ಧಾರಾವಾಹಿಯ ಟೈಟಲ್ ಸಾಂಗ್ ಕೂಡ ಹಾಡಿದ್ದಾರೆ ಕುಂಕುಮ ಭಾಗ್ಯ, ಸೊಂದಮ್, ನಿಮ್ಮದಿ ನಿಮ್ಮದಿ ಉಂಗಳ್ ಚಾಯ್ಸ್, ಸೊಗ೯ಂ,
ಟಿವಿ ಶೋನ “ಎದೆ ತುಂಬಿ ಹಾಡುವೆನು ” ಶೀಷಿ೯ಕೆ ಗೀತೆ ಮತ್ತು ಮುಖ್ಯ ತೀಪು೯ಗಾರರಾಗಿ ಮತ್ತು ತೆಲುಗಿನ “ಪಾಡುತ ತೀಯಗ” ದಲ್ಲಿ ತೀಪು೯ಗಾರರಾಗಿ ನಡೆಸಿಕೊಟ್ಟಿದ್ದಾರೆ, ಎದೆ ತುಂಬಿ ಹಾಡುವೆನು ಯಾವುದೇ ಕಾರಣಕ್ಕೂ ನೋಡಲು ಮರೆಯುತ್ತಿರಲಿಲ್ಲ.
ಇವರ ಈ ಅನನ್ಯ ಸಾಧನೆಯ ಗುರುತಾಗಿ ಹಲವಾರು ಪ್ರಶಸ್ತಿಗಳು ಬಯಸಿ ಬಂದಿವೆ, ಅವುಗಳಲ್ಲಿ ಕೆಲವು…
👉ಭಾರತ ಸರ್ಕಾರದ ವತಿಯಿಂದ ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
👉ಶಂಕರಾಭರಣಂ ಚಿತ್ರದ “ಓಂಕಾರ ನಾದನು” ಗೀತೆಗೆ ರಾಷ್ಟ್ರೀಯ ಪ್ರಶಸ್ತಿ.
👉ಎಕ್ ದೂಜೆ ಕೆ ಲಿಯೆ ಚಿತ್ರದ “ತೆರೆ ಮೆರೆ ಬೀಚು ಮೆ” ಹಾಡಿಗೆ ರಾಷ್ಟ್ರ ಪ್ರಶಸ್ತಿ.
👉ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ “ಉಮಂಡು ಘಮಂಡು ” ಹಾಡಿಗೆ ರಾಷ್ಟ್ರೀಯ ಪುರಸ್ಕಾರ.
👉ಮಿನ್ಸಾರ ಕನವು ಚಿತ್ರದ “ತಂಗ ತಾಮರೈ ” ಗೀತೆಗೆ ರಾಷ್ಟ್ರೀಯ ಪ್ರಶಸ್ತಿ.
🦜ಮೈನೆ ಪ್ಯಾರ್ ಕಿಯಾ ಚಿತ್ರದ “ದಿಲ್ ದೀವಾನ “ಹಾಡಿಗೆ ಫಿಲಂ ಫೇರ್ ಪ್ರಶಸ್ತಿ.
🦜ಜೀವಮಾನ ಸಾಧನೆಗೆ ಫಿಲಂ ಫೇರ್ ಪ್ರಶಸ್ತಿ ದಕ್ಷಿಣ ಭಾಗ.
🦜ಅತ್ಯುತ್ತಮ ಹಿನ್ನೆಲೆ ಗಾಯಕ ಎಲ್ಲಾ ಭಾಷೆಯಲ್ಲಿ ಫಿಲಂ ಫೇರ್ ಪ್ರಶಸ್ತಿ.
🦜ಆಪ್ತರಕ್ಷಕ ಚಿತ್ರದ “ಘರನೆ ಘರ ಘರನೆ ” ಹಾಡಿಗೆ ಫಿಲಂ ಫೇರ್ ಪ್ರಶಸ್ತಿ.
🦆ಸೈಮಾ ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿ.
🦄ನಂದಿ ಪ್ರಶಸ್ತಿಗಳು ಲಭಿಸಿವೆ.
🐅ಎನ್. ಟಿ. ಆರ್ ಪ್ರಶಸ್ತಿ ಕೂಡ ಪಡೆದಿದ್ದಾರೆ.
👉ತಮಿಳುನಾಡು ಸಕಾ೯ರ ನೀಡಿರುವ ಪ್ರಶಸ್ತಿಗಳು.
🦆ಕನಾ೯ಟಕ ಸಕಾ೯ರ ಪ್ರಶಸ್ತಿ ಓ ಮಲ್ಲಿಗೆ, ಸೃಷ್ಟಿ, ಸವಿ ಸವಿ ನೆನಪು ಚಿತ್ರಗಳ ಹಿನ್ನೆಲೆ ಗಾಯನಕ್ಕೆ ನೀಡಿವೆ.
ಇವಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಇವರನ್ನು ಒಮ್ಮೆ ನೇರವಾಗಿ ಭೇಟಿ ಮಾಡುವ ಭಾಗ್ಯ ಇನ್ನೂ ಸಿಗಲಿಲ್ಲ, ಆ ದಿನಕ್ಕಾಗಿ ಕಾಯುತಿರುವೆ.
“ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು, ಆ ತೀರವಾ ಸೇರಿಸು “
ಇವರ ಗಾನಸುಧೆ ಎಂದೂ ನಿಲ್ಲದೆ ಮುಂದುವರಿಯಲಿ.
ಸಕಲಕಲಾವಲ್ಲಭರಿಗೆ ನನ್ನ ನಮನಗಳು 🙏