ರಿಯಲ್ ಸ್ಟಾರ್ ಉಪೇಂದ್ರ (Upendra) ರವರ ಬಹುನಿರೀಕ್ಷಿತ ಚಿತ್ರ UI ಚಿತ್ರತಂಡದ ಜೊತೆಗೆ ಮತ್ತೊಬ್ಬ ನಟಿಯ ಸೇರ್ಪಡೆಯಾಗಿದೆ. ಹಾಗಂತ ಉಪ್ಪಿ ಜೊತೆ ಈ ನಟಿ ನಟಿಸುತ್ತಿರುವುದು ಇದೆ ಮೊದಲೇನಲ್ಲ. ಆ ನಟಿ ಮತ್ತಾರೂ ಅಲ್ಲ – ಈಗಾಗಲೇ ಉಪ್ಪಿ 2, ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ಉಪ್ಪಿ ಜೊತೆ ನಟಿಸಿದ್ದ ಬೆಡಗಿ ಶ್ರುತಿ ನಂದೀಶ್. ಕನ್ನಡ, ತಮಿಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಈಗಾಗಲೇ ಶ್ರುತಿ ನಂದೀಶ್ ಬಣ್ಣ ಹಚ್ಚಿದ್ದಾರೆ.
ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaih), ಸಹ ಕಲಾವಿದರಾಗಿ ನಿಧಿ ಸುಬ್ಬಯ್ಯ, ನೀತು ವನಜಾಕ್ಷಿ ನಟಿಸಲಿದ್ದಾರೆಂದು ಹೇಳಲಾಗುತ್ತಿರುವ ಈ ಚಿತ್ರಕ್ಕೆ ಶ್ರುತಿ ನಂದೀಶ್ ಕೂಡ ಆಯ್ಕೆಯಾಗಿರುವುದು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.