ಇರ್ಫಾನ್ ಇನ್ನು ಮುಗಿದ ಅಧ್ಯಾಯ!

ಬಾಲಿವುಡ್ನ ಪ್ರತಿಭಾವಂತ ಕಲಾವಿದ”ಇರ್ಫಾನ್ ಖಾನ್” ಇಂದು ಬೆಳೆಗ್ಗೆ ವಧಿವಶರಾಗಿದ್ದರೆ. 3 ವರ್ಷಗಳಿಂದ ಟರ್ಮಿನಲ್ ಕ್ಯಾನ್ಸರ್ ವ್ಯಾದಿಯಿಂದ ನರಳುತ್ತಿದ್ದರು. ಕೊಲೊನ್ ಇನ್ಫೆಕ್ಷನ್ ಕಾರಣ 4 ದಿನದಿಂದ ಚಿಕಿತ್ಸೆ ಪಡಿಯುತ್ತಿದ್ದರು,ದುರದೃಷ್ಟವಶಾತ ಅದು ಫಲದಾಯಕವಾಗಲಿಲ್ಲ.

ಪತ್ನಿ ಸುತಪ ಸಿಕಂದರ್ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ

 ಹಿಂದಿ ಅಷ್ಟೇ ಅಲ್ಲದ ಹಾಲಿವುಡ್ ಸಿನಿಮಗಳಲ್ಲೂ ಗಮನ ಸೆಳೆಯುವ ಪಾತ್ರಗಳನ್ನು ಮಾಡಿ ಅದಕ್ಕೆ ಪ್ರೇಕ್ಷಕರ ಮೆಚ್ಚುಗ್ಗೆ ಮತ್ತು ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದರು.

1998 ರಲ್ಲಿ “ಸಲಾಂ ಮುಂಬೈ” ಅನ್ನೋ ಸಿನಿಮಾದಿಂದ ಚಿತ್ರರ0ಗಕ್ಕೆ ಪ್ರವೇಶಿಸಿ ಸುಮಾರು 75 ವಿವಿಧ ಬಗೆಯ ಚಿತ್ರಗಳಲ್ಲಿ,ವಿಭಿನ್ನ ಬಗೆಯ ಹಲವು ಕ್ಲಿಷ್ಟ ಪಾತ್ರಗಳನ್ನು ಸರಳವಾಗಿ ನಿಭಾಯಿಸಿದ ಪ್ರಗನ್ಯಾವಂತ ನಟ “ಇರ್ಫಾನ್ ಖಾನ್”. ಯುವ ಪ್ರತಿಭೆಗಳಿಗೆ,ನಿರ್ದೇಶಕರಿಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು .

ಇವರು ಅಭಿನಯದ ಪ್ರಮುಖ ಸಿನಿಮಾಗಳೆಂದರೆ “ಸ್ಲಮ್  ಡಾಗ್ ಮಿಲ್ಲಿಯನೇರ”, ಲೈಫ್ ಇನ್ ಎ ಮೆಟ್ರೋ, ಲೈಫ್ ಆಫ್ ಪೈ, ಲಂಚ್ ಬೋಕ್ಸ್, ಹಿಂದಿ ಮೀಡಿಯಂ,ಪಾನ್ ಸಿಂಗ್ ತೋಮರ್,ತಲ್ವಾರ್ ಮತ್ತು ಮಕಬೂಲ್.

ಇವರ ಕಲಾ ಸೇವೆ ಗುರುತಿಸಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ನೀಡಿಲಾಗಿತ್ತು ಹಾಗು 10ಕ್ಕು ಹೆಚ್ಚು ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಲಿದೆ..

ಇವರು ನಟಿಸಿದ ಕಡೆಯ ಚಿತ್ರ “ಅಂಗರೇಜಿ ಮೀಡಿಯಂ”2 ತಿಂಗಳ ಕೆಳಗಷ್ಟೇ  ಬಿಡುಗಡೆಯಾಗಿ, ಎಲ್ಲರ ಶಾಭಾಷಗಿರು ಪಡೆದಿತ್ತು.

ಹಾಸ್ಯಕ್ಕೂ ಸೈ, ವಿಲ್ಲನ್ನಾಗೂ ಸೈ,ಪೋಷಕ ಪಾತ್ರಕ್ಕೂ ಸೈ.. ಏನೇ ಪಾತ್ರ ನೀಡಿದರು ಅದಕ್ಕೆ ನ್ಯಾಯ ತುಂಬುವ ನಟ ಇಂದು ಚಿತ್ರರಂಗಕ್ಕೆ ಅಷ್ಟೇ ಅಲ್ಲ ಜಗತ್ತಿಗೆ ‘ಗುಡ್ ಬೈ’ ಹೇಳಿದ್ದಾರೆ…

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply