ಎಲ್ಲೆಡೆ ರಾಬರ್ಟನದ್ದೇ ಸದ್ದು

ರಾಬರ್ಟ್

11ನೇ ತಾರಿಕಿನಂದು ಬಿಡುಗಡೆಯಾಗಲಿರುವು ಬಹು ನಿರೀಕ್ಷಿತ ಸಿನಿಮಾವಾದ “ರಾಬರ್ಟ್”ನ ಸಂಭ್ರಮಾಚಾರಣೆ ಈಗಲೇ ಶುರುವಾಗಿದೆ..

ಮೊದಲನೇ ದಿನದ ಮೊದಲ ಶೋ” ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ರೀತಿಯ ಸಡಗರ ಸಂಭ್ರಮ, ತೆರೆಯ ಮೇಲೇ ನೆಚ್ಚಿನ ನಟನ ಕಂಡ ಕ್ಷಣ, ಶಿಳ್ಳೆ ಹೊಡೆದು ಜೈಕಾರ ಕೂಗಿ, ಸ್ಕ್ರೀನ್ ಬಳಿ ಹೋಗಿ ಕರ್ಪೂರದ ಆರ್ತಿ ಬೆಳಗದಾಗ ಸಿಗೋ ಮಜಾನೆ ಬೇರೆ.. ಎಲ್ಲಾ ಸ್ಟಾರ್ ನಟರಿಗೂ ಅವರ ಅಭಿಮಾನಿಗಳು ಇದನ್ನ ಖಡ್ಡಾಯವಾಗಿ ಮಾಡ್ತಾರೆ,

ಆದ್ರೆ D- ಬಾಸ್ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಮುಂಚಿತವಾಗಿಯೇ ಥಿಯೇಟರ್ಗಳಲ್ಲಿ ಸಂಭ್ರಮಾಚಾರಣೆಯನ್ನ ಪ್ರಾರಂಭಿಸಿದ್ದಾರೆ, ಇಷ್ಟದ ನಟನ ಭಾವ ಚಿತ್ರಕ್ಕೆ ಕಟ್ ಔಟ್ಗಳಿಗೆ ಭಾರಿ ಹಾಲಿನ ಅಭಿಷೇಕಾ, ಭಾರಿ ಹೂವಿನ ಹಾರ ಮಾಲೆಗಳನ್ನ ಹಾಕಿ,ಬಗೆ ಬಗೆಯ ಪಟಾಕಿ ಸಿಡಿಸುತ್ತ ಜೊತೆಗೆ ಆ ಸದ್ದನ್ನೆ ಮೀರಿಸುವ ಜೋರಾದ ಹಾಹಾಕರ ಜೈಕಾರಗಳು ಎಲ್ಲೆಡೆ ಕೇಳಿಬಂದಿದೆ. ಶಿವಮೊಗ್ಗ, ಬೆಂಗಳೂರು, ಹಾಸನ, ಹೊಸಕೋಟೆ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ “ರಬಾರ್ಟ್ನ ತಾಪ- Dಬಾಸಿನ ಜಪ” ಜೋರಾಗಿದೆ. ಕನ್ನಡ ಸಿನಿಮಾದ ಒಂದು ಪೋಸ್ಟರ್ ಕೂಡ ಕಾಣೋದು ಕಷ್ಟವಾಗಿದ್ದ ಬೆಂಗಳೂರಿನ M.G. ರೋಡ್ ನಲ್ಲಿ ಇಂದು ರಾಬಾರ್ಟ್ನ 30 ಅಡಿ ಕಟೌಟ್ ರಾರಾಜಿಸಿದೆ.

ಆನ್ಲೈನ್ ಬುಕ್ಕಿಂಗ್ ಪ್ರಾರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲೆಡೆ ಟಿಕೆಟ್ ಭರ್ತಿಯಾಗಿ, ಸಿನಿಮಾಗೆ ಅತಿ ದೊಡ್ಡ ಓಪನಿಂಗ್ ಸಿಕ್ಕಿದೆ, ಹಾಗೆಯೇ ಮತ್ತೊಮ್ಮೆ ದರ್ಶನ್ ಬಾಕ್ಸ್ ಆಫೀಸ್ನ ಸುಲ್ತಾನ ಅಂತ ಸಾಬೀತು ಮಾಡಿದ್ದಾರೆ.

ಯಾರಾದರೂ ಸರಿ ಪೈರಸಿ ಅಥವಾ ಸಿನಿಮಾದ ನಕಲು ಮಾಡಿದ್ದೆ ಆಗಲಿ ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಎಚ್ಚರ ನೀಡಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಚಿತ್ರ ರಸಿಕರು ಹಾಗೂ ಅಭಿಮಾನಿಗಳ ಮನಸಿನಲ್ಲಿ ಹಬ್ಬದ ವಾತಾವರಣ ಮನೆಮಾಡಿರೋದಂತೂ ನಿಜ, ಸಿನಿಮಾಗೆ ಸಂಭದಿಸಿದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರ ಹಲವಾರು ಸಂದರ್ಶನ ಕಂಡ ಬಳಿಕ ರಾಬರ್ಟ್ ಸಿನಿಮಾ ಹಬ್ಬದ ರಸದೌತಣ ಬಡಿಸಲಿರುವುದು ಕೂಡ ಖಾತ್ರಿಯಾಗಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply