ಗೋವಾದಲ್ಲಿ ಸಿ. ಐ. ಡಿ. 999

ಎರಡನೆಯ ಸಿನಿಮಾ (1968) ಬಾಂಡ್ ಸರಣಿಯಲ್ಲಿ. ಮಿಸೈಲ್ ಒಂದನ್ನು ಕದ್ದು ಭಾರತ ಸರ್ಕಾರವನ್ನು ಹೆದರಿಸುವ ವಿಲನ್.
ಪ್ರಕಾಶ್ ಮತ್ತು ಬೇಬಿ (ರಾಜ್‍ಕುಮಾರ್ ಮತ್ತು ನರಸಿಂಹರಾಜು) ಗೋವಾಗೆ ಬರುತ್ತಾರೆ.
ಹುಡುಗಿ ಒಬ್ಬಳು ತನ್ನ ಬೈಕ್ ಕೆಟ್ಟು ರಸ್ತೆಯಲ್ಲಿ ನಿಂತಿದ್ದಾಗ 999 ಡ್ರಾಪ್ ಕೊಟ್ಟು ಅವಳನ್ನು ಅವಳ ಮನೆಗೆ ಕರೆದುಕೊಂಡು ಹೋದಾಗ ಅವಳ ವ್ಹೀಲ್ ಚೇರ್ ಮೇಲಿರೋ ತಂದೆ ಮತ್ತು ಅವಳನ್ನು ಮದುವೆ ಆಗಲು ಆಶಿಸುತ್ತಿರುವ ಶಕ್ತಿಪ್ರಸಾದ್‌ನನ್ನು ಭೇಟಿ ಆಗುತ್ತಾನೆ ಪ್ರಕಾಶ್.

ಆ ಹುಡುಗಿ ವೀಣಾ… ಪ್ರಕಾಶ್ ಜೊತೆಗೆ ಸ್ಕೂಟರ್ ಮೇಲೆ ನರ್ತನ ಮತ್ತು ಸ್ವಿಮ್ ಸೂಟಲ್ಲಿ ಅಣ್ಣಾವ್ರ ಜೊತೆಗೆ ಸ್ಟೆಪ್ಪು. ತನ್ನ ಮಾತು ತಾನೇ ಆಡಿದ್ದಾರೆ ವೀಣಾ ಪಾತ್ರದ ಜ್ಯೂಲಿ ಲಕ್ಷ್ಮಿ. ಅಂದ ಹಾಗೆ ಲಕ್ಷ್ಮಿ ಮತ್ತು ಕ್ಯಾಬರೆ ನರ್ತಕಿ ಜ್ಯೋತಿಲಕ್ಷ್ಮಿಯ ಮೊದಲ ಸಿನಿಮಾ ಇದು.
ಸಂಭಾಷಣೆ ಕಡಿಮೆ… ಹೇರಳ ಫೈಟಿಂಗ್… ಸುಂದರ ನೇಪಥ್ಯ ಸಂಗೀತ..
ಒಂದು ಮಿಸ್ಟರಿ ಓಪನ್ ಆಗ್ತಿದ್ದಂತೆ ಸಿನಿಮಾ ಓವರ್.

8 ವರ್ಷಗಳ ನಂತರ… ಆನಂದನ (ರಾಜ್‍ಕುಮಾರ್) ಉಷಾಳಾಗಿ.. ಮತ್ತೆ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟರು ಲಕ್ಷ್ಮಿ ನಾ ನಿನ್ನ ಮರೆಯಲಾರೆ(1976) ಚಿತ್ರದ ಮೂಲಕ. ಕನ್ನಡದ ಮನೆ ಮಾತಾದರು.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply