ಉಪ್ಪಿ ಕಬ್ಜಾ ಮಾಡ್ತಾರೆ!!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆರ್ ಚಂದ್ರು ನಿರ್ದೇಶನದ ಬಹುಕೋಟಿ ವೆಚ್ಚದ “ಕಬ್ಜಾ” ಸಿನಿಮಾದ ಶೂಟಿಂಗ್ ಡಿಸೆಂಬರ್ 20 ನೇ ತಾರೀಖಿನಿಂದ ಪುನರಾರಂಭಗೊಳ್ಳಲಿದೆ. ಕಬ್ಜಾ ಒಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಭಾರತದ 9 ವಿವಿಧ ಭಾಷೆಗಳಲ್ಲಿ ಸಿನಿಮಾ ಹೊರಬರಲಿದೆ. ಕೋವಿಡ್ 19ನಿಂದ ಬಳಲುತ್ತಿದ ಕಾರಣ ನಿರ್ದೇಶಕ ಆರ್ ಚಂದ್ರು ಅವರು ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣ ಕೆಲಸದಲ್ಲಿ  ತೊಡಗಲಿದ್ದಾರೆ.ಈ ದೇಶ ಕಂಡ ದೊಡ್ಡ ದೊಡ್ಡ ಭೂಗತ ಲೋಕದ ಅಧಿಪತಿಗಳ ಇತಹಾಸವನ್ನ ತೆರದಿಡುವ ಪ್ರಯತ್ನವನ್ನ ಈ ಸಿನಿಮಾ ಮಾಡುತ್ತೆ.

ಓಂ ಮತ್ತು ಓಂಕಾರದಂತಹ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದ ಉಪೇಂದ್ರ ಅವರ ಅನುಭವ ಧಾರೆ ಈ ಸಿನಿಮಾಗೆ ಇದ್ದೆ ಇರುತ್ತದೆ ಅನ್ನುವ ಗಟ್ಟಿ ನಂಬಿಕೆ ಪ್ರೇಕ್ಷಕನಿಗಿದೆ. 3 ವಿವಿಧ ಕಾಲಘಟ್ಟದಲ್ಲಿ ಜರಗುವ ಕಥೆ ಇದಾಗಿದ್ದು ಇಲ್ಲಿ ಮುಷ್ಟಿ, ಮಚ್ಚು ಮತ್ತೆ ಮಷಿನ್ ಗನ್ ಇರುತ್ತೆ ಜೊತೆಗೆ 3 ನಾಯಕಿಯರನ್ನ ಕಾಣಬಹುದು. ರವಿ ಬಸ್ರೂರ್ ಸಂಗೀತವಿದೆ.

ಕನ್ನಡ ಸಿನಿಮಾಗಳಲ್ಲಿ ಹೊಸ ಪ್ರಯತ್ನಗಳಿಗೆ, ಸಾಹಸಕ್ಕೆ ನಾಂದಿ ಹಾಡಿರುವ ಉಪೇಂದ್ರ  ಅವರು ಇದೀಗೆ ಮತ್ತೊಂದು ದೊಡ್ಡ ಯೋಜನೆಗೆ ಅಡಿಪಾಯಾ  ಹಾಕಿದ್ದಾರೆ. ಸಧ್ಯದಲ್ಲೇ  ನಿರ್ದೇಶಕನ ಕ್ಯಾಪ್ ಹಾಕಲಿರುವುದಾಗಿ ಸ್ವತಹ ಅವರೇ ತಿಳಿಸಿದ್ದಾರೆ, ಅದು ಯಾವ ವಿಷಯ ಆಧಾರಿತ ಸಿನಿಮಾ ಎಂಬುದನ್ನ ಸಧ್ಯಕ್ಕೆ ತಿಳಿಸಿಲ್ಲ.. ಅದೇನೆ ಆಗಲಿ ಉಪೇಂದ್ರ ಡೈರೆಕ್ಟ್ ಮಾಡ್ತಿದ್ದಾರೆ ಅಂದ್ರೆ ಅಲ್ಲೊಂದು ಜಾದು ನಡಿಯೊದಂತೂ ಖಚಿತ.. ಹಲವು ಮನುಸ್ಸುಗಳನ್ನು ಕಬ್ಜಾ ಮಾಡೋದು ನಿಶ್ಚಿತ..

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply