ಕ್ರಿಯೇಟಿವ್ ಡೈರೆಕ್ಟರ್ ಕೆ ಎಸ್ ರವಿಕುಮಾರ್ – ಹ್ಯಾಪಿ ಬರ್ತ್‌ಡೇ 💐💙👑💐

ತಮಿಳು ಚಿತ್ರರಂಗದಲ್ಲಿ ತಮ್ಮ ನೇಟಿವಿಟಿಗೆ ತಕ್ಕಂತೆ ಗ್ರಾಮೀಣ ಸೊಗಡು , ಭಾಷಾ, ಸಂಸ್ಕೃತಿ ಇರುವ ಚಿತ್ರಗಳನ್ನು ನಿದೇ೯ಶನ ಮಾಡಿ ಚಿತ್ರಗಳಲ್ಲಿ ಹಲವು ಬಗೆಯ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಿ ಚಿತ್ರ ಯಶಸ್ವಿಯಾಗಲು ಕಾರಣವಾದ ನಿದೇ೯ಶಕರು ಇವರು.
ಚಿತ್ರ ಬರಹಗಾರ, ನಿಮಾ೯ಪಕ, ನಟರಾಗಿ ವಿಶಿಷ್ಟ ಚಿತ್ರಗಳನ್ನು ನೀಡಿದ ಶ್ರೀ ಕೆ ಎಸ್ ರವಿಕುಮಾರ್ ರವರಿಗೆ ಜನುಮ ದಿನದ ಶುಭಾಶಯಗಳು 💐💙💐

ಕಾಮಿಡಿ, ಟ್ರಾಜಿಡಿ, ಆಕ್ಷನ್ ಥ್ರಿಲ್ಲರ್ ಸುಮಾರು 45 ಕ್ಕೂ ಹೆಚ್ಚಿನ ಚಿತ್ರಗಳು ನಿದೇ೯ಶಿಸಿದ್ದಾರೆ.

ನಿದೇಶನದ ಮೊದಲು ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿದೇ೯ಶಕರಾಗಿ ಕೆಲಸ ಮಾಡಿದ್ದಾರೆ, ಪುದು ವಸಂತಂ.

ಇವರ ನಿದೇ೯ಶನದ ಕೆಲವು ಚಿತ್ರಗಳು :
ಚೇರನ್ ಪಾಂಡಿಯನ್, ಊರು ಮಯಾ೯ದೈ, ಪೊಂಡಾಟಿ ರಾಜ್ಯಂ, ಬ್ಯಾಂಡ್ ಮಾಸ್ಟರ್, ಶಕ್ತಿವೇಲ್, ನಾಟ್ಟಾಮೈ, ಪೆರಿಯ ಕುಟುಂಬಂ, ಮುತ್ತು, ಅವ್ವೈ ಶಣ್ಮುಖಿ, ಪಿಸ್ತ, ನಟ್ಪುಕ್ಕಾಗ, ಪಡೆಯಪ್ಪ, ಪಾಟ್ಟಾಳಿ, ತೆನಾಲಿ, ಪಂಚತಂತ್ರಂ, ದಶಾವತಾರಂ, ಆದವನ್, ಲಿಂಗಾ.

ನಿಮಾ೯ಪಕರಾಗಿ ತೆನಾಲಿ ಚಿತ್ರ ನಿಮಾ೯ಣ.

ಕೊಚಡಿಯಾನ್ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

🌹ಪ್ರಯೋಗಾತ್ಮಕ ಚಿತ್ರ ಮಾಡಿ ಸೈ ಅನ್ನಿಸಿಕೊಂಡವರು, 5 ಜನ ಸ್ನೇಹಿತರು ದಕ್ಷಿಣ ಭಾರತದ ಖ್ಯಾತ ನಟರು ರಮೇಶ್, ಜಯರಾಂ, ಮತ್ತಿತರರು ಕಮಲ್ ಹಾಸನ್, ಸಿಮ್ರಾನ್, ರಮ್ಯಕೃಷ್ಣ ನಟನೆಯ ಫುಲ್ ಕಾಮಿಡಿ ಫಿಲಂ ಪಂಚತಂತ್ರಂ,

💜ಕಮಲ್ ಹಾಸನ್ ದ್ವಿಪಾತ್ರದಲ್ಲಿ ನಟಿಸಿದ ಅವ್ವೈ ಶಣ್ಮುಖಿ, ಮತ್ತೆ ಇದೇ ನಟ 10 ಪಾತ್ರಗಳಲ್ಲಿ ದಶಾವತಾರಂ ಚಿತ್ರ ನಟನೆ.

❤ಚಿತ್ರಗಳಲ್ಲಿ ವಿವಿಧ ಡೈಲಾಗ್ ಡೆಲಿವರಿ, ಮುತ್ತು ಚಿತ್ರದ ಕಥೆ, ಮಲಯಾಳಂ ಭಾಷೆ ಪ್ರಯೋಗ, ಹಾಡುಗಳು, ಇನಿಕ್ಕಿ ಅರಿಚ್ಚಿ ಒರು ಉಮ್ಮ ತರೂ.. ಪಡೆಯಪ್ಪ ಚಿತ್ರದ ಡೈಲಾಗ್, ಹಾಡುಗಳು, ರಮ್ಯ ಕೃಷ್ಣನ್ ನಟನೆ, ನೃತ್ಯ, ಹುತ್ತದಿಂದ ಹಾವು ತೆಗೆವ ರಜಿನಿ ಇಂಟ್ರಡಕ್ಷನ್ ಸೀನ್.

