ಈಗಿನ ಮಕ್ಕಳಿಗೆ ಇಂಥ ಶಿಕ್ಷಕರು ಅವಶ್ಯಕ –ದ್ರೋಣ

ಈಗಿನ ಶಿಕ್ಷಣ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ ಹೊಸ ನಿದೇ೯ಶಕರು ” ಪ್ರಮೋದ್ ಚಕ್ರವರ್ತಿ” ರವರು, ಸಕಾ೯ರಿ ಶಾಲೆಯನ್ನು ಕಡೆಗಾಣಿಸುವ ಜನಗಳಿಗೆ ತಕ್ಕ ಉತ್ತರ ಈ ಚಿತ್ರದಲ್ಲಿದೆ, ಸಕಾ೯ರಿ ಶಾಲೆ ಯಾವ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ, ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದು “ದ್ರೋಣ” ಚಿತ್ರದಲ್ಲಿ ತೋರಿಸಿದ್ದಾರೆ.

“🔥ಚಿತ್ರದ ಬಜೆಟ್ ಮುಖ್ಯವಲ್ಲ ಅದರಲ್ಲಿರೊ ಕಂಟೆಂಟ್ ಮುಖ್ಯ”

ಗುರು ಪಾತ್ರ ಮಾಡಿರುವ ” ಶಿವಣ್ಣ” ನಿಜಕ್ಕೂ ಗುರುನೇ, ಶಿಕ್ಷಕರಾಗಿ ಮಕ್ಕಳಿಗೆ ವಿದ್ಯೆಯಲ್ಲಿ ಆಸಕ್ತಿ ಬರುವ ಹಾಗೆ ಮತ್ತು ವಿದ್ಯೆ ಮಾತ್ರವಲ್ಲದೆ ಆಟದಕಡೆಗೆ ಗಮನ ಬರುವ ಹಾಗೆ, ಮಕ್ಕಳಲ್ಲೂ ತುಂಬಾ ಕನಸುಗಳಿವೆ ಎಂದು ತೋರಿಸಿಕೊಡುವ ಪ್ರಯತ್ನ, ತುಂಬಾ ಮೊಂಡರಾಗಿರುವ, ತಮಗಿಷ್ಟ ಬಂದ ಹಾಗೆ ಕಾಲ ಕಳೆಯುವ ವಿದ್ಯಾಥಿ೯ಗಳನ್ನು ಸರಿದಾರಿ ತರುವ ಪ್ರಯತ್ನ, ಓದಿನ ಸಮಯದಲ್ಲಿ ಓದುವುದು ಬಿಟ್ಟು ಹದಿಹರಯದ ಆಯಸ್ಕಾಂತಕ್ಕೆ ಒಳಗಾಗುವುದರಿಂದ ಮುಂದಿನ ಜೀವನ ಹೇಗೆ ಆಗುವುದು ಎಂದು ತಿಳಿಸುವ ಮತ್ತು ಶಿಕ್ಷಣದಲ್ಲಿ ಮುಂದೆ ಬರುವುದಕ್ಕಾಗಿ ಹಲವಾರು ಮಾಗ೯ಗಳು ನಿಜಕ್ಕೂ ನಿದೇ೯ಶಕರ ನಿದೇ೯ಶನ ಶೈಲಿ ಮೆಚ್ಚತಕ್ಕದ್ದು.

“ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತರಾಗಿ ನೋಡುವ ಚಿತ್ರ ಉತ್ತಮ ಸಂದೇಶವಿದೆ”.

ಕನ್ನಡ ಚಿತ್ರಗಳನ್ನು ಚಿತ್ರ ಮಂದಿರದಲ್ಲಿ ನೋಡಿ, ನಿಮಾ೯ಪಕರು ತುಂಬಾ ಕಷ್ಟ ಮತ್ತು ಇಷ್ಟ ಪಟ್ಟು ಚಿತ್ರ ತೆಗೆದಿದ್ದಾರೆ, ಅವರಿಗೂ ಪ್ರೋತ್ಸಾಹ ನೀಡಿ”.

ಹೆಚ್ಚಾಗಿ ಶಾಲಾ ಮಕ್ಕಳು ಈ ಚಿತ್ರವನ್ನು ವೀಕ್ಷಿಸಬೇಕು ,ಜೊತೆಗೆ ತಂದೆ ತಾಯಿಗಳು ಕೂಡ ಒಮ್ಮೆ ನೋಡಿದರೆ ಶಿಕ್ಷಣ ಎಷ್ಟು ಮುಖ್ಯ ಎಂದು ತಿಳಿಯುವುದು. ಶಾಲಾ ಶಿಕ್ಷಕರು ಸಹ ತಮ್ಮ ವಿಧ್ಯಾರ್ಥಿಗಳಿಗೆ ಈ ಚಿತ್ರ ತೋರಿಸಿ 🙏

“ರಂಗಾಯಣ ರಘು “ರವರ ಹೆಡ್ ಮಾಸ್ಟರ್ ಪಾತ್ರ ಪ್ರಶಂಸನೀಯ. ಹಿಂದಿ ಚಿತ್ರದ ನಟ “ಕಿಶನ್” ರವರು ಖಳನಾಯಕ  ಪಾತ್ರಕ್ಕೆ ತಕ್ಕ ಹಾಗೆ ಅಭಿನಯ.

“ಇನಿಯ” ಶಿವಣ್ಣ ರವರ ಮಡದಿಯಾಗಿ ಮತ್ತು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲುವ ಪಾತ್ರ ಮೆಚ್ಚುಗೆ ಗಳಿಸುವುದು.

ಡ್ರಾಮಾ ಜೂನಿಯರ್ಸ್ ಕಲಾವಿದ “ಮಹೇಂದ್ರ ” ಪಾತ್ರ ಇಷ್ಟ ಪಡುವಂತದು.

ಚಿತ್ರದಲ್ಲಿ ಹೊಸ ಪ್ರತಿಭೆಗಳು 2 ವಿಧ್ಯಾಥಿ೯ಗಳು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿವ೯ಹಿಸಿದ್ದಾರೆ, ಅವರಿಗೆ ಒಳ್ಳೆಯದಾಗಲಿ.

ನೂತನ ಸಂಗೀತ ನಿರ್ದೇಶಕರು “ರಾಮ್ ಕ್ರಿಷ್” ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply