ಅಪ್ಪನ ಹೆಸರಿದ್ರೂ ಅಪ್ಪನ ಹೆಸ್ರು ಮೆರಸಿ ತಾನು ಮೆರೆದು ಸ್ವಂತ ಪರಿಶ್ರಮದಿಂದ ತನ್ನದೇ ಆದಂತಹ ಅಭಿಮಾನಿಗಳ ಕೋಟೆಯನ್ನು ನಿರ್ಮಿಸಿಕೊಂಡು ಕಲಾ ದೇವಿಯ ಆರಾಧನೆ ಮಾಡುತ್ತಾ ಅಪ್ಪನ ಕಾಲದ ಹೀರೋಗಳಿಂದ ಹಿಡಿದು ಈಗೀನ ಜನರೇಶನ್ ಹೀರೋಗಳಿಗೂ ಕೂಡ ಠಕ್ಕರ್ ಕೊಟ್ಟು ದಣಿವರಿಯದೇ ನಿರಂತರ ಕಲಾ ದೇವಿಗೆ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟು ಕಲಾ ರಸಿಕರನ್ನು ಮನೋರಂಜಿಸ್ತಿರೊ ಕಲಾ ದೇವಿಯ ಸುಪುತ್ರನಿಗೆ ಇಂಡಸ್ಟ್ರೀಯ ದಿಗ್ಗಜನಿಗೆ ಮೂರುವರೆ ದಶಕಗಳ ಸಂಭ್ರಮ.
ಅಪ್ಪ ಕಾಲೇಜಿನ Dean ಆದ್ರು ಮಗ ಕಷ್ಟಪಟ್ಟು ಓದಿನೇ ಬೋರ್ಡ್ ಎಕ್ಸಾಮ್ ಪಾಸ್ ಮಾಡ್ಬೇಕು. ಅಪ್ಪ ಲೆಜೆಂಡ್ ಆದ್ರು ಮಗ ತನ್ನ ಸ್ವಂತಿಕೆಯಿಂದನೇ ಸೂಪರ್ ಸ್ಟಾರ್ ಆಗಿದ್ದು, “ಶಿವಣ್ಣ” ಅನ್ನೋ ಸ್ವಂತ ಐಡೆಂಟಿಟಿ ಪಡ್ಕೊಂಡಿದ್ದು. ತನ್ನ ತಂದೆಯ ಸಿನಿಮಾ ಸಿಲ್ವರ್ ಜ್ಯೂಬಿಲಿ ಓಡ್ತಿದ್ದ ಕಾಲದಲ್ಲೇ ತಾನು ಸಿಲ್ವರ್ ಜ್ಯೂಬಿಲಿ, ಇಂಡಸ್ಟ್ರಿ ಹಿಟ್ ಕೊಟ್ಟ ಅಪರೂಪದ ನಟ. ಈಯಪ್ಪ 1986 ಇಸವಿಯಿಂದ ತನ್ನ ಸ್ವಂತ ತಮ್ಮನಿಂದ ಹಿಡಿದು ಎಲ್ಲಾರಿಗೂ ಕಾಂಪಿಟೇಟರ್ರೇ. ಇವತ್ತು ಈ ಚಿರಯುವಕ ಚಿತ್ರರಂಗಕ್ಕೆ ಬಂದು 35 ವರ್ಷ ಆಯ್ತಂತೆ 😍
ಕೆಲವು ಹಿರೋಗಳು ಹುಟ್ಟಿ 33 ವರ್ಷನೇ ಆಗಿರಲ್ಲ, ಫಸ್ಟ್ ಸಿನಿಮಾಗೇನೆ ನೆಲದ ಮೇಲೆ ನಿಲ್ತಾ ಇರಲ್ಲ. ಇಂತಹ ಹಿರೋಗಳ ಮಧ್ಯೆ ಇಂಡಸ್ಟ್ರಿಗೆ ಬಂದು 34 ವರ್ಷ ಆಗಿದ್ರು, ಅಭಿಮಾನಿಗಳತ್ರ ನೆಡ್ಕೊಳೋ ರೀತಿ, ಅವರ ಎನರ್ಜಿ, ಅವರ ಡ್ಯಾನ್ಸ್, ಅವರ ಆಕ್ಟಿಂಗ್ 👏👏
ನಿರ್ದೇಶಕನ ನಟ ಅಂದರೆ ಶಿವಣ್ಣ. ಅಭಿಮಾನಿಗಳಿಗೆ ಯಾವಾಗ್ಲೂ ಕೈಗೆಟುಕೊ ಸ್ಟಾರ್ ಅಂದರೆ ಶಿವಣ್ಣ.
ಮತ್ತಷ್ಟು ಸಿನಿಮಾಗಳನ್ನು ಕೊಡಿ, ನಮ್ಮನ್ನ ಇನ್ನೂ ಹತ್ತಾರು ವರ್ಷ ರಂಜಿಸಿ. ಚೆನ್ನಾಗಿರಿ ✌ 😍
ಪ್ರೀತಿಯ ಶಿವಣ್ಣ ರವರಿಗೆ ಈ ಪುಟ್ಟ ಅಭಿಮಾನಿಯ ಕಲ್ಪನೆಯ ಸಾಲುಗಳು..
ಎವರ್ ಗ್ರೀನ್ ಚಿರಯುವಕ 🤩
ಬಾಕ್ಸ್ ಆಫೀಸ್ ಬ್ರಹ್ಮ❤
ಗಾಜನೂರು ಗಂಡು 💜
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ 💙
ಕರುನಾಡ ದೊರೆ 💛
ದೊಡ್ಮನೆ ನಂದಾದೀಪ 💕
ನೊಂದರ ಪಾಲಿಗೆ ಪುರುಷೋತ್ತಮ 🌷
ಅನಾಥ ಮಕ್ಕಳ ಪಾಲಿಗೆ ದೇವೃ 🌺
ಸಿಡಿದೆದ್ದರೆ ಸಿಂಹದ ಮರಿ 🌲
ತಾಯಂದಿರ ಪಾಲಿಗೆ ಜೋಗಿ 🌼
ಹೀರೋ ಹೀರೋ ಹ್ಯಾಟ್ರಿಕ್ ಹೀರೋ 🎠
ಭರತ ಚಕ್ರವರ್ತಿ 🍓
ಕರುನಾಡ ಚಕ್ರವರ್ತಿ 🍊
ಸ್ಯಾಂಡಲ್ವುಡ್ ಬಾದ್ಶಾ 🏵
ಜಗಮೆಚ್ಚಿದ ಮಗ 🦄
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ 🦆
ಕೊಹಿನೂರು ಡೈಮಂಡ್ 🌅
ದುಷ್ಟರನ್ನು ಮಟ್ಟ ಹಾಕೊ ಡಾನ್ 🎪
ರಸಿಕರ ಯುವರಾಜ 🎀
ಎನಜಿ೯ ಬೂಸ್ಟರ್ 🦜
ಮಿಂಚಿನಂತ ಯುವಕ 🐎
ಸ್ಯಾಂಡಲ್ವುಡ್ ಲೀಡರ್👑
ಆದೇ ತೇಜಸ್ಸು ಅದೇ ವಚ೯ಸ್ಸು💫
ಹೆಣ್ಣು ಮಕ್ಕಳ ಪ್ರೀತಿಯ ಅಣ್ಣ🎇
ಮುತ್ತುರಾಜರ ಪ್ರೀತಿಯ ಮುತ್ತು 🎄
9 ವಷ೯ದ ಅದೃಷ್ಟದ ನಕ್ಷತ್ರ 🔥
ಗಂಧದ ಗುಡಿಯ ನಾಯಕ 🌀
ನಾಟ್ಯ ಸಾವ೯ಭೌಮ 🕺
ಅಭಿನಯ ಚತುರ 😘
ಗೀತಕ್ಕರ ಪ್ರೀತಿಯ ಶಿವಣ್ಣ ❣️
ಪವರ್ ಸ್ಟಾರ್ ಗೆ ಇವರೇ ಇನ್ಸ್ಪಿರೇಷನ್💙
ಪ್ರೇಮಿಗಳಿಗೆ ಸ್ಪೂರ್ತಿ ಹೃದಯ ಹೃದಯ ಕವಿ 🌹
ರೌಡಿಗಳ ಪಾಲಿಗೆ ಟಗರು ಖಡಕ್ ಪೋಲೀಸ್ ಆಫಿಸರ್ 💚
ಭೂಮಿ ತಾಯಿಯ ಚೊಚ್ಚಲ ಮಗನು 🌺
ತಪ್ಪು ಮಾಡಿದವರಿಗೆ ಭೈರತಿ ರಣಗಲ್ಲು 👁🗨
ಸೆಂಚುರಿ ಸ್ಟಾರ್ 😘
ಕಣ್ಣಿನ ನಟನೆಯಲ್ಲಿ ಎಲ್ಲರಿಗೂ ಹುಚ್ಚು ಹಿಡಿಸೋ ಹೀರೋ 🔥
ಇಂದಿಗೆ ಇವರ ಸಿನಿಪಯಣ ಶುರುವಾಗಿ 35 ವರುಷಗಳು, ಆನಂದದಿಂದ ಆನಂದದ ಅಲೆಯಲ್ಲಿ ತೇಲಾಡಿ ಭಜರಂಗಿ 2 ಗಜಿ೯ಸಲು ತುದಿಗಾಲಲ್ಲಿ ನಿಂತಿರುವ ಸತತ ಪ್ರಯತ್ನದಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಮ್ಮ ಪ್ರೀತಿಯ ಶಿವಣ್ಣ ರವರಿಗೆ ಶುಭಾಶಯಗಳು 🌹💐❤
ಈ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ದೈವರನ್ನು ನೋಡಲು ಅವರ ಮನೆ ಮುಂದೆ ಸಾಲು ಸಾಲು, ಕೋವಿಡ್ ಇದ್ದರೂ ಶಿವಣ್ಣ ಅಭಿಮಾನಿಗಳಿಗೋಸ್ಕರ ಕೊಟ್ಟರು ದಶ೯ನ, ಫ್ಯಾನ್ಸ್ ಶಿವಣ್ಣ ರನ್ನ ನೋಡಿ ದಿಲ್ ಖುಷ್ ಆದ್ರೂ ಅವರ ಜೊತೆ ಒಂದು ಫೋಟೋ ತೆಗೆಸೋಕೆ ನಾ ಮುಂದು ತಾ ಮುಂದು ಹಾಗೋ ಹೀಗೋ ಬಂದ ಅಭಿಮಾನಿಗಳಿಗೆ ಬೇಸರವಾಗದಂತೆ ಎಲ್ಲರಿಗೂ ಫೋಟೋ ಕೊಟ್ಟರು ಆ ಸಾಲಿನಲ್ಲಿ ನಾನು ಕೂಡ, ಅವರ 35 ವಷ೯ಗಳ ಚಿತ್ರ ಬದುಕಿಗೆ ನಾನು ಶುಭಾಶಯಗಳು ತಿಳಿಸಿ ಅವರ ಜೊತೆ ಸಿಕ್ತು ಒಂದು ಫೋಟೋ.
ವಿಶೇಷ ಅಂದ್ರೆ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ ವತಿಯಿಂದ ಶಿವಣ್ಣರಿಗಾಗಿ ಕೇಕ್ ಸ್ಪೆಷಲ್ 35 ವಷ೯ ಮತ್ತು ಸೂಪರ್ ಹಿಟ್ ಚಿತ್ರಗಳ ಫೋಟೋ ಕೂಡ, ಶಿವಣ್ಣ ಮತ್ತು ಗೀತಕ್ಕ ಕೇಕ್ ಕತ್ತರಿಸಿದರು, ದಂಪತಿಗಳನ್ನು ಸನ್ಮಾನಿಸಲಾಯಿತು, ನಾರಾಯಣ್, ಮಲ್ಲ ಶಿವಣ್ಣ ಹಾಗೂ ನಿಮಾ೯ಪಕ ಕೆ ಪಿ ಶ್ರೀಕಾಂತ್ ರವರು ಭಾಗಿಯಾಗಿದ್ದರು. ಎಲ್ಲಾ ನಿಮಾ೯ಪಕರಿಗೂ, ನಿದೇ೯ಶಕರಿಗೂ, ಮಾಧ್ಯಮ ಮಿತ್ರರಿಗೂ ವಿಶೇಷವಾಗಿ ಅಭಿಮಾನಿ ದೇವರುಗಳಿಗೂ ಧನ್ಯವಾದಗಳು ತಿಳಿಸಿದ್ದು ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು.
ಇವರ ಸಿನಿಪಯಣ ಹೀಗೆ ಮುಂದುವರಿಯಲಿ ಮತ್ತು ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಲಿ, ಇವರು ಹಲವಾರು ಯುವ ಕಲಾವಿದರಿಗೆ ಸ್ಪೂರ್ತಿ.
ಕಿಂಗ್ ಆಫ್ ಆಲ್ ಟೈಮ್ಸ್ ಶಿವಣ್ಣ 😘💙🔥 ಲವ್ ಯೂ ಶಿವಣ್ಣ 💐
ಶಿವಣ್ಣನವರು ಮೂವತ್ತೈದು ವರ್ಷಗಳನ್ನು ಚಿತ್ರರಂಗದಲ್ಲಿ ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ಶಿವಣ್ಣನವರ ಅಪರೂಪದ ಮೂವತ್ತೈದು ಫೋಟೋಗಳು ನಿಮಗಾಗಿ :