ಐ ತೇರಿ ಲಕಡಿ ಪಕಡಿ ಜುಮ್ಮಾ…
ಅಂತಿಂತ ಗಂಡು ನಾನಲ್ಲ
ನನ್ನಂಥ ಭಂಡ ಯಾರಿಲ್ಲ
ಕನ್ನಡ ಭಾಷೇನೆ ನನ್ ಜೀವ
ಕಾವೇರಿ ತಾಯಿನೇ ನಮ್ಮವ್ವ
ಈ ಮಣ್ಣಂದ್ರೆ ಚಿನ್ನ
ಇಲ್ ಹುಟ್ದೋನು ರನ್ನ
ನಡೆ ಚೆನ್ನ ನುಡಿ ಚೆನ್ನ
ಚಂದ ಚಂದ ಚಂದ ಗೆಳೆಯ “
“ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ಕಲಿಸುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ “

“ಹೊಂಬಾಳೆ ಹೊಂಬಾಳೆ
ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೆ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ “
ಟಚಿಂಗ್ ಟಚಿಂಗ್ ಟಚಿಂಗ್ 🥰
ಕಳ್ಳೆಕಾಯ್ ಕಳ್ಳೆಕಾಯ್ 😘
ಲಾಂಗ್ ಲಾಂಗ್ ಎಗೋ
ಸೋ ಲಾಂಗ್ ಎಗೋ ಯಾರಿಗಿಡ್ಲೀ… 😍
ಏನ್ ಯಂಗ್ ಜಂಟ್ಲು ಮ್ಯಾನು
ದೇವಸ್ಥಾನದಲ್ಲೆ ಕೃಷ್ಣ ಲೀಲೆ ಶುರು ಹಚ್ಕೊಂಬುಟಿದ್ರಾ 😁
ನಾಲ್ಕ್ ಅಕ್ಷರ ಕಲ್ತಿದ್ ತಕ್ಷಣ ನಮ್ ತನನೇ ಮತ್೯ಬುಡ್ತರೆ ನಮ್ ಜನ 😥
ಕಂಡೋರ್ ದುಡ್ಡು ಪಾಸಾಣ ಇದ್ದಂಗೆ ಅದುಕ್ಕೆ ಉಂಡಿಗಾಕ್ಬುಟ್ಟೆ 🤔
ಯಾಕೆ – ನೀನ್ ನಮ್ಮಮ್ಮನ್ ಮದ್ವೆ ಆಗ್ಬೋದು
ನಾನ್ ನಿಮ್ ಅಮ್ಮನ ಮದ್ವೆ ಆಗ್ಬಾದಾ೯🤩
ಇವರು ತೆರೆ ಮೇಲೆ ಬಂದ್ರೆ ಜನ ಬಿದ್ದು ಬಿದ್ದು ನಕ್ತಾರೆ, ನಗಿಸುವ ಗುಣ ಇವರಲ್ಲಿದೆ, ಗುರು ರಾಘವೇಂದ್ರ ಪರಮ ಭಕ್ತರು, ಅಣ್ಣಾವ್ರ ಅಭಿಮಾನಿ, ಕನ್ನಡ ಭಾಷೆ , ನೆಲಜಲ ಅಂದರೆ ಇವರಿಗೆ ಪ್ರಾಣ, ಪರಿಮಳ ಮೇಡಂ ರವರ ಲವ್ವರ್ ಬಾಯ್,ಜಗತ್ ಕಿಲಾಡಿ, ನಕ್ಕು ನಗಿಸಿ ಹೊಟ್ಟೆ ಉಣ್ಣಾಗೊವರೆಗೂ ಕೊನೆಯಲ್ಲಿ ನಮಗೆ ಸುಸ್ತಾದರೂ ಬಿಡದೆ ಇನ್ನೂ ನೋಡಬೇಕೆಂಬ ಬಯಕೆ ಹುಟ್ಟಿಸುವ ನವರಸ ನಾಯಕ, ಕನ್ನಡ ಚಿತ್ರರಂಗದ ಚಾಲಿ೯ ಚಾಪ್ಲಿನ್ , ನಟ, ನಿಮಾ೯ಪಕ, ಗಾಯಕ, ರಾಜಕಾರಣಿ ಶ್ರೀ ಜಗ್ಗೇಶ್ ಶಿವಲಿಂಗಪ್ಪ.
ನೋಡೋಕೆ ಕಪ್ಪಗಿದ್ದರೂ ಮನಸ್ಸು ಮಾತ್ರ ಹೂವಿನಂತೆ, ಯಾರಿಗೇ ಆಗಲಿ ಕಷ್ಟ ಅಂತ ಗೊತ್ತಾದರೆ ತಮ್ಮ ಕೈಲಾದ ಸಹಾಯ ಮಾಡುವ ಗುಣ ಹೊಂದಿರುವ ಹೃದಯ ಶ್ರೀಮಂತಿಕೆ ಉಳ್ಳವರು.
