ಈ ಸಿನಿಮಾನ “ಅಮಝೋನ್ಪ್ರೈಮ್” ನಲ್ಲಿ ವೀಕ್ಷಿಸಬಹುದು.
ಕಲಾವಿದರು- ಅಮಿತಾಬ್ ಬಚ್ಚನ್, ಆಯುಶ್ಮಾನ್ಖುರಾನ್, ವಿಜಯ್ ರಾಜ್ಜ್,ಶ್ರಿಷ್ಟಿಶ್ರೀವಾಸ್ತವ.
ನಿರ್ದೇಶಕರು- ಶೂಜಿತ್ಸಿರ್ಕಾರ್.
ಕಾಮಿಡಿದ್ರಾಮಾ
ಪ್ಲಾಟ್
ಸುಮಾರು 100 ವರ್ಷದ ಹಳೆಯ ಅರಮನೆ, ಆ ಅರಮನೆಗೆ ಬೇಗಂ(ಫಾರ್ರುಕ್ಜಾಫರ್) ಯಜಮಾನಿ, ಬೇಗಂ ನ ಗಂಡ ಮೀರ್ಜಾ, ಮುದುಕ(ಅಮಿತಾಬ್ ಬಚ್ಚನ್) ಅರಮನೆಗೆ ಒಂದು ರೀತಿಯ ಪಾರುಪತ್ತೆದಾರ ಆದರೆ ಬೇಗಂ ಕೈಯಲ್ಲಿ ಸರ್ವಾಧಿಕಾರ..ಅರಮನೆಯ ಒಂದು ಭಾಗವದಲ್ಲಿ ಕೆಲ ಕುಟುಂಬಗಳು 70 ವರ್ಷಗಳಿಂದ ಬಾಡಿಗೆದಾರರಾಗಿ ವಾಸವಿರುತ್ತಾರೆ.
ಮಹಾಜುಗ್ಗನಾದ ಮಿರ್ಜಾಗು ಬಾಡಿಗೆದಾರರಿಗೂ ನಿತ್ಯವೂ ಒಂದಲ್ಲಾ ಒಂದು ರೀತಿ ಜಗಳ, ರಗಳೆ ,ರಂಪ ರಾಧಾ0ತ. ಆ ಪ್ರತಿಯೊಂದು ಸನ್ನಿವೇಶವು ನೋಡುಗರಿಗೆ ನಗೆಯ ಔತಣ ನೀಡುವುದು. ಬಾಂಕೆರಸ್ತೋಗಿ(ಆಯುಶ್ಮಾನ್ಖುರಾನ್) ಅತಿ ಕಡಿಮೆ ಬಾಡಿಗೆ ನೀಡುವ, ಮೀರ್ಜ್ ಜತೆಗೆ ಸದಾ ಕಿರ್ ಕಿರಿ ಮಾಡುವ ಯುವಕ.
ದಿನಗಳು ಕಳೆದಂತೆ ಮಿರ್ಜಾ ಹೇಗಾದರು ಮಾಡಿ ಬೇಗಂಗೆ ಸ್ವಂತವಾದ ಅರಮನೆಯನ್ನ ತನ್ನ ವಶಕ್ಕೆ ಪಡೆದುಕೊಂಡು, ಬಾಡಿಗೆದಾರರನ್ನ್ ಆಲಿಂದ ಓಡಿಸಿ ಸರ್ವಾಧಿಕಾರಿಯಾಗಬೇಕು ಎಂದು ಆಶಿಸುತ್ತಾನೆ, ಹರ ಸಾಹಸ ಪಡ್ತಾನೆ. ಮತ್ತೊಂದೆಡೆ ಅರಮನೆಯನ್ನ ಖಬಳಿಸಲು ಹಲವರ ಕಣ್ಣು, ಲೋಕಲ್mla, ಅಲ್ಲಿನ ಓರ್ವ ಬಿಳ್ದರ್ ಜೊತೆಗೆ ರಾಸ್ತೋಗಿ., ಊಹಿಸಲಾಗದ ಹಲವು ತಿರುವುಗಳು, ಸರಿ ಹಾಗಾದ್ರೆ ಅರಮನೆ ಯಾರ ಪಾಲಾಗುತ್ತೆಅನ್ನೋದೇ ಕಡೆಯಲ್ಲಿ ಬರುವ “ದೊಡ್ಡ ಅಚ್ಚರಿ“..
ಯಾರ ಆಮಿಷ ಗೆಲ್ಲುತ್ತೆ? ಯಾರ ಹುನ್ನಾರ ಫಲಿಸುತ್ತೆ?
ಹಣ್ಣು ಮುದುಕ ಮಿರ್ಜಾಪಾತ್ರದಲ್ಲಿ“BIG B ಅಮಿತಾಬ್ಬಚ್ಚನ್” ಮತ್ತೊಮ್ಮೆ ಅಮೋಘ ಅಭಿನಯದಿಂದ ಮೋಡಿ ಮಾಡಿದ್ದಾರೆ, 77 ವಯಸ್ಸನಲ್ಲಿ ಅವರಿಗೆ ಇಂದಿಗೂ ಯಾರು ಸರಿ ಸಾಟಿ ಇಲ್ಲ ಎನ್ನುವುದನ್ನ ಮತ್ತೆ ನಿರೂಪಿಸಿದ್ದಾರೆ.ಅವರ ಜೊತೆಗೆ ನಟಿಸುವುದು ಹಲವರ ಕನಸು, ಹಾಗೆ ಸಿಕ್ಕ ಅವಕಾಶವನ್ನ ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ ನಟ ಆಯುಶ್ಮಾನ್ಖುರಾನ್..
ಪ್ರತಿ ಫ್ರೇಮ್ನಲ್ಲು ಪಾತ್ರವಾಗಿ ಜೀವಿಸಿದ್ದಾರೆ. ಇನ್ನು ನಿರ್ದೇಶಕ ಶೂಜಿತ್ಸಿರ್ಕಾರ್ ತಿಳಿ ಎಳೆಯ ಕಥೆಗೆ, ಉನ್ನತಭಾವವ ತುಂಬಿ ಸಿನಿಮಾನ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತೂಕವಿರುವ, ಅಷ್ಲ್ಲೀಲವಿಲ್ಲದ ಹಾಸ್ಯವೇ ಈ ಸಿನಿಮಾದ ವಿಶೇಷ..