ಬೆಂಗಳೂರನ್ನು ಬೃಹತ್ತಾಗಿ, ವ್ಯವಸ್ಥಿತವಾಗಿ ಸ್ಥಾಪಿಸಿದ ನಾಡ ಪ್ರಭುಗಳಾದ ಕೆಂಪೇಗೌಡರು,ಸಾವಿರಾರು ಕೆರೆಗಳು,ನೂರಾರು ದೇವಸ್ಥಾನ,ಎಲ್ಲಾ ಸಾಮಗ್ರಿಗಳು ಸುಲಭವಾಗಿ ದೊರೋಕುವ ಮಾರುಕಟ್ಟೆಗಳು,ರಂಗ ಮಂಟಪಗಳು,ಮನೆ ಮಠಗಳನ್ನು ನಿರ್ಮಿಸಿ ಜೀವನ ಸಾಗಿಸುವುದಕ್ಕಾಗಿ ಸಾಮಾನ್ಯ ಪ್ರಜೆಗೆ ಬೇಕಾದ ಎಲ್ಲ ಸವಲತ್ತು ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟಿದ್ದರು.
ಕೆಂಪೇಗೌಡರಿದ್ದ ಕಾಲದಲ್ಲಿ ಸಿನಿಮಾ ಇನ್ನೂ ಹುಟ್ಟಿರಲಿಲ್ಲ, ಹಾಗೊಂದು ವೇಳೆ ಸಿನಿಮಾ ಇದ್ದಿದ್ದರೆ ಉಪನಗರಕ್ಕೆ 2 ಚಿತ್ರಮಂದಿರಗಳನ್ನು ಕಟ್ಟಿಸಿ ಬಿಡುತ್ತಿದರೆನೊ.ಆ ಒಂದು ಕೊರಗು ಇರಬಾರದು ಎಂದೆನೊ ಅವರ ಹೆಸರಿಟ್ಟಿರುವ ರಸ್ತೆಯಲ್ಲೇ “ಕೆಂಪೇಗೌಡ ರೋಡ“(ಕೆ.ಜಿ ರೋಡ್) ಸಾಲು ಸಾಲಾಗಿ ಸಿನಿಮಾ ಮಂದಿರಗಳು ನಿರ್ಮಾಣವಾಯಿತು.ಇಂಡಸ್ಟ್ರಿಯ ನವ ಪ್ರತಿಭೆಗಳು ಮೊಳಗಿ, ದಿಗ್ಗಜರಾಗಿ ಬೆಳೆಯಲು ಕಾರಣವಾದ ಒಂಥರಾ ಉಗಮ ಸ್ಥಾನವಿದೆ.
ಸ್ಟೇಟ್ಸ್(ಭೂಮಿಕಾ), ಕಲ್ಪನಾ,ಸಾಗರ್,ಮೇನಕಾ, ಕೆಂಪೇಗೌಡ,ಜೈ ಭಾರತ್, ತ್ರಿಭುವನ್,ಕೈಲಾಶ್,ನರ್ತಕಿ,ಸಪ್ನ,ಸಂತೋಷ್,ಅಲಂಕಾರ್, ಹಿಮಾಲಯ,ಸಂಗಂ,ಅಭಿನಯ, ಮಜೆಸ್ತಿಕ್,ತ್ರಿವೇಣಿ,ಅಪರ್ಣ,ಕಪಾಲಿ ಮತ್ತು ಮೂವಿ ಲ್ಯಾಂಡ್ ಸೇರಿ 20 ಚಿತ್ರಮಂದಿರಗಳಿತ್ತು.ಕನ್ನಡ,ತೆಲುಗು,ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳು ಪ್ರದಶನವಾಗುತ್ತಿದ್ದವು.ಕೇವಲ 200 ಮೀಟರ್ಗಳ ಸುತ್ತಳತೆಯಲ್ಲಿ ಭಾರತದ ಯಾವುದೇ ಭಾಗದಲ್ಲಿ ಇಷ್ಟು ಚಿತ್ರಮಂದಿರಗಳು ಇರಲಿಲ್ಲ.

ಬೆಂಗಳೂರು ಸಿನಿಮಾಗೂ “ರಾಜಧಾನಿಯಾಗಿತ್ತು”. ಒಂದು ದಿನಕ್ಕೆ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಿನಿಮಾ ವೀಕ್ಷಿಸುವಷ್ಟು ಬೃಹತ್ತಾಗಿತ್ತು ಈ ಚಿತ್ರ ಸಂತೆ.ಇಲ್ಲಿ ಅಸಂಖ್ಯಾತ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿ,ಶತ ದಿನಗಳ ಪ್ರದರ್ಶನ ಕಂಡಿವೆ,ಕೆಲವು ಸಿನಿಮಾಗಳು ಒಂದು ಇಡೀ ವರ್ಷ ಪೂರೈಸಿದೆ.
ಹಲವು ತೆಲಗು ಹಿಂದಿ ಸಿನಿಮಾಗಳು ಸತತ ನೂರು ದಿನಗಳ ಪ್ರದರ್ಶನಗೊಂಡು, ನಿರ್ಮಾಪಕರ ಜೇಬು ತುಂಬಿಸಿ, ಬಾಂಬೆ ಮತ್ತು ಹೈದರಾಬಾದ್ ವರೆಗೂ ಸುದ್ದಿಯಾಗಿತ್ತು ಕೆ. ಜಿ ರೋಡ್ ನ ಚಿತ್ರಮಂದಿರಗಳು.ಪ್ರತಿ ಶುಕ್ರವಾರ ಬೆಂಗಳೂರಿನ ಎಲ್ಲಾ ಮೂಲೆಯ ಸಿನಿ ಪ್ರಿಯರ ಗಮನ ಗಾಂಧಿನಗರದ ಕಡೆಗೆ ಸೆಳೆಯುತ್ತಿತ್ತು,ಕಲೆಯ- ಅಭಿಮಾನದ ಸಂಗಮವಾಗುತ್ತಿತು.
ಪ್ರತಿ ಥಿಯೆಟರ್ಗೆ ಅದರದೇ ಆದ ವಿಶೇಷ ಇತ್ತು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿತ್ತು,
ಏಷಿಯಾದ ಅತೀ ದೊಡ್ಡ ಸಿನೇಮಾ ಥೀಯೇಟರ್.(1600 ಸೀಟಗಳಿದ್ದವು) ಕರ್ನಾಟಕದ ಮೊದಲ 3D ಸ್ಕ್ರೀನ್ ಆಗಿದ್ದ ಹೆಗ್ಗಳಿಕೆ ಕಪಾಲಿ ಚಿತ್ರಮಂದಿರಕಿತ್ತು.
ಒಂದರ ಮೇಲೊಂದು ಥಿಯಟರ್, ಮಿನಿ ಥಿಯೇಟರ್, ಸೆಕೆಂಡ್ ಕ್ಲಾಸ್ ಇರದೆ ಬರಿ ಬಾಲ್ಕನಿ ಹೀಗೇ ಇದ್ದದ್ದನ್ನ ನಾವು ಬೆಂಗಳೂರಿನವರು ಉಳಿಸಿಕೊಳ್ಳಲು ಆಗ್ಲಿಲ್ಲ ಎಂಬುವುದು ಎಷ್ಟೋ ಸಿನಿ ಪ್ರಿಯರ ಕೂಗು -ನೋವು.
ಇಂದಿನ ಮಟ್ಟಿಗೆ ಮಲ್ಟಿಪ್ಲೆಕ್ಸ್ ಸಂಸ್ಕೃತಿಯ ಅಬ್ಬರ್, ಆಧೂನಿಕ ತಂತ್ರಜ್ಞಾನ ಅಳವಡಿಸಕೊಳ್ಳದ ಕಾರಣ ಮತ್ತು ವಿಪರೀತವಾದ ಬಾಡಿಗೆಯ(ರಿಯಲ್ ಎಸ್ಟೇಟ್) ಸಮಸ್ಯೆ ಇಂದ 20 ರಿಂದ ಬರಿ 7ಕ್ಕೆ ಬಂದು ತಲುಪಿದೆ.ಇನ್ನೂ ಮುಂದೆ ಕೆಂಪೇಗೌಡ ರಸ್ತೆಯ ಚಿತ್ರಮಂದರಗಳು ಅಂದರೆ ಅದು ಬರಿ ಇತಿಹಾಸವಷ್ಟೆ “ಗತ ಕಾಲದ ವೈಭವ” … The lost glory.