ಇವರ ಪಾತ್ರಗಳು ಜನರಿಗೆ ಹತ್ತಿರವಾದವು ತರ್ಲೆ ನನ್ನ ಮಗ, ಇಂದ್ರನ ಗೆದ್ದ ನರೇಂದ್ರ, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಾಚಾರಿ, ಶಿವಣ್ಣ, ರಾಯರಮಗ, ಭಂಡ ನನ್ನ ಗಂಡ, ಭಂಡ ಅಲ್ಲ ಬಹದ್ದೂರ್, ರೌಡಿ ಎಂ. ಎಲ್. ಎ, ಸಾಂಗ್ಲಿಯಾನ, ಕಳ್ಳ ಮಳ್ಳ, ರಣರಂಗ, ಯುಧ್ಧಕಾಂಡ, ಸೂಪರ್ ನನ್ ಮಗ, ಸವ೯ರ್ ಸೋಮಣ್ಣ, ಸೋಲಿಲ್ಲದ ಸರದಾರ, ಬೇವು ಬೆಲ್ಲ, ವೀರಣ್ಣ, ರೂಪಾಯಿ ರಾಜ, ಭೈರವ, ರಂಗಣ್ಣ, ಪಟೇಲ, ಕುಬೇರ, ಕಾಸಿದ್ದೋನೆ ಬಾಸು, ನನ್ನಾಸೆಯ ಹೂವೆ, ಹನಿಮೂನ್ ಎಕ್ಸ್ಪ್ರೆಸ್, ತೆನಾಲಿರಾಮ, ಜಿತೇಂದ್ರ, ಮಠ, ಎದ್ದೇಳು ಮಂಜುನಾಥ, ರಾಯರ ಮಗ, ಪಟ್ಟಣಕ್ಕೆ ಬಂದ ಪುಟ್ಟ, ಜಿಪುಣ ನನ್ನ ಗಂಡ, ಬಲ್ ನನ್ಮಗ, ವಾಸ್ತು ಪ್ರಕಾರ, ನೀರ್ ದೋಸೆ, ಪ್ರೀಮಿಯರ್ ಪದ್ಮಿನಿ, ಕಾಳಿದಾಸ ಕನ್ನಡ ಮೇಷ್ಟ್ರು,
ಪ್ರಸ್ತುತ ಇವರು ತೋತಾಪುರಿ ಚಿತ್ರ ಮತ್ತು ರಂಗನಾಯಕ ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಕಾಮಿಡಿ ಕಿಲಾಡಿಗಳು ಶೋವಿನ ತೀಪು೯ಗಾರರಾಗಿ ಹೊಸ ಕಲಾವಿದರಿಗೆ ತಮಗೆ ಗೊತ್ತಿರುವ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ , ಸರಿಗಮಪ ಖ್ಯಾತಿಯ ಇಬ್ಬರು ಅಂಧ ಹೆಣ್ಣು ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡಿರುವುದು ಗಮನಾಹ೯.

ಇವರ ಪ್ರೇಮ ಪ್ರಸಂಗ ನಿಮಗೆಲ್ಲರಿಗೂ ತಿಳಿದಿರಬಹುದು, ಸದಾ ಒಬ್ಬರನ್ನೊಬ್ಬರು ಬಿಟ್ಟಿರದ ಲವ್ ಬಡ್ಸ್೯ ಹೀಗೇ ಇರಲಿ, ಜಗ್ಗಣ್ಣ ರವರು ಆಧ್ಯಾತ್ಮಿಕವಾಗಿ ಮತ್ತು ಹೆಚ್ಚು ವಿಚಾರವಂತರು, ಅವರ ಕೆಲನುಡಿಗಳು ಮನಸ್ಸಿಗೆ ಹತ್ತಿರವಾಗುವುದು, ತಾವು ಅನುಭವಿಸಿದ ನೋವು ಕಷ್ಟ ಮತ್ಯಾರೂ ಪಡಬಾರದು ಸದಾ ಖುಷಿಯಾಗಿರಬೇಕು ಅನ್ನೋದು ಅವರ ವಿನಂತಿ. ಇವರಿಗೆ ಅಣ್ಣಾವ್ರೆಂದರೆ ತುಂಬಾ ಪ್ರೀತಿ ಮತ್ತು ದೊಡ್ಮನೆ ಅವರೆಂದರೆ ಎಲ್ಲಿಲ್ಲದ ಕಾಳಜಿ, ಅಣ್ಣಾವ್ರನ್ನು ನೋಡಲು ತಾವು ಪಟ್ಟ ಪ್ರಸಂಗವನ್ನು ಖಾಸಗಿ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ, ಅಣ್ಣಾವ್ರಿಗೂ ಕೂಡ ತುಂಬಾನೇ ಇಷ್ಟ. ಇವರ ಹಾಸ್ಯ ಪ್ರವೃತ್ತಿ ಎಂಥವರಿಗೂ ನಗುವಂತೆ ಮಾಡುತ್ತದೆ.
ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ , ಇವರ ಚಿತ್ರರಂಗದ ಪಯಣ ಹೀಗೆ ಮುಂದುವರಿಯಲಿ
ಚಂದದ ಬರವಣಿಗೆ ಸರ್… ನಿಮ್ಮ ಬರಹಗಳು ಹೀಗೆಯೇ ಮುಂದುವರೆಯಲಿ..
Thank u.
Please tell your friends to read the articles also regularly.