ಲ ವಿಧಿವಶರಾದರು ..ಪಾರ್ವತಮ್ಮನ್ನು ಕಂಡರೆ ಪುಟ್ಟಸ್ವಾಮಯ್ಯನವರಿಗೆ ಬಹಳ ಪ್ರೀತಿ “ನನ್ನ ಮಗ ಹತ್ತು ಜನರನ್ನು ಬೇಕಾದರೂ ಮದುವೆಯಾಗಲಿ” ನೀನು ಹನ್ನೊಂದನೆಯವಳಾದರೂ ನೀನೇ ನನ್ನ ಸೊಸೆ “ಎಂದು ಆಕೆಗೆ ಹೇಳುತ್ತಿದ್ದರು ..

ಒಂದು ಸಲ ಗುಬ್ಬಿ ವೀರಣ್ಣ ಹಾಗೂ ಬಿ. ಜಯಮ್ಮ ಅವರಿಗೆ ” ಇವಳೇ ನನ್ನ ಸೊಸೆ” ಎಂದು ಪರಿಚಯಿಸಿದರು.. ಆಗ ಗುಬ್ಬಿ ವೀರಣ್ಣ ಹೇಳಿದರಂತೆ “ನಿನ್ನ ಮಗ ಎಷ್ಟು ಚೆನ್ನಾಗಿದ್ದಾನೆ ಕೆಂಪಗೆ” ಈ ಹುಡುಗಿ ಕರಗಿದ್ದಾಳೆ ..ಅವಳನ್ನು ಅವನಿಗೆ ಹೆಂಗೆ ಮದುವೆ ಮಾಡ್ತೀರಾ” ಅದಕ್ಕೆ ಪುಟ್ಟಸ್ವಾಮಿಯವರು” ಹುಡುಗಿ ಕಪ್ಪಾಗಬಹುದು, ಆದರೆ ಅವಳ ಮನಸ್ಸು ತುಂಬಾ ಸುಂದರ” ಅದಕ್ಕೆ ನನ್ನ ಮಗನಿಗೆ ಮದುವೆ ಮಾಡಿಕೊಳ್ತಾ ಇದ್ದೀನಿ ಎಂದು ಉತ್ತರ ಕೊಟ್ಟರ೦ತೆ..

ಪಾರ್ವತಮ್ಮ ಒಂಬತ್ತನೆ ಕ್ಲಾಸ್ ಮುಗಿಸಿ ಎಸ್ಸೆಸ್ಸೆಲ್ಸಿಗೆ ಬರುವಂತೆ ಸಂದರ್ಭ.. ಇನ್ನೂ ಹದಿನಾಲ್ಕು ವರ್ಷ ತುಂಬಿರಲಿಲ್ಲ.. ಪುಟ್ಟಸ್ವಾಮಿಯವರು ತೀರಿಕೊಂಡಿದ್ದರೂ. ಲಕ್ಷ್ಮಮ್ಮ ಮಗನಿಗೆ “ಮುತ್ತಣ್ಣ ನಿಮ್ಮ ಅಪ್ಪಾಜಿ ನಿನ್ನ ಮದುವೆ ನೋಡಬೇಕು ಅಂತ ಆಸೆ ಇಟ್ಕೊಂಡಿದ್ದೆರು. .ಕಡೆಗೂ ಆಗಲಿಲ್ಲ ನಾನಾದರೂ ನಿನ್ನ ಮದುವೆ ನೋಡ್ತೀನಿ ಬೇಗ ಮದುವೆ ಮಾಡ್ಕೊಂಡು ಬಿಡು” ಎಂದರು …ಮುತ್ತು ರಾಜರಿಗೆ ಅಗ ಬರುತ್ತಿದ್ದ ಸಂಬಳ ತಿಂಗಳಿಗೆ ತೊಂಬತ್ತು ನೂರು ರೂಪಾಯಿ.. ಸಂಸಾರ ನಿಭಾಯಿಸಬೇಕು… ಈಗ್ಲೇ ಬೇಡ ಅಂದರು.. ಆದರೆ ತಾಯಿ ಒತ್ತಾಯ ಮಾಡಿದರು .
ಎಸ್ಸೆಸ್ಸೆಲ್ಸಿ ಆಗಿಬಿಡಲಿ ಎಂದಿದ್ದರೂ ಪಾರ್ವತಿಯವರ ತಂದೆ.. ಕೊನೆಗೆ ಲಕ್ಷ್ಮಮ್ಮ ಹಠ ಹಿಡಿದಾಗ ..
ಪಾವ೯ತಿಯವರೇ ತಂದೆಗೆ ಮದುವೆ ಮಾಡಿಕೊಟ್ಟು ಬಿಡು.. ಎಂದು ಹೇಳಿದರೂ.. ಅತ್ತೆ ಎಂದರೆ ಅವರಿಗೆ ಪ್ರಾಣ ..
ಹುಡುಗ ಬೇರೆ ನಾಟಕವನ್ನು ಈ ಊರು ಆ ಊರು ಅಂತ ತಿರುಗಾಡ್ತಾ ಇದ್ದಾನೆ.. ನಾಳೆ ನಮ್ಮ ಹುಡುಗಿ ಬಾಳು ಹೇಗೋ ಎಂಬ ಭಯ ಅವರಿಗೆ ಇತ್ತು..ಆವರ ತ೦ದಗೆ .ಕೊನೆಗೂ ಹೇಗೋ ಪಾರ್ವತಮ್ಮನವರ ತಂದೆ ಮದುವೆಗೆ ಒಪ್ಪಿದ್ದರು. ೧೯೫೩ (1953)ಜೂನ್25 (೨೪) ರಂದು ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಮುತ್ತುರಾಜ್ ಪಾರ್ವತಮ್ಮ ರವರ ಮದುವೆ ನೆರವೇರಿತು . ಲಕ್ಷ ಮ್ಮನವರ ಆಸೆ ನೆರವೇರಿತು ..ಪಾರ್ವತಿ ಅವರು ವಿವಾಹವಾದ ಮೇಲೆ ಶಾಲೆ ಕಡೆ ಮುಖ ಹಾಕಲಿಲ್ಲ ..ಮದುವೆಯಾಗಿ ಗಾಜನೂರು ಸೇರಿದರು .
..
ಅವರನ್ನು ಪಡೆದದ್ದು “ನನ್ನ ಬಾಳಿನ ಸುಕೃತ “ಎಂದು ಮುಂದೆ ಪಾರ್ವತಮ್ಮನವರು ಹೇಳಿದರೂ ..ಆಕೆಗೆ ಮುತ್ತುರಾಜ್ ರಂಗನಾಟಕಗಳು ಇಷ್ಟವಾದವು.. ಮತ್ತು ರಾಜರ ಮುಂದಿನ ಯಶಸ್ಸಿಗೆ ಪಾವ೯ತಮ್ಮನವರ ನೆರವಾದರು.ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು ಅವರ ರಂಗಭೂಮಿ ಜೀವನಕ್ಕಾಗಿಲಿ.. ಚಲನಚಿತ್ರದ ಕೆಲಸಕ್ಕಾಗಲಿ.. ಯಾವ ಅಡ್ಡಿಯೂ ಬಾರದಂತೆ ಎಲ್ಲವನ್ನು ನೋಡಿಕೊಳ್ಳುತ್ತಾ ಮುತ್ತು ರಾಜರನ್ನು ಅಭಿನಯ ಜಗತ್ತಿನಲ್ಲಿ ವಿಹರಿಸಲು ಬಿಟ್ಟುಕೊಟ್ಟರು ..ಪ್ರತಿಭಾವಂತ ನಟನ ಶ್ರೇಷ್ಠನ ದಮ೯ ಪತ್ನಿ ಆಗಿರುವುದು ತನ್ನ ಏಳೇಳು ಜನ್ಮದ ಪುಣ್ಯ ಎಂದು ಭಾವಿಸಿದರೂ.. ಅಭಿನಯವೇ ಮುತ್ತು ರಾಜರ ಉಸಿರು ಅಭಿನಯವೇ ಅವರು ಚೈತನ್ಯ ಎಂಬುದು ಪಾವ೯ತಮ್ಮ ಕಂಡುಕೊಂಡಿದ್ದರು ಮದುವೆಯಾದ ದಿನದಿಂದಲೂ ಅವರೊಬ್ಬ ಅತ್ಯುನ್ನತ ನಟರಾಗಿ ಬೆಳೆಯಬೇಕೆಂಬ ಕನಸು ಕಂಡರು .ಮುತ್ತು ರಾಜರಿಗೆ ಕೇವಲ ನಟನೆ ಚಿತ್ರಕಥೆ ಅಷ್ಟೇ ಯೋಚಿಸಿಕೊಂಡು ಮುಂದುವರಿಯುವಂತಹ ವಾತಾವರಣವನ್ನು ಸೃಷ್ಟಿಸಿ ಕೊಟ್ಟರೂ, ಸಂಸಾರದ ಕಿಂಚಿತ್ ಕಷ್ಟಗಳನ್ನು ಕೊಡಲಿಲ್ಲ ..ಅಂತ ಧೀರ ದಿಟ್ಟ ಮಹಿಳೆ ನಮ್ಮ ಪಾರ್ವತಮ್ಮನವರು …

ಇವರಿಬ್ಬರ ಮದುವೆ ಹೇಗಾಯ್ತು ಅನ್ನೋದಕ್ಕೆ 25/06/1953/ ಗುರುವಾರ ಮುಹೂರ್ತ ಸಮಯ ಬೆಳ್ಳಿಗೆ 10;30 ರಿಂದ 11:15 ಸಮಯದಲ್ಲಿ ಸಿಂಹ ಲಗ್ನ ದಲ್ಲಿ
ಮುತ್ತುರಾಜ್ ಮತ್ತು ಪಾರ್ವತಮ್ಮ ಇದೇ ನಂಜನಗೂಡಿನ ರಾಣಪ್ಪ ಛತ್ರದಲ್ಲಿ ನೇರವೇರಿತ್ತು…
ಖರ್ಚು ವೆಚ್ಚ 540 ರೂಪಾಯಿ.
ಮುಯ್ಯಿ 45 ರೂಪಾಯಿ ಬಂದಿತ್ತು ಎಂಬಾ ದಾಖಲೆ ಇದೆ …
ಅಣ್ಣಾವ್ರ ಎಷ್ಟು ಸರಳವಾಗಿ ಮದುವೆಯಾದ್ರು ನೋಡಿ…. ನಿಮಗೆ ಗೊತ್ತೇ..
ಮದುವೆ ಪ್ರಿಂಟಿಂಗ್ ಕಾರ್ಡ್ ಮಾಡಿಸಲು ತಗುಲಿದ ವೆಚ್ಚ ನಲವತ್ತೈದು ಪೈಸೆ ಅದು ಕೊಡಲು ಕಾಸಿರಲಿಲ್ಲ ಕೊನೆಗೆ ನಾಗೇಂದ್ರ ರವರು ಉಚಿತವಾಗಿ ಮಾಡಿಕೊಟ್ಟರಂತೆ.

ಈಗಿನ ಕಾಲದಲ್ಲಿ ಆಡಂಭರಕ್ಕೆ ಲಕ್ಷ ಲಕ್ಷ ಖರ್ಚು ದುಂದು ವೆಚ್ಚ ಮಾಡಿ ಮದುವೆ ಮಾಡುವ ಜನರಿಗೆ ಅಂದಿನ ಕಾಲದ ಮದುವೆಯೇ ಒಂದು ಪಾಠ ಇದ್ದ ಹಾಗೆ.

ಸುಖದಲ್ಲಿ ದುಖದಲ್ಲಿ ನೋವಲ್ಲಿ ನಲಿವಲ್ಲಿ ಭಾಗಿಯಾಗಿ ಒಬ್ಬರನ್ನೊಬ್ಬರು ಅಥ೯ ಮಾಡಿಕೊಂಡು ಸಂಸಾರವನ್ನು ತೂಗಿಸಿಕೊಂಡು ಹೋಗುವ ಮಾಗ೯ವನ್ನು ಇಂಥ ಜೋಡಿಗಳನ್ನು ನೋಡಿ ಕಲಿಬೇಕು , ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸಣ್ಣ ಪುಟ್ಟ ಘಟನೆಯನ್ನು ದೊಡ್ಡದು ಮಾಡಿ ಸಂಸಾರ ಇಬ್ಬಾಗವಾದರೆ ಏನು ಬಂತು.. ಸಂಸಾರ ಅಂದ ಮೇಲೆ ಸಣ್ಣ ಪುಟ್ಟ ಜಗಳ, ಮನಸ್ಥಾಪ ಬರೋದು ಸಹಜ ಆದರೆ ಅದನ್ನೇ ಮುಂದುವರಿಸಿಕೊಂಡು ಹೋದರೆ ಕುಟುಂಬ ಸಂತೋಷವಾಗಿ ಇರಲು ಸಾಧ್ಯವೇ…

ಅಣ್ಣಾವೃ ಒಂದು ಕಡೆ ಹೇಳ್ತಾರೆ.. “ಒಳ್ಳೆ ಹೆಂಡತಿ ಸಿಗಬೇಕಾದ್ರೆ ಯೋಗ ಇರಬೇಕು, ನಮ್ಮ ಪುಣ್ಯಕ್ ತಕ್ಕ ಹಾಗೆ, ಪೂಜೆಗ್ ತಕ್ಕ ಹಾಗೆ, ಕಮ೯ಕ್ ತಕ್ಕ ಹಾಗೆ ಒಳ್ಳೆ ಹೆಂಡತಿ ಮಕ್ಕಳು ಸ್ನೇಹಿತೃ ನೆಂಟ್ರು ಎಲ್ರೂ ಸಿಕ್ಕೋದು ” ಈ ಮಾತು ನಿಜ ಅಲ್ವೆ….

ಮತ್ತೊಮ್ಮೆ ಮಗದೊಮ್ಮೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪಾಜಿ ಮತ್ತು ಅಮ್ಮ.

ನಿಜಕ್ಕೂ ನಿಮ್ಮಿಬ್ಬರ ಬಾಂಧವ್ಯ ಅನ್ಯ ದಂಪತಿಗಳಿಗೆ ಮಾದರಿ.

ಈ ಸುದಿನಕ್ಕೆ ಕೆಲ ಸಾಲುಗಳು ನೋಡೋಣ..

ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು, ಭೂಮಿಯೆ ಬಾಯ್ ಬಿಡಲೀ ಇಲ್ಲೆ ನಾ ನಿನ್ನ ಕೈ ಬಿಡೆನು.
ನೀನೆಲ್ಲೋ ನಾನಲ್ಲೆ ಈ ಜೀವ ನಿನ್ನಲ್ಲೆ
ನಾ ನಿನ್ನ ಮರೆಯಲಾರೆ ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೇ ಪ್ರಾಣ ಎಂದೆಂದಿಗೂ

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply