“ನನ್ ಜೀವನದಲ್ಲಿ ನಾನು ಆಟೋಗ್ರಾಫ್ ಪಡೆದ
ಏಕೈಕ ವ್ಯಕ್ತಿ ಡಾ. ರಾಜ್ ಕುಮಾರ್ “
ಹೀಗಂತ ಹೇಳಿರೋರು ಬೇರೆ ಯಾರೂ ಅಲ್ಲ ನಮ್ಮ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ ಎಲ್ಲರಂತೆ ಆಡಿ ಬೆಳೆದ ಚಿಗುರು ಮೀಸೆಯ ಯುವಕ, ಗಟ್ಟಿ ಮುಟ್ಟಾದ ದೇಹ, ಸ್ಟೈಲ್ ಮಾಡೋದರಲ್ಲಿ ಹೆಸರು ಮಾಡಿದ, ಕಂಡಕ್ಟರ್ ಕೆಲಸ ಮಾಡಿ ನಂತರ ತಮ್ಮ ದಿಕ್ಕನ್ನೇ ಬದಲಾಯಿಸಿಕೊಂಡ ಶ್ರೀ. ಗುರು ರಾಘವೇಂದ್ರ ದೇವರ ಪರಮ ಭಕ್ತರು, ಅಣ್ಣಾವ್ರ ಆಪ್ತರು ತಲೈವಾ, ವಲ್ಡ್೯ ಸುಪರ್ ಸ್ಟಾರ್ ಶ್ರೀ. ಶಿವಾಜಿ ರಾವ್ ಗಾಯಕ್ವಾಡ್ (ರಜಿನಿಕಾಂತ್).
” ❤ಇವರು ನಡೆದರೆ ಸ್ಟೈಲ್ ,ನಿಂತರೆ ಸ್ಟೈಲ್
ಕುಂತರೆ ಸ್ಟೈಲ್ , ನಕ್ಕರೆ ಸ್ಟೈಲ್
ಕೈ ಎತ್ತಿ ಮುಗಿಯೋದು ಒಂದು ಸ್ಟೈಲ್
ಸಿಗರೇಟ್ ಹಚ್ಚೋದು ಒಂದು ಸ್ಟೈಲ್
ಅದಕ್ಕೆ ಇವರನ್ನ ಕರಿತಾರೆ ಎಲ್ಲರೂ ಸ್ಟೈಲ್ ಕಿಂಗ್❤ “
1973 ರಲ್ಲಿ ಮೆದ್ರಾಸ್ ಫಿಲಂ ಅಕಾಡೆಮಿಯಲ್ಲಿ ಡಿಪ್ಲೊಮಾ ಮಾಡಿದವರು, ಇವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದವರು ಹೆಸರಾಂತ ನಿದೇ೯ಶಕರು ಕೆ. ಬಾಲಚಂದರ್ ರವರು “ಅಪೂವ೯ ರಾಗಂಗಳ್ “.
ತಮಿಳಿನಲ್ಲಿ ಇವರು ನೆಲೆಯನ್ನು ಕಂಡುಕೊಂಡಮೇಲೆ ಅಲ್ಲಿಯೇ ಚಿತ್ರಗಳಲ್ಲಿ ಅಭಿನಯದ ಚಕ್ರ ನಿಲ್ಲಲಿಲ್ಲ, ಒಂದಾದ ಮೇಲೆ ಒಂದರಂತೆ ಚಿತ್ರಗಳು ಇವರ ಕೈಯಲ್ಲಿ. ಕೆಲವು ಚಿತ್ರಗಳು ನೆನಪಿಗೆ ಬರುವುದೆಂದರೆ
ಮೂಂಡ್ರು ಮುಡಿಚ್ಚು, ಅವರ್ಗಳ್, ಪದಿನಾರು ವಯದಿನಿಲೆ, ಕುಪ್ಪತ್ತು ರಾಜ, ನಿನೈತಾಲೆ ಇನಿಕ್ಕುಂ, ಟೈಗರ್, ಧಮ೯ ಯುಧ್ಧಂ, ಬಿಲ್ಲಾ, ನಕ್ಚತ್ತಿರಂ, ರಾಂ ರಾಬಟ್೯ ರಹೀಂ, ನಾನ್ ಪೋಟ್ಟ ಸವಾಲ್, ಜಾನಿ, ಮುರಟ್ಟು ಕಾಳೈ, ಪೊಲ್ಲಾದವನ್, ತೀ, ಕಳುಗು, ತಿಳ್ಳು ಮುಳ್ಳು, ಪೊಕ್ಕಿರಿ ರಾಜ, ರಂಗ, ಮೂಂಡ್ರು ಮುಗಂ, ಅಗ್ನಿ ಸಾಕ್ಷಿ, ಪುದುಕವಿದೈ, ಪಾಯುಂಪುಲಿ, ತಾಯಿವೀಡು, ಅಡುತ್ತವಾರೀಸು, ತಂಗ ಮಗನ್, ತಂಬಿಕ್ಕು ಎಂದ ಊರು, ಅನ್ಬುಳ್ಳ ರಜಿನಿಕಾಂತ್, ಜಾನ್ ಜಾನಿ ಜನಾಧ೯ನ್, ಮಾವೀರನ್, ಮನಿದನ್, ಮಾಪಿಳ್ಳೈ, ಪಣಕ್ಕಾರನ್,ಧಮ೯ದೊರೈ ,ಧಳಪತಿ, ಮಣ್ಣನ್, ವಾಲಿ, ವೀರ, ಬಾಷಾ, ಮುತ್ತು, ಅರುಣಾಚಲಂ, ಪಡೆಯಪ್ಪ, ಬಾಬಾ, ಚಂದ್ರಮುಖಿ, ಶಿವಾಜಿ, ಕುಚೇಲನ್, ಎಂದಿರನ್, ರಾವನ್, ಕೊಚಾಡಿಯನ್, ಲಿಂಗ, ಕಾಳಾ, 2.0, ಪೇಟ.
ಇವರನ್ನು ಮೊದಲು ಕನ್ನಡ ಚಿತ್ರರಂಗದಲ್ಲಿ ಪರಿಚಯ ಮಾಡಿದವರು ಕನ್ನಡದ ಹೆಸರಾಂತ ನಿದೇ೯ಶಕರಾದ ಶ್ರೀ. ಪುಟ್ಟಣ್ಣ ಕಣಗಾಲ್ ರವರು ಕಥಾಸಂಗಮ ಚಿತ್ರದ ಮೂಲಕ ಪಾದಾಪ೯ಣೆ, ನಂತರ ಗಲಾಟೆ ಸಂಸಾರ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಮಾತು ತಪ್ಪದ ಮಗ ,ತಪ್ಪಿದ ತಾಳ, ಪ್ರಿಯ ಮುಂತಾದವು.
ನಟನೆಯಲ್ಲಿ ಕಿಂಗ್ ನಮ್ಮ ಅಣ್ಣಾವೃ ಮತ್ತು ಸ್ಟೈಲ್ ನಲ್ಲಿ ಕಿಂಗ್ ಇಬ್ಬರೂ ಸೇರಿ ಒಂದು ಚಿತ್ರ ಮಾಡಿದ್ದರೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.
ಕೊನೆಯ ಮಾತು ಯಾವುದೇ ಒಬ್ಬ ವ್ಯಕ್ತಿಯ ಬಣ್ಣ ಮುಖ್ಯವಲ್ಲ, ಅವರಲ್ಲಿರುವ ಕಲೆ ಮುಖ್ಯ ಎಂದು ತೋರಿಸಿಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಹ್ಯಾಟ್ಸ್ ಆಫ್ ಹೇಳೋಣ ಮಿತ್ರರೇ.