ಕಾಮನಬಿಲ್ಲು

ಚಿ. ದತ್ತರಾಜ್ ನಿರ್ದೇಶಕರಾಗಿದ್ದ ಈ 1983ರ ಚಿತ್ರ ಅಶ್ವಿನಿ ಅವರ ಮೃಗತೃಷ್ಣಾ ಕಾದಂಬರಿಯ ಆಧಾರಿತ.

ಸೂರ್ಯನಾರಾಯಣ ಉರ್ಫ್ ಸೂರಿ (ರಾಜ್‍ಕುಮಾರ್) ಮತ್ತು ಚಂದ್ರೇಗೌಡ (ಅನಂತನಾಗ್) ಪ್ರಾಣ ಸ್ನೇಹಿತರು.ಆ ಊರಿಗೆ ಬರುತ್ತಾಳೆ ಹಿರೇಗೌಡರ (ಬಾಲಣ್ಣ ಸುಂದರ ಪಾತ್ರ. ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪ ಮತ್ತೊಂದು ಇದೇ ರೀತಿಯ ಪಾತ್ರ) ಮೊಮ್ಮಗಳು ಗಿರಿಜಾ (ಸರಿತಾ).

ಊರಿಗೆ ಉಪಕಾರಿ ಸೂರಿಗೂ ಗಿರಿಜಾಳಿಗೂ ಮೊದಲು ತಗಾದೆಯಾದರೂ ನಂತರ ಸ್ನೇಹ ಆಗಿ ಪ್ರೇಮವಾಗುತ್ತದೆ.ತೂಗುದೀಪ ಶ್ರೀನಿವಾಸ್, ಎಂ ಎಸ್ ಉಮೇಶ್, ಕೆ. ಎಸ್. ಅಶ್ವತ್ಥ್, ಶಾಂತಮ್ಮ, ಪಾಪಮ್ಮ, ರಾಜಾನಂದ್, ಮಾಲತಿ ಹೊಳ್ಳ, ಶೋಭಾ, ಶನಿ ಮಹದೇವಪ್ಪ, ಮೈಸೂರು ಲೋಕೇಶ್, ಕಮನೀಧರನ್ ಇವರುಗಳ ಗುರುತು ಹತ್ತಿತು.
ಹರಿಜನೋದ್ಧಾರ, ಬಡಜನ ಸಹಾಯ, ರೈತರ ಉದ್ಧಾರ, ಜಾತಿಭೇದ ನಿರ್ಮೂಲನೆ… ಎಲ್ಲವೂ ಕಾದಂಬರಿಯ ಹಾಗೆಯೇ ಇದೆ. ಘಟನೆಗಳ ಜಾಗಗಳಲ್ಲಿ ಸ್ವಲ್ಪ ತಾರುಮಾರು ಆಗಿದೆ. 

ಅಣ್ಣಾವ್ರು ಮತ್ತೆ ಮೇರು ನಟನೆ. ಸರಿತಾ ಮತ್ತು ಅನಂತನಾಗ್ ಕೂಡ ಫೈನ್ ಆ್ಯಕ್ಟಿಂಗ್. 
ಚಂದದ ಚಿತ್ರ ಒಟ್ಟಾರೆ. 
ನಮಗೆ ಚಿಕ್ಕಂದಿನಿಂದಲೂ ಶಾಂತಂ ಪಾಪಂ ಎಂದು ಕೇಳಿದಾಗಲೆಲ್ಲ ಶಾಂತಮ್ಮ ಪಾಪಮ್ಮ ಎಂದು ಪುನರುಚ್ಚರಿಸಿ ರೂಢಿ. ಅಣ್ಣಾವ್ರ ಸಿನಿಮಾಗಳಲ್ಲಿ ರೆಗ್ಯುಲರ್ ಆಗಿ ಪಾತ್ರ ಮಾಡುವ ಈ ಇಬ್ಬರೂ ಒಂದೇ ಫ್ರೇಮಿನಲ್ಲಿ ಸಿಕ್ಕಿದರು! ನೋಡಿ ಆನಂದಿಸಿರಿ!

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply