ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ನಟ ಶಂಕರ್ ನಾಗ್

ಮುಂದುವರಿದ ಭಾಗ…

ರಂಗಭೂಮಿಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಇವರು ಇದೇ ರಂಗಭೂಮಿಯ ಉಳಿವಿಗಾಗಿ ಹಗಲು ರಾತ್ರಿ ಶ್ರಮ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದರು. ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ್ದ ಇವರು ಗಿರೀಶ್ ಕಾರ್ನಾಡ್ ಅವರು ರಚಿಸಿದ್ದ ಅಂಜು ಮಲ್ಲಿಗೆ, ನೋಡಿ ಸ್ವಾಮಿ ನಾವಿರೋದು ಹೀಗೆ ಸೇರಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಆದರೆ ಇವರ ಪ್ರತಿಭೆ ಹಿರಿತೆರೆಗೆ ಮಾತ್ರ ಸೀಮಿತವಾಗದೇ ಕಿರು ತೆರೆಗೂ ವ್ಯಾಪಿಸಿತ್ತು.

ಭಾರತದ ದೂರದರ್ಶನದಲ್ಲಿ ಪ್ರಸಾರವಾಗಿ ವಿನೂತನ ದಾಖಲೆಗಳನ್ನು ನಿರ್ಮಿಸಿದ್ದ ಆರ್.ಕೆ.ನಾರಾಯಣ್ ರಚನೆಯ ಮಾಲ್ಗುಡಿ ಡೇಸ್ ಧಾರಾವಾಹಿ ಕುರಿತು ತಿಳಿಯದವರು ಯಾರೂ ಇಲ್ಲ. ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ನಿರ್ಮಿಸಿದ್ದ ಈ ಧಾರಾವಾಹಿಯನ್ನು ನಮ್ಮ ಈ ಕರಾಟೆ ಕಿಂಗ್ ಶಂಕರ್ ನಾಗ್ ನಿರ್ದೇಶಿಸಿದ್ದರು. ಅಲ್ಲದೇ ಅಂದಿನ ಕಾಲದಲ್ಲಿ ಹಿರಿತೆರೆಯಲ್ಲಿ ವಿಜ್ರಂಭಿಸುತ್ತಿದ್ದ ಹಲವಾರು ಪ್ರಮುಖ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಕೂಡ ಈ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ತರಹದ ಸಂಗತಿಗಳೇ ಅಂದಿನ ಕಾಲದಲ್ಲಿ  ನಮ್ಮ ಕರಾಟೆ ಕಿಂಗ್ ಕನ್ನಡ ಚಿತ್ರರಂಗದಲ್ಲಿ ಎಂತಹ ಕ್ರೇಜ್ ನ್ನು ಹೊಂದಿದ್ದರು ಎಂಬುದು ತಿಳಿಯುತ್ತದೆ.  

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲಿ ಇವರ ಕ್ರಿಯಾಶೀಲತೆಯ ಕುರಿತು ತಿಳಿದರೆ ಎಂತವಹರಾದರೂ ದಂಗಾಗುತ್ತಾರೆ. ಆಗಿನ ಕಾಲದಲ್ಲಿ ಕಿಕ್ಕಿರಿದು ಆಗುತ್ತಿದ್ದ ಟ್ರಾಫಿಕ್ ಜಾಮ್ ಕುರಿತು ಅರಿತಿದ್ದ ಇವರು ಬೆಂಗಳೂರಿಗೆ ಮೆಟ್ರೋ ರೈಲು,ನಂದಿ ಬೆಟ್ಟಕ್ಕೆ ರೋಪ್ ವೇ  ಮತ್ತು ರಂಗಕರ್ಮಿಗಳಿಗೆ ರಂಗ ಮಂದಿರದ ನಕ್ಷೆಯನ್ನು ತಯಾರಿಸಿ ತಮ್ಮ ಆಪ್ತ ಮಿತ್ರ ಮತ್ತು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರದ ಮುಂದಿಟ್ಟು ಪ್ರಸ್ತಾವನೆಯನ್ನು ಮಾಡಿದ್ದರು.

ಮುಂದುವರಿಯುವುದು……


     

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply