ಐಶ್ವರ್ಯ ರೈ ಯವರ ಹೊಸ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಪೋಸ್ಟರನ್ನು ಚಿತ್ರದ ನಿರ್ಮಾಪಕರು ಬಿಡುಗಡೆಗೊಳಿಸಿದ್ದಾರೆ. ಪೋಸ್ಟರ್ನಲ್ಲಿ ಐಶ್ವರ್ಯ ರೈಯವರ ಲುಕ್ ಬೆರಗುಗೊಳಿಸಿದೆ.
ಲೈಕಾ ಪ್ರೊಡಕ್ಷನ್ ರವರು ಹಂಚಿಕೊಂಡಿರುವ ಪೋಸ್ಟರ್ನಲ್ಲಿ ಐಶ್ವರ್ಯ ರೈ ಕೆಂಪು ಬಣ್ಣದ ಸೀರೆಯುಟ್ಟು , ಅದಕ್ಕೆ ತಕ್ಕನಾದ ಆಭರಣಗಳೊಂದಿಗೆ , ಕಣ್ಮನ ಸೆಳೆಯುವಂತಿದೆ.
ಮಣಿರತ್ನಂರವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರವೂ ಏಕ ಕಾಲಕ್ಕೆ ಹಿಂದಿ,ತಮಿಳ್ ,ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲಿ ಏಕ ಕಾಲಕ್ಕೆ ಸೆಪ್ಟೆಂಪೆರ್ 30 ರಂದು ಬಿಡುಗಡೆಯಾಗುತ್ತಿದೆ. ಕಲ್ಕಿ ಕೃಷ್ಣಮೂರ್ತಿಯವರ ಜನಪ್ರಿಯ ಕಾದಂಬರಿ ಪೊನ್ನಿಯಿನ್ ಸೆಲ್ವನ್ ತಮಿಳು ಕಾದಂಬರಿಯನ್ನು ಮಣಿರತ್ನಂರವರು ಈಗ ಇದನ್ನು ಒಂದು ಐತಿಹಾಸಿಕ ಚಿತ್ರವನ್ನಾಗಿಸಿದ್ದಾರೆ.
ಈ ಹಿಂದೆ ಐಶ್ವರ್ಯರವರು ಮಣಿರತ್ನಂ ಜೊತೆ ಗುರು ಮತ್ತು ರಾವಣ್ ಸಿನೆಮಾಗಳಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದರು ಎಂದು ಸ್ಮರಿಸಬಹುದು . ಕಾರ್ತಿ, ವಿಕ್ರಂ, ತ್ರಿಷಾ ಕೃಷ್ಣನ್, ಪ್ರಕಾಶ್ ರಾಜ್ , ಐಶ್ವರ್ಯ ಲಕ್ಷ್ಮಿ, ಇನ್ನಿತರು ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ಚಿತ್ರವೂ ಯಶಸ್ವಿಯಾಗಲೆಂದು ಚಿತ್ರೋದ್ಯಮ.ಕಾಂ ಹಾರೈಸುತ್ತದೆ.