ಗೆಳೆಯ ಶಶಿಕರ ಪಾತುರರದ್ದು ಸಿನಿಮಾ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. ಅವರು ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಜಗತ್ತಿನ ಮೂಲೆ ಮೂಲೆಗಳಿಂದ ಪಾಸಿಟಿವ್ ಸುದ್ದಿಗಳನ್ನು ಹೆಕ್ಕಿ ತಂದು ತಮ್ಮ ಹೊಸ youtube ಚಾನೆಲ್ ಮೂಲಕ ಉಣಬಡಿಸಲಿದ್ದಾರೆ.
ಶಿವ ತನ್ನ ಇಬ್ಬರು ಮಕ್ಕಳಾದ ಗಣೇಶ ಹಾಗು ಸುಬ್ರಹ್ಮಣ್ಯ ರನ್ನು ಪರೀಕ್ಷಿಸಲೋಸುಗ ಯಾರು ಈ ವಿಶ್ವವನ್ನು ಮೊದಲು ಸುತ್ತಿ ಬರುವಿರೋ ನೋಡೋಣ ಎಂದು ಪಂದ್ಯ ಏರ್ಪಡಿಸಿದನಂತೆ. ಸುಬ್ರಹ್ಮಣ್ಯ ನವಿಲೇರಿ ವಿಶ್ವ ಸುತ್ತಲು ಹೊರಟರೆ, ಗಣೇಶ ಶಿವನನ್ನೇ ಒಂದು ಸುತ್ತು ಬಂದು, ನೀನೆ ವಿಶ್ವ. ನಿನ್ನ ಸುತ್ತಿದರೆ ಇಡೀ ವಿಶ್ವವನ್ನು ಸುತ್ತಿದಂತಲ್ಲವೇ? ಎಂದು ಕೇಳಿದ ಕತೆ ನಮಗೆಲ್ಲ ಗೊತ್ತು. ಹಾಗೆಯೇ ಸಿನಿಮಾ ದುನಿಯಾದಲ್ಲಿ ಒಮ್ಮೆ ಸುತ್ತಾಡಬೇಕೆಂದರೆ ನೀವು ಶಶಿಕರ ಪಾತುರರ ಚಾನೆಲ್ ಅನ್ನು ಒಮ್ಮಿ ಸುತ್ತಿ ಬಂದರೆ ಸಾಕು. ಮೂಲೆ ಮೂಲೆಯ ತಾಜಾ ಸುದ್ದಿಗಳ ದರ್ಶನವಾಗುವುದು ಪಕ್ಕಾ..
ಪಾಸಿಟಿವ್ ಪಿಕ್ಚರ್ youtube ಚಾನೆಲ್ ಬೃಹತ್ ಹೆಮ್ಮರವಾಗಿ ಬೆಳೆಯಲಿ ಎಂದು ಚಿತ್ರೋದ್ಯಮ.ಕಾಂ ತಂಡದ ಹಾರೈಕೆಗಳು…