ಅದು ೧೯೯೬ ಇರಬಹುದು. ನಾನು ಮೈಸೂರು ರಸ್ತೆಯಲ್ಲಿದ್ದ ನನ್ನ ಆಫೀಸಿನಿಂದ ಸಂಜೆ ಮನೆಗೆ ಹೊರಟಿದ್ದೆ. ಬಜಾಜ್ ಸನ್ನಿ ಮೊಪೆಡ್‌ನಲ್ಲಿ ಆವನಿ ಶಂಕರಮಠದ ಬಳಿಯ ನನ್ನ ಮನೆಗೆ ಹೊರಟಿದ್ದೆ. ಬಂಟ್ಸ್ ಸಂಘದ ಕಲ್ಯಾಣಛತ್ರದ ಬಳಿ ಶ್ವೇತ ವಸ್ತ್ರಧಾರಿಯೊಬ್ಬರು ಮಾರುತಿ ೮೦೦ ಕಾರು ಹತ್ತಿದರು.ಆಗ ಅವರಾರೆಂಬ ವಿಷಯ ಪಕ್ಕದವರಿಂದ ತಿಳಿಯಿತು. ಶುರುವಾಯಿತು ಮಾರುತಿಯನ್ನು ಹಿಡಿಯುವ ಸಾಹಸ.
ಸನ್ನಿ ಮಾರುತಿಗೆ ಸಾಟಿಯೇ? ಆದರೆ ನನ್ನ ಮನೋವೇಗ ಸಮುದ್ರಲಂಘನ ಮಾಡಿದ ಮಾರುತಿಯ ವೇಗವನ್ನು ದಾಟಿತ್ತು. ನಾನು ಮಾರುತಿ ಮಂದಿರ ದಾಟಿದೆ. ಮಾರುತಿ ಕಾರು ಇನ್ನೂ ಮುಂದೋಡಿತ್ತು. ವಿಜಯನಗರ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಇನ್ನೇನು ಆ ಕಾರು ನನ್ನನ್ನು ದಾಟಬೇಕು, ಆಗ ಕಾರಿನ ಬಳಿ ತಲೆ ತಿರುಗಿಸಿ ‘ನಮಸ್ಕಾರ ಸಾರ್’ ಎಂದೆ. ಮುಂದೆ ಕುಳಿತಿದ್ದಾತ ತನಗೇ ಈ ನಮಸ್ಕಾರ ಎಂದು ತಿಳಿದು ನನ್ನತ್ತ ಕೈಯಾಡಿಸಿದ. ನನಗೆ ಅಗಾಧ ನಿರಾಸೆ. ಅಯ್ಯೋ ಎಂದುಕೊಂಡೆ ಈ ರೇಸ್ ವ್ಯರ್ಥವಾಯಿತಲ್ಲಾ ಎಂದು. ಆಗ ಹಿಂದಿನ ಕಿಟಕಿ ತೆರೆದುಕೊಂಡು ಅದರಿಂದ ನಗುಮುಖವನ್ನು ಹೊರ ತೋರುತ್ತಾ ‘ಟಾಟಾ’ ಮಾಡಿದ್ದರು ಕನ್ನಡ ನಾಡಿನ ಪ್ರೇಮದ ಕುವರ – ಡಾ. ರಾಜ್‌ಕುಮಾರ್!!
–ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
ಸಾಲಾಗಿ ಹ್ಯಾಟ್ರಿಕ್ಹಿಟ್ ಸಿನಿಮಾ ನೀಡಿದ ಬಳಿಕ ಆಕ್ಷನ್ ಪ್ರಿನ್ಸ್ “ಧ್ರುವ ಸರ್ಜಾ” ಡೈರೆಕ್ಟರ್ ನಂದ ಕಿಶೋರ್ ಜೊತೆಗೆ “ಪೊಗರು” ಅನ್ನೋ ದೊಡ್ಡ ಮಾಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗಗಿ…