“ದಾನಗಳಲ್ಲೇ ಶ್ರೇಷ್ಠವಾದ ದಾನ ವಿದ್ಯಾದಾನ”, ವಿದ್ಯೆಗಿಂತ ಮಿಗಲಾದದ್ದು ಯಾವುದು ಇಲ್ಲಾ ಅನ್ನೋದು ಜಗತ್ ಜಾಹಿರಾತಾಗಿರುವ ವಿಷಯ, ವಿದ್ಯೆ “ಅಕ್ಷರ” ರೂಪದಲ್ಲಿ ಅಚ್ಚೋತ್ತಿ ವಿನಿಮಯವಾದಾಗ ಅದು ಚಿರಸ್ಥಾಯಿಯಾಗಿ ಉಳಿದು ಒಂದು ಪ್ರಜ್ಞಾವಂತ ಪರಂಪರೆಗೆ ಬುನಾದಿ ನಾಂದಿಗೆ ಕಾರಣವಾಗುತ್ತದೆ. ವಿದ್ಯೆ ವ್ಯಾಪಾರವಾಗಬಾರದು, ವಾಣಿಗೂ ವಾಣಿಜ್ಯಕ್ಕೂ ಸೇತುವೆ ಕಟ್ಟಬಾರದು ಅನ್ನೋ ಎಳೆಯನ್ನ ಆಧರಿಸಿ “ಕ್ರಾಂತಿ” ತಾಯಾರಾಗ್ತಿದೆ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ವಿ. ಹರಿಕೃಷ್ಣ ನಿರ್ದೇಶನದಲ್ಲ, ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ “ಕ್ರಾಂತಿ” ಸಿನಿಮಾ ಇತ್ತೀಚೆಗಷ್ಟೇ ಸರಳವಾದ ಮುಹೂರ್ತ ಪೂಜೆ ನೆರವೇರಿಸಿ, ಬೆಂಗಳೂರಿನ ಸುತ್ತ ಮುತ್ತಲ್ಲ ಪ್ರದೇಶಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾದಲ್ಲಿ “ಬುಲ್ ಬುಲ್” ನಾಯಕಿ ರಚಿತಾ ರಾಮ್ ದರ್ಶನರಿಗೆ ಜೋಡಿಯಾಗಲಿದ್ದಾರೆ.
ಯಜಮಾನ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಮತ್ತೆ ಈ ತಂಡ ಹೊಸ ಕ್ರಾಂತಿಯನ್ನ ರುಜುಮಾಡಲು ಒಗ್ಗೂಡಿದೆ. ಕ್ರಾಂತಿಯಂದ್ರೆ ಇಂಗ್ಲಿಷಿನಲ್ಲಿ ” ರೆಬೆಲ್” ಎಂದರ್ಥ, ರೇಬೆಲ್ಲಿಗೂ ಡಿ-ಬಾಸಿಗೀ ಮುಗಿಯದ ಮುರಿಯದ ನಂಟು ಅನ್ನೊದು ಈ ಸಿನಿಮಾ ಮುಖೇನ ಮತ್ತೊಮ್ಮೆ ಸಾಬೀತಾಗಲಿದೆ.