ಈ ವಾರ “ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್” ಅಭಿಮಾನಿಗಳಿಗಂತೂ ಡಬಲ್ ಧಮಾಕಾ!!
ಮೊದಲಿಗೆ 20/02/2020ರಂದು ಮುಂಬಯಿಯಲ್ಲಿ ಅವರಿಗೆ “ದಾದ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್”ನೀಡಲಾಗಿದೆ .ಕಿಚ್ಚ ಸುದೀಪ್ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಸ್ವೀಕರಿಸಿದರು. ದಬಾಂಗ್-3ಯಲ್ಲಿ, ಸಲ್ಮಾನ್ ಖಾನ್ ಎದುರು ವಿಲನ್ನಾಗಿ ನಟಿಸಿದ್ದ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ ಜೊತೆಗೆ ಅವಾರ್ಡ್ ಕೂಡ ದೊರಕಿದೆ.
ಮತ್ತೊಂದೆಡೆ ಮಹಾ ಶಿವರಾತ್ರಿಯ ಶುಭ ದಿನದಂದು, “ಕೋಟಿಗೊಬ್ಬ-3” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ವರ್ಷ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರವಿದಾಗಿದ್ದು, ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಚಿತ್ರದ ಒಂದು ಸಣ್ಣ ಝಲಕ್ ಅಷ್ಟೇ ಇದು,ಅದುವೇ ಈ ಮಟ್ಟಿಗಿದೆ ಎಂದರೆ ಇನ್ನು ಇಡೀ ಸಿನಿಮಾ ಎಷ್ಟು ಬೃಹತ್ತಾಗಿ ಇರಬಹುದು ಎಂಬುದು ಎಲ್ಲರ ಕುತೂಹಲ. ಅಭಿಮಾನಿಗಳಲ್ಲಿ ಎತ್ತರದ ನಿರೀಕ್ಷೆ ಹುಟ್ಟಿಸಿದೆ . ಕೋಟಿಗೊಬ್ಬ3 ಸಿನಿಮಾ ಡಬ್ಬಿಂಗ್ ಹಂತದಲ್ಲಿದ್ದು ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಿಚ್ಚ ಪ್ರಸ್ತುತ ಅನೂಪ್ ಭಂಡಾರಿ ನಿರ್ದೇಶನದ “ಫಂಟೋಮ” ಸಿನಿಮಾಗಾಗಿ ಹೊಸ ಲುಕ್ಕಿನೊಂದಿಗೆ ಬರಲಿದ್ದಾರೆ, ಚಿತ್ರಕ್ಕೆ ಬೇಕಾದ ಎಲ್ಲ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ.