ಕನ್ನಡ ಚಿತ್ರರಂಗದ ಹೆಸರಾಂತ ನಿಮಾ೯ಪಕರು ಕೆ ಸಿ ಎನ್ ಚಂದ್ರಶೇಖರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೆ ಸಿ ಎನ್ ಚಂದ್ರಶೇಖರ್ ರವರು ಬಹು ಅಂಗಾಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಬದ್ದತೆ ಮತ್ತು ಸಾಹಸಕ್ಕೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಇವರು ಉತ್ಕೃಷ್ಟ ಚಿತ್ರಗಳನ್ನು ನಿರ್ಮಾಣ ಮಾಡಿದವರು , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಭಾರಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು , ತಂದೆ ಕೆ.ಸಿ.ಎನ್.ಗೌಡರ ಮಾರ್ಗದರ್ಶನದಲ್ಲಿ ಚಲನಚಿತ್ರ ನಿರ್ಮಾಣ ಪ್ರದರ್ಶನ ಚಿತ್ರ ವಿತರಣೆಯಲ್ಲಿ ಅಪಾರ ಅನುಭವಗಳಿಸಿದ್ದರು , ಬೆಂಗಳೂರಿನ “ನವರಂಗ್ ” “ಊರ್ವಶಿ” ಮತ್ತು ದೊಡ್ಡಬಳ್ಳಾಪುರದ
“ರಾಜ್ ಕಮಲ್ ” ಚಿತ್ರಮಂದಿರದ ಮಾಲೀಕರಾಗಿ ಪ್ರದರ್ಶಕರಾಗಿದ್ದವರು , ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದ ಇವರು
“ದಾರಿ ತಪ್ಪಿದ ಮಗ ” “ಹುಲಿಯ ಹಾಲಿನ ಮೇವು” “ಬಬ್ರುವಾಹನ” “ಅಂತ ” ಮುಂತಾದ ಶ್ರೀಮಂತ ಚಿತ್ರಗಳನ್ನ ನಿರ್ಮಿಸಿದ್ದರು ,
ಸರವಣ , ಕುತ್ತು ತಮಿಳು ಚಿತ್ರ, ಮಹಾಗುರು ಹಿಂದಿ ಚಿತ್ರ, ಮಸಾಲ, ಧಮ೯ ಯುದ್ಧ , ನಲ್ಲ ಜೊತೆಗೆ ಸುಮಾರು 50 ಚಲನಚಿತ್ರ ನಿಮಾ೯ಣ ಮಾಡಿದವರು.
ತಂದೆ ಪ್ರಖ್ಯಾತ ನಿಮಾ೯ಪಕರು ಕೆ ಸಿ ಎನ್ ಗೌಡ,
ಸುಮಾರು ಐನೂರು ಚಿತ್ರಗಳನ್ನ ವಿತರಣೆ ಮಾಡಿದ್ದರು , ಸೆನ್ಸಾರ್ ಮಂಡಳಿಗೆ ಸದಸ್ಯರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ್ದರು , ಪನೋರಮಾ ವಿಭಾಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ತೀರ್ಪುಗಾರಾಗಿ , ಮುಂಬೈನ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿ , ಆಯ್ಕೆಯಾಗಿದ್ದರು , ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಲವಾರು ಬದಲಾವಣೆ ತಂದವರು ಈ ನನ್ನ ಈ ಚಟುವಟಿಕೆಗಳಿಗೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರೆ ಕಾರಣಕರ್ತರು ಎಂದು ತುಂಬು ಹೃದಯದಿಂದ ರಾಜ್ ಮನೆತನಕ್ಕೆ ಅಭಿನಂದನೆಗಳು ಸಲ್ಲಿಸಿತ್ತಿದ್ದರು , ಶೇಷಾದ್ರಿಪುರದ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಸುಮಾರು ನೂರವೈತ್ತು ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದರು.
ತಂದೆಯ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದ ಕೆ ಸಿ ಎನ್ ಚಂದ್ರಶೇಖರ್ ರವರು “ಶಂಕರ್ ಗುರು” ಚಿತ್ರಕ್ಕೆ ಸಹ ನಿಮಾ೯ಪಕರು.
“ನಾನೊಬ್ಬ ಕಳ್ಳ ” ಚಿತ್ರದಲ್ಲಿ ಅಭಿನಯಿಸಿದ್ದ ಇವರು ನಿಮಾ೯ಪಕರಾಗಿ, ಡಿಸ್ಟ್ರಿಬ್ಯೂಟರ್ ಆಗಿ, ಪ್ರೆಸೆಂಟರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಇವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ.
ಮತ್ತೆ ಹುಟ್ಟಿ ಬರಲಿ 🙏