1981ರ ಈ ಚಿ. ದತ್ತರಾಜ್ ನಿರ್ದೇಶನದ ಚಿತ್ರದ ಅಭಿನಯಕ್ಕೆ ಅಣ್ಣಾವ್ರು ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದರು.
ತಾಯಿ ಸೆಂಟಿಮೆಂಟು ಅಣ್ಣಾವ್ರಿಗೆ ತೊಂದರೆ ಕೊಡಲು ನಡೆದರೆ ಸರಿತಾಗೆ ಮಾಡಬಾರದ ಕೆಲಸ ಮಾಡಲು ದುಷ್ಟರು ಬಳಸಿಕೊಳ್ಳುತ್ತಾರೆ. ತೂಗುದೀಪ ಶ್ರೀನಿವಾಸ್ ಆದೇಶದ ಮೇರೆಗೆ ಸುಧೀರ್ ಇನ್ಸ್ಪೆಕ್ಟರ್ ಶಂಕರ್ (ಅಣ್ಣಾವ್ರು) ಮತ್ತು ಇನ್ಸ್ಪೆಕ್ಟರ್ ಶ್ರೀಧರ್ (ಶ್ರೀನಿವಾಸಮೂರ್ತಿ) ತಾಯಿ ಪಂಢರೀಬಾಯಿಯನ್ನು ವಿಷಭರಿತ ಸೇಬು ನೀಡಿ ಕೊಲ್ಲುತ್ತಾನೆ. ಸರಿತಾಳ ತಾಯಿ ಶಾಂತಮ್ಮನನ್ನು ಮುಚ್ಚಿಟ್ಟು ಸರಿತಾಳನ್ನು ತನ್ನ ಲಾಯರ್ ಮಾಡಿಕೊಳ್ಳುತ್ತಾನೆ ಶನಿ ಮಹದೇವಪ್ಪ. ಸತೀಶ್ ಟಿಪಿಕಲ್ ಬ್ಯಾಡ್ ಬಾಯ್. ರೌಡಿ ವೇಷದ ಮಫ್ತಿ ಪೊಲೀಸ್ ಶಕ್ತಿಪ್ರಸಾದ್ ಸಖತ್ ಪಾತ್ರ.
ಎಂ ರಂಗರಾವ್ ಸಂಗೀತ ನಿರ್ದೇಶನದಲ್ಲಿ ಒಂದು ಮಾತು ನನಗೆ ಗೊತ್ತು(ರಾಜ್ಕುಮಾರ್ ಮತ್ತು ಸುಲೋಚನಾ) … ತಿಳಿಯದೇ ನನಗೆ ತಿಳಿಯದೇ(ಅಣ್ಣಾವ್ರು) … ಅಮ್ಮಾ ನೀನು ನಮಗಾಗಿ (ರಾಜ್ಕುಮಾರ್ ಮತ್ತು ಪಿಬಿಎಸ್) ಮತ್ತು ಏನೋ ದಾಹ ಏಕೋ ಮೋಹ(ರಾಜ್ಕುಮಾರ್ ಮತ್ತು ವಾಣಿ ಜಯರಾಂ) … ಹಾಡುಗಳಿವೆ.
ಎಲ್ಲಾ ಎಮೋಶನ್ಗಳನ್ನು ಅಣ್ಣಾವ್ರು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದಾರೆ ಅನ್ನುತ್ತಿದ್ದಂತೆ ಮೀನಿಗೆ ಈಜು ಸಹಜ ಎಂಬ ಮಾತು ನೆನಪಾಯಿತು. ಸೇಡಿನ ಕಥೆ… ದುಷ್ಟರ ಅತಿರೇಕ ಮತ್ತು ಸಜ್ಜನರ ತೊಂದರೆಗಳು… ಮಹಾಭಾರತದ ಒಂದು ಪುಟ…
ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!