ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್( ಟೋಪಿ) ಹಾಕಿದ್ರೆ, ಅದಕ್ಕಿರೊಗಮ್ಮತ್ತೇಬೇರೆ. ಅವರೆ ನಟಿಸಿ, ನಿರ್ದೇಶಿಸಿರುವ ಸಿನಿಮಾಗಳಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. A, ಉಪೇಂದ್ರ ಉಪೇಂದ್ರ-2 ಹಾಗು ಸೂಪರ್ ಸಿನಿಮಾಗಳನ್ನ ಕಂಡು ಇಡಿ ಭಾರತೀಯ ಚಿತ್ರರಂಗವೇ ಶ್ಲಾಘಿಸಿದೆ. ಮತ್ತೆ ಉಪೇಂದ್ರ ಡೈರೆಕ್ಟರ್ ಕ್ಯಾಪ್ ಹಾಕಿ ಹೊಸ ಸಿನಿಮಾ ಮಾಡಲು ಚಿಂತಿಸುತ್ತಿದ್ದಾರೆ.
ರಾಜಕೀಯ ಬೇಡ ಪ್ರಜಾಕೀಯ ಬೇಕು ಅನ್ನೋ ಸಂದೇಶವನ್ನು ರವಾನಿಸಿದ್ರು ಅವರ “ಸೂಪರ್” ಚಿತ್ರದಲ್ಲಿ.ಸದ್ಯಕ್ಕೆ ಉಪೇಂದ್ರ ಒಬ್ಬ ನಟ ಮಾತ್ರವಲ್ಲ ಒಬ್ಬ ರಾಜಕಾರ್ಣಿಯು ಕೂಡ. ಸಾಮಾಜಿಕ ಕಥೆ ಆಧಾರಿತ ಸಿನಿಮಾ ತಯಾರು ಮಾಡುವುದಾಗಿ ತಿಳಿದು ಬಂದಿದೆ.ಈ ಬಾರಿ ಉಪೇಂದ್ರ ಅವರು ಪ್ರೇಕ್ಷಕರಿಗೆ ಸಿನಿಮಾ ಮಾಡಲ್ಲ ಬದಲಿಗೆ ರಾಜ್ಯದ ಪ್ರಜೆಗಳಿಗೆ ಅರಿವು ಮೂಡಿಸುವ ಸಿನಿಮಾ ಮಾಡ್ತಾರೆ…
ರಿಯಲ್ ಸ್ಟಾರ್ ಉಪೇಂದ್ರ ಅವರು ಎಲ್ಲೇ ಹೋದರು ಅಭಿಮಾನಿಗಳು ಕೇಳುವ ಸಾಮಾನ್ಯ ಪ್ರಶ್ನೆಯಂದರೆ ” ಅಣ್ಣ ನೀವು ಮಾತ್ತೇ ಯಾವಾಗ ಡೈರೆಕ್ಟ್ಮಾಡ್ತೀರಾ”?
ಅದಕ್ಕೆ ಅವರ ಉತ್ತರ ಅವರ ಸಿನಿಮಾದ ರೀತಿಯಲ್ಲೆ ಸ್ವಲ್ಪ ಗೊಂದಲವಾಗಿಯೇ ಇರುತ್ತದೆ . ” ಕಾದು ನೋಡಿ”