IMDb ಯ ಲಿಸ್ಟಿನಲ್ಲಿ ಅತ್ಯುತ್ತಮ 250 ಭಾರತೀಯ ಚಿತ್ರಗಳ ಪೈಕಿ ಅಗ್ರಸ್ಥಾನಕ್ಕೇರಿದ ಕಾಂತಾರ!
ಕನ್ನಡ, ಹಿಂದಿ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಚಿತ್ರಕ್ಕೆ ಈಗ ಇನ್ನೊಂದು ಹೆಮ್ಮೆ. ಭಾರತದ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಕಾಂತಾರ ಅಗ್ರಸ್ಥಾನಕ್ಕೆ ಏರಿದೆ.
ಇತ್ತೀಚೆಗೆ IMDb ಟಾಪ್ 250 ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ‘ಕಾಂತಾರ’ಎಲ್ಲ ಸಿನಿಮಾಗಿಂತ ನಂ. ೧ ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಈ ಸಿನಿಮಾವನ್ನು
ಹೆಚ್ಚು ಆದಾಯ ಗಳಿಸಿದ ಸಾಧನೆಗೆ ಸೇರಿಸಿದೆ. ದಿನದಿಂದ ದಿನಕ್ಕೆ ಚಿತ್ರವನ್ನು ನೋಡುವ ವೀಕ್ಷಕರ ಸಂಖ್ಯೆಯು ಸುಮಾರು 40-50% ರಷ್ಟು ಹೆಚ್ಚಾಗಿದೆ.
ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಂತಾರ ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6ನೇ ಕನ್ನಡ ಚಿತ್ರವಾಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹೆಚ್ಚಿನ ಚಿತ್ರಮಂದಿರಗಳಲ್ಲಿ ವಿಜೃಂಭಿಸುತ್ತಿದೆ
ಕಾಂತಾರ ಟ್ರೈಲರ್ ನೋಡಲು ಕೆಳಗೆ ಕ್ಲಿಕ್ ಮಾಡಿ