ಇಂತಿ ನಿಮ್ಮ ಆಶಾ

ಗುಬ್ಬಿ ವೀರಣ್ಣ ಅವರ ಮಗಳ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಗೊತ್ತಿದೆಯೇ?

 ಗುಬ್ಬಿ ವೀರಣ್ಣ ಅವರ ಹೆಸರು ಕೇಳಿದರೆ ನಮಗೆಲ್ಲರಿಗೂ ನೆನಪಾಗುವುದು ಗುಬ್ಬಿ ವೀರಣ್ಣ ನಾಟಕ ಸಂಸ್ಥೆಯಾಗಿದೆ. ಕನ್ನಡದಲ್ಲಿ ಎಷ್ಟು ಚಲನಚಿತ್ರಗಳು ನಾಟಕಗಳು, ನಾಯಕ ನಾಯಕಿಯರಿಗೆ ಗುಬ್ಬಿವೀರಣ್ಣ ಸಂಸ್ಥೆಗೆ ಆಶ್ರಯ ದಾರಿಯಾಗಿದೆ.


 ಗುಬ್ಬಿ ವೀರಣ್ಣ ಅವರ  ಮೂರನೆಯ ತಲೆಮಾರು ಅಂದರೆ ಅವರ ಮೊಮ್ಮಗಳು ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಎಂದು  ತಿಳಿದುಕೊಳ್ಳುವ ಆತಂಕ ನಿಮಗಿದೆಯೇ? ಹಾಗಿದ್ದರೆ ಈ ಲೇಖನವನ್ನು ಓದಿ!

 ಗುಬ್ಬಿ ವೀರಣ್ಣ  ಅವರ ಮೊಮ್ಮಗಳು ಕನ್ನಡದ  ಹಲವಾರು ನಾಯಕಿ ನಾಯಕರ ಜೊತೆಯಲ್ಲಿ ಪೋಷಕ ನಟಿ ಪಾತ್ರದಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಇಂತಿ ನಿಮ್ಮ ಆಶಾ   ಧಾರಾವಾಹಿಯ ಮುಖ್ಯಪಾತ್ರ ಭೂಮಿಕೆಯಲ್ಲಿ ನಟಿಸುತ್ತಿರುವ ಅವರು ಯಾರು ಗೊತ್ತಿಲ್ಲ ಹೇಳಿ ಅವರೇ ನಮ್ಮ್ ನೆಚ್ಚಿನ ಮುದ್ದು ಮುಖದ ಚಲುವೆ ಶ್ರೀಮತಿ. ಸಂಗೀತ

1. ಬಾಲನಟಿಯಾಗಿ ನೀವು ಮಾಡಿದ  ಧಾರಾವಾಹಿ ನಾಟಕಗಳು ಯಾವುವು?  ಬಾಲನಟಿಯಾಗಿ ನಾನು ಹಲವಾರು ನಾಟಕಗಳಲ್ಲಿ ಪಾತ್ರ ಮಾಡಿದ್ದೇನೆ ತಾಯಿಯ  ಮಡಿಲು,ಸಮಯದಗೊಂಬೆ, ಮಾಲ್ಗುಡಿ ಡೇಸ್, ಹಾಲು ಜೇನು, ದಂಡಪಿಂಡಗಳು, ನೀ ನನ್ನ ಗೆಲ್ಲಲಾರೆ  ಹೀಗೆ ಹಲವರು ಚಿತ್ರಗಳಲ್ಲಿ ಪಾತ್ರ ಮಾಡಿದ್ದೇನೆ.

2.  ದರ್ಶನ್, ಯಶ್, ಸುದೀಪ್ ಅವರ ಅಕ್ಕ, ಅತ್ತಿಗೆ ಯಾಗಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೀರಾ  ಅದರ ಬಗ್ಗೆ ನಿಮ್ಮ ಅನಿಸಿಕೆ ಏನು? ಸುದೀಪ್ ಯಶ್ ಅವರ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಹಾಗೂ ಅಕ್ಕ ಮತ್ತು ಅತ್ತಿಗೆಯ  ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನನಗೆ ತುಂಬಾ ಸಂತೋಷವನ್ನು ತರುತ್ತದೆ.

3. ಇಂತಿ ನಿಮ್ಮ ಆಶಾ ದಾರವಾಹಿ ಪಾತ್ರದ ಬಗ್ಗೆ ನಿಮ್ಮ್ಅ ನಿಸಿಕೆ ಏನು? ಇಂತಿ ನಿಮ್ಮ  ಆಶಾ ಇದು ಒಂದು ಕೌಟುಂಬಿಕವಾದ ಧಾರಾವಾಹಿ ಆಗಿತ್ತು. ತಾಯಿ-ಮಕ್ಕಳ ಜೀವನಕ್ಕಾಗಿ ಗಿ ಹೇಗೆ ಕಷ್ಟಪಡುತ್ತಾಳೆ ಮತ್ತು ಮಕ್ಕಳನ್ನು ಹೇಗೆ  ಬೆಳಸುತ್ತಾಳೆ  ಮತ್ತು ಮಕ್ಕಳ ಆಸಕ್ತಿ,ಶ್ರದ್ಧೆ ಅವರ ವಿಚಾರಗಳನ್ನು ಹೇಗೆ ಅರಿತುಕೊಳ್ಳುತ್ತಾರೆ ಎಂಬುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ ಮಹಿಳಾಯ ಒಂದು ಸ್ಥಾನಮಾನವನ್ನು ಕೂಡ ಇಲ್ಲಿ ತಿಳಿಸಲಾಗಿದೆ ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಧಾರವಾಹಿ ಸಾಕ್ಷಿಯಾಗಿದೆ.

4. ನಿಮ್ಮ್ಚ ಮುಂದಿನ ಚಲನಚಿತ್ರ  ಅಥವಾ  ಧಾರಾವಾಹಿ ಯಾವುದು? 0ಓ ಮೈ ಲವ್  ಚಿತ್ರದಲ್ಲಿ ಶ್ರೀಯುತ ಎಸ್. ನಾರಾಯಣ ಅವರ  ಜೊತೆಗೆ  ಪೋಷಕ ನಟಿಯಾಗಿ ಭಾಗವಹಿಸಿ ಅಭಿಯಾಸುತ್ತಿದ್ದೇನೆ 

5 ಇದುವರೆಗೂ ನೀವು ಎಷ್ಟು  ಸಿನಿಮಾಗಳು ಮತ್ತು ಧಾರವಾಹಿಗಳಲ್ಲಿ ನಟಿಸಿದ್ದೀರಿ? ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳು ಮತ್ತು ನಾಟಕಗಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ ಇಂತಿ ನಿಮ್ಮ ಆಶಾ ಮತ್ತು ಉದಯವಾಣಿಯಲ್ಲಿ ಸೇವಂತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ

6. ನೀವು ನಟನೆ ವೃತ್ತಿಯಲ್ಲಿ ಇರದಿದ್ದರೆ ಏನಾಗಬೇಕೆಂದು ಬಯಸಿದ್ದೀರಿ? ನಾನು ನಟನಾ ವೃತ್ತಿಯಲ್ಲಿ ಇರದಿದ್ದರೆ ಸಮಾಜ ವಿಜ್ಞಾನದ ಶಿಕ್ಷಕಿಯಾಗಬೇಕೆಂಬ ಬಯಸಿದೆ.

7. ನಿಮ್ಮದು ಒತ್ತಡದ ಒಂದು ಬದುಕು ಹಾಗಾದರೆ ನಿಮ್ಮ ವೃತ್ತಿಯಲ್ಲಿ ನಿಮ್ಮ ಪೋಷಕರ ಪಾತ್ರ ಯಾವ ರೀತಿಯಲ್ಲಿದೆ ಮತ್ತು ನಿಮಗೆ ಹೇಗೆ ಸಹಕಾರ ನೀಡುತ್ತಿದ್ದಾರೆ? ಹೌದು ನನ್ನದು ಒತ್ತಡದ ಬದುಕು. ನಮ್ಮ ಮನೆಯಲ್ಲಿ ಎಲ್ಲರೂ ಅಂದರೆ ಪತಿ ಮತ್ತು ಮಕ್ಕಳು ಕೂಡ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ.

8.  ಯಶಸ್ಸು ಎಂದರೇನು ಪ್ರಕಾರ ಏನು? ಯಶಸ್ಸು ಸುಲಭವಾಗಿ ದೊರೆಯುವುದು ಅಲ್ಲ. ಅದನ್ನು ಸಾಕಷ್ಟು ಕಷ್ಟ ಪಟ್ಟು ಶ್ರಮವಹಿಸಿ ಪಡೆಯಬೇಕು ಯಾವುದೇ ವೃತ್ತಿಯಲ್ಲಿ  ಇದ್ದರೂ ಕೂಡಾ ಶ್ರದ್ಧೆ  ಮತ್ತು ಸಂಯಮದಿಂದ ಕೆಲಸ ಮಾಡಿದಾಗ ತಂತಾನೇ ಬರುತ್ತದೆ ಎಂದಿದ್ದಾರೆ ಸಂಗೀತ ಅವರು.

9. ಪ್ರಸ್ತುತ ನಟ-ನಟಿಯರಿಗೆ ಏನು ಸಲಹೆ  ಏನು? ಯಾವುದೇ ಕೆಲಸವನ್ನಾದರೂ ಕೂಡ ಶ್ರದ್ಧೆಯಿಂದ ಮಾಡಬೇಕು.  ಅದ್ಭುತ ಯಶಸ್ಸನ್ನು ಪಡೆಯಬೇಕು ಮತ್ತು ಯಶಸ್ಸು ಸಿಕ್ಕಾಗಲೂ ಕೂಡ ಅದನ್ನು ಅತಿ ಹೆಚ್ಚು ಸಂಭ್ರಮದಿಂದ ಅನುಭವಿಸದೆ ಮತ್ತು ಸೋತಾಗಲೂ ತೀರ ಕೆಳಮಟ್ಟಕ್ಕೆ  ಹೋಗದೆ ಸಮಾನವಾಗಿ ಹಂಚಿಕೊಳ್ಳಬೇಕು ಎಂದಿದ್ದಾರೆ

10. ಗುಬ್ಬಿ ವೀರಣ್ಣ  ಕಂಪನಿ ಎಂದಾಗ ನಮಗೆ ನೆನಪಾಗುವುದು ಏನು? ವೀರಣ್ಣನವರು ನಮ್ಮ ತಾತ. ಅವರ ಮೊಮ್ಮಗಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.


 ಹೀಗೆ ಇನ್ನೂ ಆಸಕ್ತಿಕರವಾದ ಅಂತಹ ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಚಿತ್ರೋದ್ಯಮ ವೆಬ್ಸೈಟ್ನಲ್ಲಿ ನೋಡಬಹುದು. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಸಂಗೀತ ಅವರ ಜೊತೆಗಿನ ಮಾತುಕತೆ ನಮಗೆಲ್ಲರಿಗೂ ಇಷ್ಟವಾಗಿದೆ ಎನಿಸುತ್ತದೆ ಮುಂದಿನ ದಿನಗಳಲ್ಲಿ ಮತ್ತೆ ನಿಮ್ಮೊಂದಿಗೆ ಹೊಸ ವಿಷಯದೊಂದಿಗೆ ಬರುತ್ತೇನೆ ನಿಮ್ಮೆಲ್ಲರ ಪ್ರೀತಿಯಿಂದ……

Vidyashree

Vidyashree

One thought on “ಇಂತಿ ನಿಮ್ಮ ಆಶಾ

Leave a Reply