ನಮ್ಮ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಪರದೆಯ ಮೇಲೆ ಹೇಗೆ ಬಾದ್ಷಾ ಆದ್ರೆ ಆಡುಗೆ ಮನೆಯಲ್ಲಿ ನಂಬರ್ ಒನ್ ಬಾಣಸಿಗ ಅನ್ನೊದು ಗೊತ್ತೆ ಇದೆ, ಅವರ ಬಿಡುವಿನ ಸಮಯದಲ್ಲಿ ಹೊಸ ಬಗೆಯ ಖಾದ್ಯಗಳನ್ನ ತಯಾರಿಸುತ್ತಾ ಮನೆ ಮಂದಿಯವರಿಗೆ ಹಾಗೂ ಆಪ್ತ ವಲಯದವರಿಗೆ ರುಚಿಯ ಸತ್ಕಾರ ನೀಡೋದು ವಾಡಿಕೆಯಾಗಿದೆ, ಅದಕ್ಕಂತಲೆ ಅವರ ಮನೆಯಲ್ಲಿ ಪ್ರತ್ಯೇಕವಾಗಿ ಒಂದು ಸ್ಪೆಷಲ್ ಅಡುಗೆ ಮನೆಯನ್ನ ನಿರ್ಮಿಸಿಕೊಂಡಿದ್ದಾರೆ. ಬಿಗ್ ಬಾಸ್ 5ನೆ ಆವೃತ್ತಿಯಲ್ಲಿ “ಕಿಚ್ಚನ ಟೈಂ” ಅಂತ ಪ್ರತಿ ಭಾನುವಾರ ಓರ್ವ ಅಥಿತಿಯನ್ನ ಕರೆಸಿ ತಾವೂ ಅಡುಗೆ ಮಾಡುವುದರ ಜೊತೆಗೆ ಆಹ್ವಾನಿತರ ಕೈಯಲ್ಲೂ ಅದೇ ಅಡುಗೆಯನ್ನ ಮತ್ತೊಂದು ಒಲೆಯಲ್ಲಿ ಮಾಡಿಸಿ ಹೊಸ ಬಗೆಯ ಕುಕ್ಕಿಂಗ್ ಶೋ ಕೂಡ ನಡೆಸಿಕೊಟ್ಟಿದ್ರು.
ಇದೀಗ ಪರಿಪೂರ್ಣ ಕುಕ್ಕಿಂಗ್ ಶೋ ಒಂದರ ನಿರೂಪಕರಾಗಿ ಕಾಣಿಸಲಿದ್ದಾರೆ ಕಿಚ್ಚಾ. ಸನ್ ನೆಟ್ವರ್ಕ್ ಪ್ರಸ್ತುತ ಪಡಿಸಲಿರುವ ಈ ಕಾರ್ಯಕ್ರಮ 4 ಭಾಷೆಗಳ್ಳಲಿ ಬರಲಿದ್ದು ಕನ್ನಡದ ರೂವಾರಿ ಸುದೀಪ್ ನಿರ್ವಹಿಸಲಿದ್ದಾರೆ, ವಿಶೇಷ ತಿಂಡಿ ತಿನಿಸು ಸಿದ್ದಾವಾಗುವುದರ ಜೊತೆಗೆ ಮನೋರಂಜನೆಯು ಒಗ್ಗೂಡಿ ನವ ನವೀನವಾಗಿರುವುದು. 65 ಎಪಿಸೋಡ್ ಗಳು ಇರುವ ಶೋ ಅತಿ ದೊಡ್ಡ ಮಟ್ಟದ್ದಲ್ಲಿ ಹೊರ ಹೊಮ್ಮಲಿದೆ. ತೇಲುಗಿನಲ್ಲಿ ನಟ ವೆಂಕಟೇಶ್, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಪ್ರಸ್ತುತ ಪಡಿಸಲಿದ್ದಾರೆ.