ನಾಡಿನ ಸಮಸ್ತ ಜನರಿಗೆ 72ನೇ ಗಣರಾಜ್ಯೋತ್ಸವದ ಶುಭಾಶಯಗಳು 💐🌹.
ಪ್ರತೀ ವರ್ಷದ ಜನವರಿ 26ರಂದು ಆಚರಿಸಲಾಗುವ ದಿನಾಚರಣೆ, ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26 1950ರಂದು, ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಈ ದಿನ ಭಾರತದಾದ್ಯಂತ ಸಕಾ೯ರಿ ರಜಾ ದಿನ, ಸಾಮಾನ್ಯವಾಗಿ ಪ್ರಾಥಮಿಕ ಫ್ರೌಢಶಾಲೆಗಳಲ್ಲಿ ಇದರ ಪ್ರಯುಕ್ತ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳುವುದುಂಟು, ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ.
ಭಾರತದ ಸಂವಿಧಾನದ ಆರಂಭ, ಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸು ವಿತರಣೆ, ಬಾವುಟ ಹಾರಿಸುವುದು..
ಸಂಗೊಳ್ಳಿ ರಾಯಣ್ಣನನ್ನು ನೆನೆಯದಿದ್ದರೆ ಅವನು ದೇಶಭಕ್ತನೆ ಅಲ್ಲ…..
ಸೂರ್ಯನ ಕಿರಣಗಳಂತೆ ರಾಯಣ್ಣನ ನೋಟ…
ಉಕ್ಕಿನಂತ ಮೈಕಟ್ಟು… ಸಿಂಹದಂತ ಗುಂಡಿಗೆ…
ಎದುರಾಳಿಯ ಎದೆ ಸೀಳಿ ದೇಶಭಕ್ತಿಯನ್ನು ತುಂಬುತ್ತಿದ್ದ ಚೆನ್ನಮ್ಮನ ಬಂಟ ನಮ್ಮ ರಾಯಣ್ಣ…
ರಾಯಣ್ಣ ನಮ್ಮ ಭಾರತದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ….
ಅದರಲ್ಲಿಯೂ ನಮ್ಮ ರಾಜ್ಯದಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯವೇ ಸರಿ…🙏🙏🙏
ಸೂರ್ಯ ಚಂದ್ರ ಇರುವವರೆಗೂ ರಾಯಣ್ಣನು ಇರುವನು….
190 ನೇ ಪುಣ್ಯಸ್ಮರಣೆ… ಜನವರಿ 26 ರಾಯಣ್ಣನ ಬಲಿದಾನದ ದಿನ.
ನಾನು ಕನ್ನಡಿಗ, ನಂತರ ಭಾರತೀಯ.
ಇದೇ ಸುಸಂದಭ೯ದಲ್ಲಿ ಸಂಗೀತ ಪ್ರೇಮಿಗಳಿಗೆ ಸಿಹಿ ಸುದ್ದಿ ಕೇಂದ್ರ ಸಕಾ೯ರ ನೀಡಿದೆ.
ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಅಭಿಮಾನಿಗಳಿಗೆ ವಿವಿಧ ರೀತಿಯಲ್ಲಿ ಹಾಡಿ ಮನರಂಜಿಸಿದ ಸಾಧಕರಿಗೆ 2 ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಲಾಗಿದೆ.
🦋ಇತ್ತೀಚೆಗೆ ಕೋಟ್ಯಾಂತರ ಅಭಿಮಾನಿಗಳು ಒಂದು ಧ್ವನಿಯನ್ನು ತುಂಬಾ ಮಿಸ್ ಮಾಡ್ಕೊತಿದ್ದಾರೆ, ಅವರೇ ಗಾನ ಗಾರುಡಿಗ ಡಾ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್, ಇವರಿಗೆ ಭಾರತ ಸರ್ಕಾರ “ಪದ್ಮ ವಿಭೂಷಣ ” ಪ್ರಶಸ್ತಿ ಪ್ರಕಟಮಾಡಿದೆ, ಪ್ರಶಸ್ತಿ ಬಂದಿದ್ದಕ್ಕೆ ಅಭಿಮಾನಿಗಳು ಒಂದು ಕಡೆ ಸಂತಸ ವ್ಯಕ್ತಪಡಿಸಿದ್ದರೆ ಇನ್ನೊಂದು ಕಡೆ ಅವರು ಇರುವಾಗ ಪ್ರಶಸ್ತಿ ಬಂದಿದ್ದರೆ ಇನ್ನೂ ಹೆಮ್ಮೆ ಪಡುವಂತದಾಗಿತ್ತು.
🦚ಮತ್ತೊಂದು ಧ್ವನಿ ಸಹ ಸದಾ ನಾವು ಗುನುಗುತ್ತಿರುತ್ತೇವೆ, ಅವರೇ ಗಾನ ಕೋಗಿಲೆ ಕೆ ಎಸ್ ಚಿತ್ರ ಅಮ್ಮ ಅವರಿಗೆ ಭಾರತ ಸರ್ಕಾರ “ಪದ್ಮ ಭೂಷಣ ” ಪ್ರಶಸ್ತಿ ಪ್ರಕಟಿಸಲಾಗಿದೆ.
ಪ್ರಶಸ್ತಿಗಳ ಬಗ್ಗೆ ಸ್ವಲ್ಪ ತಿಳಿದಿರಲಿ :-
🌻ಪದ್ಮವಿಭೂಷಣ ಪ್ರಶಸ್ತಿ : ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ , ಭಾರತದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ.
🌲ಪದ್ಮಭೂಷಣ ಪ್ರಶಸ್ತಿ : ಉನ್ನತ ಕ್ರಮಾಂಕದ ವಿಶಿಷ್ಟ ಸೇವೆಗಾಗಿ, ಭಾರತದ ಮೂರನೇ ಅತಿ ಹೆಚ್ಚು ನಾಗರೀಕ ಪ್ರಶಸ್ತಿ.
ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿ ವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸುವರು.
ಇಬ್ಬರು ಸಂಗೀತ ಸಾಧಕರಿಗೆ ಅಭಿನಂದನೆಗಳು 🌹ಎಸ್ ಪಿ ಬಿ ಸರ್ ನಮ್ಮೊಡನೆ ಇರದಿದ್ದರೂ ಅವರ ಗಾಯನ ಮತ್ತು ನೆನಪು ಸದಾ ನಮ್ಮೊಂದಿಗೆ ಇರುತ್ತದೆ.