👒ಊರಿನ ಯಜಮಾನ ಅವರ ಪೂವ೯ಜರ ಕಥೆ, ಅಲ್ಲಿಯ ಗ್ರಾಮೀಣ ಭಾಷೆ, ನ್ಯಾಯ ತೀಮಾ೯ನಿಸುವ ಬಗೆ. ಹಾಡುಗಳು. ನಾಟ್ಟಾಮೈ ಚಿತ್ರ. (ಕನ್ನಡದಲ್ಲಿ ಸಿಂಹಾದ್ರಿಯ ಸಿಂಹ).

🎩ಸ್ನೇಹದ ಬಾಂಧವ್ಯ ಹೇಗಿರುತ್ತೆ, ನಿಜವಾದ ಸ್ನೇಹಿತರು ಯಾರು ಸ್ನೇಹ ಕಾಪಾಡಲು ಗೆಳೆಯ ಮಾಡಬಾರದ ತಪ್ಪಿಗೆ ಶಿಕ್ಷೆ ಅನುಭವಿಸೋ ಚಿತ್ರ ನಟ್ಪುಕ್ಕಾಗ (ಕನ್ನಡದಲ್ಲಿ ದಿಗ್ಗಜರು).

🧡ಜನ ನೀರಿಗಾಗಿ ಪರದಾಡುವ ಸ್ಥಿತಿಯನ್ನು ನೋಡಲಾಗದೆ ಒಳ್ಳೆಯದನ್ನು ಮಾಡುವ ರಜನಿ, ನೈಜವಾಗಿ ಚಿತ್ರಸಿದ ಚಿತ್ರ ಲಿಂಗಾ

ಪುದು ವಸಂತಂ, ದೋಸ್ತು, ತಮಿಳ , ಅರುಳ್, ತಲೈ ನಗರಂ, ಇಂಗೆ ಎನ್ನ ಸೊಲ್ಲುದು, ತಂಗ ಮಗನ್, ರೆಕ್ಕ, ರೆಮೋ, ಮುತ್ತು, ಅಯೋಗ್ಯ, ಕೋಮಾಳಿ ಇನ್ನೂ ಹಲವಾರು… ನಟನೆ, ಇವರು ತೆರೆಯ ಮೇಲೆ ಒಂದು ದೃಶ್ಯ ಬಂದರೆ ಜನರು ತುಂಬಾ ಇಷ್ಟ ಪಡುವ ನಟರು.

ರಜಿನಿಕಾಂತ್, ಕಮಲ್ ಹಾಸಸ್, ಶರತ್ ಕುಮಾರ್, ಸೂರ್ಯ, ಸಿಂಬು, ಕಾತಿ೯ಕ್, ನಟರಿಗೆ ನಿದೇ೯ಶನ ಮಾಡಿರುವರು.

ಹಿಂದಿಯ ಸಂಜಯ್ ದತ್ ರವರಿಗೆ ಪೋಲೀಸ್ ಗಿರಿ ಚಿತ್ರ ನಿದೇ೯ಶನ, ತೆಲುಗಿಗೆ ಸ್ನೇಹಂ ಕೋಸಂ.

ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ – 2 ಚಿತ್ರ ನಿದೇ೯ಶನ ಮಾಡಿ ಕನ್ನಡಿಗರಿಗೆ ಇನ್ನೂ ಹತ್ತಿರವಾದರು, ಆಕ್ಷನ್ ಥ್ರಿಲ್ಲರ್ ಚಿತ್ರ.

ಇವರು ಚಿತ್ರೀಕರಣ ಮಾಡುವ ಸ್ಥಳ ಮೈಸೂರು ಮತ್ತು ಸುತ್ತ ಮುತ್ತ.
ಚಿತ್ರದ ಕೊನೆಯಲ್ಲಿ ಇವರ ಹೆಸರು ವಿಶೇಷವಾಗಿ ತೋರಿಸೋದು ಗಮನಿಸಬಹುದು.

ಇವರ ನಿದೇ೯ಶನದ ಚಿತ್ರಗಳ ಕೆಲವು ಸಾಲುಗಳು

ಒರುವನ್ ಒರುವನ್ ಮುದಲಾಳಿ, ಎಂಪೇರು ಪಡೆಯಪ್ಪ, ಕೊಟ್ಟಾಪಾಕು ಕೊರುಂದು ವೆತ್ತಲೆ, ವೇಯ್ ರಾಜ ವೇಯ್, ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ, ಓ ನಂಬಾ ನಂಬಾ, ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ..

30 ವಷ೯ ಚಿತ್ರರಂಗದ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

🐧ನಟ್ಪುಕಾಗ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಫಿಲಂ ಫೇರ್ ಮತ್ತು ತಮಿಳುನಾಡು ಸಕಾ೯ರ ಪ್ರಶಸ್ತಿ.
👑ಪಡೆಯಪ್ಪ ಚಿತ್ರಕ್ಕೆ ಅತ್ಯುತ್ತಮ ಚಿತ್ರ ತಮಿಳುನಾಡು ಸಕಾ೯ರ ಪ್ರಶಸ್ತಿ.
🐴ವರಲಾರು ಚಿತ್ರಕ್ಕೆ ಅತ್ಯುತ್ತಮ ನಟ ವಿಜಯ್ ಟಿವಿ ಅವಾಡ್೯.

ಇಂಥ ಪ್ರಬುದ್ಧ ನಿದೇ೯ಶಕರ ಬತ್ತಳಿಕೆಯಿಂದ ಇನ್ನೂ ಹಲವಾರು ಚಿತ್ರಗಳು ಬರಲಿ ಎಂದು ಆಶಿಸೋಣ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply