ಒಲವು ಗೆಲುವು

ಒಲವು ಗೆಲುವು

ಭಾರ್ಗವ ನಿರ್ದೇಶನದ ಈ ಚಿತ್ರ 1977ರಲ್ಲಿ ಬಂದಾಗ ನಾನು ಮೂರನೇ ವರ್ಷ ಇಂಜಿನಿಯರಿಂಗ್. ಆಗೆಲ್ಲಾ ಲಕ್ಷ್ಮಿ ಎಂದರೆ ಲವ್ವು ಅಣ್ಣಾವ್ರು ಎಂದರೆ ಅಭಿಮಾನ!

ನಮ್ಮೂರ ಮಾನಸ ಗಂಗೋತ್ರಿಯಲ್ಲಿ ಮುಕ್ಕಾಲು ಚಿತ್ರದ ಚಿತ್ರೀಕರಣ.
ಜಿ ಕೆ ವೆಂಕಟೇಶ್ ಅವರ ನಾ ಹೇಳಲಾರೆ ಹಾಡು ಅಣ್ಣಾವ್ರ ದನಿಯಲ್ಲಿ ಮಧುರವಾಗಿದೆ. ಜೊತೆಗೆ ಗಿಣಿಯೇ ನನ್ನ ಅರಗಿಣಿಯೇ ಕೂಡ ಒಳ್ಳೆಯ ಪ್ರೇಮಗೀತೆ ಲಕ್ಷ್ಮಿ ಕನಸು. ಅಣ್ಣಾವ್ರ ಕನಸು ಸಂಗೀತವೇ ನೀ ನುಡಿಯುವ ಮಾತೆಲ್ಲ.. ರಾಜ್ ಮತ್ತು ಜಾನಕಿಯಮ್ಮನವರ ಯುಗಳ ಗೀತೆ. ಜಾನಕಿಯಮ್ಮನವರ ನನ್ನೆದೆ ಕೋಗಿಲೆಯ… ಬಹಳವೇ ಮಾದಕ ಹಾಡು.

ಪ್ರೊಫೆಸರ್ ಮೋಹನ್ ಆಗಿ ಅಣ್ಣಾವ್ರು ಬ್ರೂಟಸ್ ಮತ್ತು ಸೀಸರ್ ಪಾಠ ಸಖತ್ ಆಗಿ ಮಾಡಿದ್ದಾರೆ. ಲಕ್ಷ್ಮಿ ಅರ್ಧ ಸಿನಿಮಾ ಅಣ್ಣಾವ್ರನ್ನು ಬಲೆಗೆ ಹಾಕಿಕೊಳ್ಳಲು ಕಳೆಯುತ್ತಾರೆ. ಬಾಲಕೃಷ್ಣ, ಶನಿ ಮಹದೇವಪ್ಪ, ನೀಗ್ರೋ ಜಾನಿ, ಟೈಗರ್ ಪ್ರಭಾಕರ್, ಸೀತಾರಾಂ (ಟಿ ಎನ್ ಅಲ್ಲ ‘ಉಪಾಸನೆ’), ಚೇತನ್ ರಾಮರಾವ್, ಸುರೇಖಾ, ಸತೀಶ್, ಹೊನ್ನವಳ್ಳಿ ಕೃಷ್ಣ, ದಿಲೀಪ್ (ಮುಂದೆ ತಮಿಳು ಟಿವಿ ನಟ ಆದಾತ) ಗುರುತಿಗೆ ಸಿಕ್ಕರು.

ಪ್ರೇಮ ಕಥೆ ಅರ್ಧದ ನಂತರ ಕೊಲೆ ಪತ್ತೇದಾರಿ ಆಗುತ್ತದೆ.
ಅಣ್ಣಾವ್ರು ಎಂದಿನ ಗಾಂಭೀರ್ಯ, ತುಂಟತನ ಎಲ್ಲಾ ಚೆನ್ನ. ಲಕ್ಷ್ಮಿ ಅದೆಷ್ಟು ಚಂದ. ಬಣ್ಣ ಬಣ್ಣದ ವೆರೈಟಿ ಉಡುಪುಗಳು ಮತ್ತು ಒಳ್ಳೆಯ ನಟನೆ ಕೂಡ.

44 ವರ್ಷಗಳ ನಂತರ ಕೂಡ ಐ ಎಂಜಾಯ್ಡ್ ಒಲವು ಗೆಲುವು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply