ಕೇಂದ್ರ ಸರ್ಕಾರದ ಕಾರ್ಯಕ್ರಮಕ್ಕೆ ಕಿಚ್ಚಾಸುದೀಪ್ ಮುಖ್ಯ ಅತಿಥಿ!
ಪ್ರತಿ ವರ್ಷ ನಡೆಯುವ ಅಂತರ ರಾಷ್ಟ್ರೀಯ ಚಿತ್ರೋತ್ಸವ IFFI (International Film Festival of India) ಗೋವಾದಲ್ಲಿ ನಡೆಯಲಿದ್ದು, ಪ್ರಪಂಚದಾದ್ಯಂತ ನಿರ್ಮಿತವಾದ ಸದಭಿರುಚಿ ಸಿನಿಮಾಗಳನ್ನ ಪ್ರದರ್ಶಿಸುವುದರ ಜೊತೆಗೆ ಹಲವು ಹಿರಿಯ ಸಿನಿಮಾ ತಯಾರಕರು ಹಾಗೂ ತಂತ್ರಜ್ಞಯರ ಸಾಧನೆಗಳನ್ನ ಗುರುತಿಸಿ ಅವರುಗೆ ಸನ್ಮಾನ , ಗೌರವಾರ್ಪಣೆಯ ಸಲ್ಲಿಸುವ ವೇದಿಕೆಯು ಇದಾಗಿದೆ, ಭಾರತದ ಕೇಂದ್ರ ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿಯನ್ನಹೊತ್ತಿರುತ್ತದೆ. ಕೇಂದ್ರ ಮಂತ್ರಿಗಳು, ದೇಶ ಕಂಡಂತಹ ಅತ್ಯುತ್ತಮ ಕಲಾ ದಿಗ್ಗಜರುಗಳುಒಕ್ಕೂಟವೇ ಇದರಲ್ಲಿ ಭಾಗಿಯಾಗಿ ಕಲಾ ಜಗತ್ತಿನ ಸಿಂಹಾವ ಲೋಕನವಾಗಲಿದೆ.
ಈ ಭಾರಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನದಿಗರೆಲ್ಲಾ ಹೆಮ್ಮೆ ಪಡುವ ವಿಷಯವೊಂದಿದೆ, ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಅವರ ಕೀರ್ತಿ-ಖ್ಯಾತಿ ನಮ್ಮ ರಾಜ್ಯಕ್ಕಷ್ಟೇ ಸೀಮಿತವಾಗದೆ ಹೊರ ರಾಜ್ಯಗಳಲ್ಲು, ಹೊರ ದೇಶದಲ್ಲಿಯೂ ಅಭಿಮಾನಿ ಪಡೆಯನ್ನ ಹೊಂದಿದ್ದಾರೆ. ಕಲೆಗೆ ಗಡಿಯುಂಟೆ? ನಿರ್ಬಂಧವಿದಿಯೇ.. ಅದಕ್ಕೆ ಅಭಿಮಾನಿಗಳು ಅವರನ್ನ ಪ್ರೀತಿಯಿಂದ “ಕಲಾ ಭೂಷಣ” ಅಂತ ಕೂಡ ಅಮೋದಿಸುತ್ತಾರೆ. ಥಿಯೇಟರಿನ ಬೆಳ್ಳಿ ಪರದೆಯೇ ಮೇಲೆ ವಿಜೃಂಭಿಸುವ ಆರಡಿ ಕಟ್ ಔಟ್ ಈ ಸಾರ್ತಿIFFI ಯ ವೇದಿಕೆ ಮೇಲೆ ರಾರಾಜಿಸಲಿದೆ..ಈ ಪ್ರತಿಷ್ಟಿತ ಕಾರ್ಯಕ್ರಮದಲ್ಲಿ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರ ಕನ್ನಡ ಸಿನಿಮಾದ ಓರ್ವ ನಟರನ್ನು ಗುರುತಿಸಿ ಇಂತಹ ವಿಶೇಷ ಆಹ್ವಾನ ನೀಡುತ್ತಿರುವುದು ಇದೆ ಮೊದಲು. ಈ ಹೆಗ್ಗಳಿಕೆ ಸುದ್ದೀಪ್ ಅವರ ಕೀರ್ತಿಯನ್ನ ಹೆಚ್ಚಿಸಲಿದ್ದು, ಅಲ್ಲಿ ದೊರಕುವ ನೆನಪಿನ ಕಾಣಿಕೆ ಅವರ ಷೋಕೇಸ್ಅಲಂಕರಿಸಲಿದೆ. ಒಟ್ಟಾರೆಯಾಗಿ ಅವರಿಗೆ ದ್ದಕ್ಕಲಿರುವ ಈ ಗೌರವ ವಿಶೇಷ ಅದಕ್ಕೆ ಅಕ್ಷರಶಃ ಅವರು ಅರ್ಹರು..
ಇಲ್ಲಿ ಪ್ರಸ್ತಾಪವಾಗಲೇಬೇಕಾದ ಮತ್ತೊಂದು ವಿಷಯವಂದರೆ, ಈ ಸಂಸ್ಥೆ (IFFI) ಮೊದಲ ಬಾರಿ ನೀಡಿದ ಅತ್ಯುತ್ತಮ ನಟ ಪ್ರಶಸ್ತಿಯನ್ನಪಡೆದಿದ್ದು ನಮ್ಮೆಲ್ಲರ ಪ್ರೀತಿಯ ಶಂಕರಣ್ಣ .. ಶಂಕರನಾಗ್ಅವ್ರು. ಅವರು ಅಭಿನಯದ ಪ್ರಥಮ ಚಿತ್ರಾವದ “ಒಂದಾನೊಂದುಕಾಲದಲ್ಲಿ“ನ ಅಮೋಘ ಅಭಿನಯಕ್ಕಾಗಿ ಅವರಿಗೆ ಸಂದ ಪ್ರಶಸ್ತಿ ಇದು.. ಕೇಂದ್ರ ಸರ್ಕಾರದ ಕಾರ್ಯಕ್ರಮಕ್ಕೆ ಕಿಚ್ಚಾಸುದೀಪ್ ಮುಖ್ಯ ಅತಿಥಿ!