ಕನ್ಯಾರತ್ನ

ಟೈಟಲ್ ರೋಲ್ ರಾಜನ(ರಾಜ್‍ಕುಮಾರ್) ಅಕ್ಕ ಶಾಂತಳಿಗೆ (ಸಾಹುಕಾರ್ ಜಾನಕಿ) ಮೀಸಲು. ಸಾಲಗಾರನ ಎಲ್ಲ ರೀತಿಯ ಕಾಟದಿಂದ ತಪ್ಪಿಸಿಕೊಂಡು ಅವಳ ಅಮ್ಮ (ಪಾಪಮ್ಮ) ಸಾಯುವಾಗ ಅವಳಿಗೆ ಮಾತುಕೊಟ್ಟು ತಮ್ಮನನ್ನು ಕಾಪಾಡಲೆತ್ನಿಸುವ ಅವನ ಅಭಿವೃದ್ಧಿ ಕಾಣಲೆತ್ನಿಸುವ ಪಾತ್ರ. ಬಾಲಕೃಷ್ಣ ಸಾಹುಕಾರ.

ನೂರಾರು ಸಲ ‘ಸಂತೋಷ, ಭಾಳ ಸಂತೋಷ’ ಅನ್ನೋ ಪಾತ್ರ. ಆತನ ಮಗಳು ಚಂದ್ರಿಕಾ(ಲೀಲಾವತಿ). ಅವಳ ಹಿಂದೆ ಬೀಳೋ ಮಜನೂ ಪಾತ್ರ ರಾಜ್. ರಮಾದೇವಿ ಈ ಚಿತ್ರದಲ್ಲಿ ಕೂಡ ಮನೆಹಾಳಿ, ಮೂತಿ ತಿವಿಯುವಾಕಿ. ಅವಳ ಮಗ ಸುಂದರ (ರತ್ನಾಕರ) ಅವನ ಪ್ರೇಯಸಿ ಸುಂದರಿ (ಜಯಾ).

ಜಯಾ ತಂದೆ ಡಿಕ್ಕಿ ಮಾಧವರಾವ್ ಶಾಂತಳ ಸಾಲಗಾರನ ಕೊಲೆ ಮಾಡಿದಾಗ ‘ಏಜ್ ಓಲ್ಡ್’ ಸಿನಿಮಾ ಸ್ಟೈಲಲ್ಲಿ ರಾಜ ಆಪಾದಿತ. ಶಾಂತಳ ಬಹುದಿನಗಳ ಪ್ರೇಮಿ ಶಿವಪ್ರಕಾಶ್ (ರಾಜಾಶಂಕರ್) ಈ ಕನ್ಯಾರತ್ನಳ ಕೈ ಹಿಡಿದಾಗ ಶುಭಂ.


ರಾಜ್ ಲೀಲಾ ಹಾಡುಗಳು – ಬಿಂಕದ ಸಿಂಗಾರಿ (ಪಿಬಿಎಸ್)… ಎಲ್ಲಿಹರೋ ನಲ್ಲಾ (ಪಿಬಿಎಸ್ – ಜಾನಕಿ)… ಮನವಾ ಕದ್ದ.. (ಜಾನಕಿ)
ರಾಜಾಶಂಕರ್ ಸಾಹುಕಾರ್ ಜಾನಕಿ ಸುವ್ವೀ ಸುವ್ವೀ ಸುವ್ವಾಲೆ (ಪಿಬಿಎಸ್ ಜಾನಕಿ)
ರತ್ನಾಕರ – ಮೈಸೂರು ದಸರಾ ಬೊಂಬೆ ಆಹ ನೀನೇ ನನ್ನ ರಂಭೆ (ಟಿ ಎ ಮೋತಿ)
ಎಲ್ಲ ರೀತಿಯ ಸೆಂಟಿಮೆಂಟ್‌ಗಳಲ್ಲೂ ಅಣ್ಣಾವ್ರ ಆ್ಯಕ್ಟಿಂಗ್ ಹೆವ್ವಿ ಮಿಂಚಿಂಗ್.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply