ಕೆಲವು ನಟರು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿತಾರೆ , ಕನ್ನಡದಲ್ಲಿ ನರಸಿಂಹರಾಜ್, ಬಾಲಕೃಷ್ಣ, ಎನ್ ಎಸ್ ರಾವ್, ದಿನೇಶ್ …
ಭಾಷೆ ಯಾವುದಾದರೇನು ಹಾಸ್ಯ ಮುಖ್ಯ, ಇಂದೇ ಅಂತಹ ತಮಿಳು ಹಾಸ್ಯ ನಟ “ಗೌಂಡಮಣಿ ” ಸುಬ್ರಮಣ್ಯಂ ಕರುಪಯ್ಯ ತಮಿಳು ಚಿತ್ರರಂಗದಲ್ಲಿ ಬಹು ದೊಡ್ಡ ಹೆಸರು ಮಾಡಿದ ಇವರಿಗೆ ಜನುಮ ದಿನ. ಹ್ಯಾಪಿ ಬರ್ತ್‌ಡೇ ಸರ್ 💐💜💐.
ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟರು ಸಾಕಷ್ಟಿದ್ದಾರೆ, ತಾಯಿ ನಾಗೇಶ್, ಚಂದ್ರಬಾಬು, ಮಣಿವಣ್ಣನ್, ವೆಣಿಯಾಡಲ್ ಮೂತಿ೯, ವಡಿವೇಲ್, ವಿವೇಕ್, ಸಂತಾನಂ, ಸೆಂದಿಲ್ ಹೀಗೆ..
1980-90 ರ ಅವಧಿಯಲ್ಲಿ ಇವರು ಮತ್ತು ಸೆಂದಿಲ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಚಿತ್ರಗಳು ಒಂದಕ್ಕಿಂತ ಒಂದು ಸೂಪರ್ , ತಮಿಳು ಚಿತ್ರರಂಗದ ದಿಗ್ಗಜರು ಎಂದರೆ ತಪ್ಪಾಗಲಾರದು,
ಹಾಸ್ಯ ನಟರಾಗಿ ಇವರಿಬ್ಬರ ನಟನೆ ಅಮೋಘ, ಇವರಿಬ್ಬರ ಜೋಡಿ ಎಷ್ಟು ಜನಪ್ರಿಯತೆ ಆಗಿತ್ತು ಅಂದರೆ ತಮಿಳು ಚಿತ್ರರಂಗ ಆಳಿದವರು ಎಂದರೆ ಅತಿಶಯೋಕ್ತಿಯಲ್ಲ, ಗೌಂಡಮಣಿ ರವರು ಶೂಟಿಂಗ್ ನಲ್ಲಿ ಆಪೋಸಿಟ್ ಕಲಾವಿದ ಡೈಲಾಗ್ ಹೇಳಿದ್ರೆ ಇವರು ಸ್ಪಾಟ್ ನಲ್ಲಿ ಕೌಂಟರ್ ಡೈಲಾಗ್ ಹೇಳ್ತಿದ್ರು, ಹಾಸ್ಯ ಚಟಾಕಿ ಹೇಳೋದ್ರಲ್ಲಿ ಎತ್ತಿದ ಕೈ, ಅವರಿಗೆ ನೀಡಿದ ಯಾವುದೇ ಪಾತ್ರ ಅಚ್ಚುಕಟ್ಟಾಗಿ ನಿವ೯ಹಿಸುತ್ತಿದ್ದ ನಟ.
ನಟನೆ ಮಾಡೋದಂದ್ರೆ ಇನ್ನಿಲ್ಲದ ಪ್ರೀತಿ, ನಾಟಕ ಕಂಪನಿಯಲ್ಲಿ ಕಲಿತದ್ದು ಮುಂದೆ ಚಿತ್ರರಂಗದಲ್ಲಿ ಲೆಜೆಂಡ್ ಆಗಿ ಗುರುತಿಸಿಕೊಂಡರು,
ನಟಿಸಿದ ಮೊದಲ ಚಿತ್ರ ಸವ೯ರ್ ಸುಂದರಂ.
ಆಯಿರತ್ತಿಲ್ ಒರುವನ್, 16 ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ವೈದೇಹಿ ಕಾತ್ತಿರುಂದಾಳ್, ಪಗಲ್ ನಿಲವು, ಅನ್ನೈ ಭೂಮಿ, ಉಳ್ಳತ್ತೈ ಅಳ್ಳಿತ್ತಾ, ಕರಗಟ್ಟಕಾರನ್, ಮಣ್ಣನ್, ಚೇರನ್ ಪಾಂಡಿಯನ್, ಚಿನ್ನ ಗೌಂಡರ್, ಸೂರಿಯನ್, ಮಹಾ ನಡಿಗನ್, ಮಲಬಾರ್ ಪೋಲೀಸ್, ಚೊಕ್ಕ ತಂಗಂ, ಜೆಂಟೆಲ್ ಮೆನ್, ಕಾದಲರ್ ದಿನಂ, ನಾಟ್ಟಾಮೆ, ಕಟ್ಟಬೊಮ್ಮನ್, ಸೇತುಪತಿ ಐ ಪಿ ಎಸ್, ಜೈ ಹಿಂದ್,
ಹೇಳ್ತಿದ್ರೆ ಪಟ್ಟಿ ನಿಲ್ಲಲ್ಲ.
ನಟರಾದ ಕಾತಿ೯ಕ್, ರಜಿನಿಕಾಂತ್, ಸತ್ಯರಾಜ್, ವಿಜಯ್ ಕಾಂತ್, ಅಜು೯ನ್ ಸಜಾ೯, ಶರತ್ ಕುಮಾರ್ ಮತ್ತು ಇತರರ ಜೊತೆ ಕಾಮಿಡಿ ಸೀನ್ ಗಳಲ್ಲಿ ಮಿಂಚಿದ್ದಾರೆ, ನಟರಿಗೂ ಆವರ ಕಾಂಬಿನೇಶನ್ ಚಿತ್ರಗಳಿಗೆ ಇವರೇ ಬೇಕು ಅಂತ ಹೇಳಿದ್ದೂ ಉಂಟು. ನಿಮಾ೯ಪಕರೂ ಕೂಡ ಗೌಂಡಮಣಿ ಮತ್ತು ಸೆಂದಿಲ್ ಜೋಡಿ ಇದ್ರೆ ಸಿನಿಮಾ ಹಿಟ್ ಆಗೋದು ಗ್ಯಾರಂಟಿ ಅಂತಿದ್ರು,
ಕೇವಲ ಹಾಸ್ಯ ನಟರಾಗಲ್ಲದೆ ಖಳ ನಟರಾಗಿ ಅಭಿನಯಿಸಿದ್ದಾರೆ.
ಕರಗಟ್ಟಕಾರನ್ ಚಿತ್ರದ ಬಾಳೆಹಣ್ಣು ಕಾಮಿಡಿ, ಪೆಟ್ರೋಮ್ಯಾಕ್ಸ್ ಕೆಡಿಸೋ ಕಾಮಿಡಿ, ಮಣ್ಣನ್ ಚಿತ್ರದ ಥಿಯೇಟರ್ ನಲ್ಲಿ ಚೈನ್ ಬಹುಮಾನ ಪಡೆಯೋ ಸೀನ್, ಉಳ್ಳತ್ತೈ ಅಳ್ಳಿತ್ತ ಚಿತ್ರದ ಒದೆ ತಿನ್ನೋದು, ಚಿನ್ನತಂಬಿ ಚಿತ್ರದ ಅಡುಗೆ ಭಟ್ಟ ಸಂಜೆ 6 ಘಂಟೆ ಮೇಲೆ ಕಣ್ಣು ಕಾಣಿಸದೆ ಆಗೋ ಫಜೀತಿ, ಮತ್ತೊಂದು ಚಿತ್ರದಲ್ಲಿ ಹೂ ತುಳಿಯೋದು ಅಂತ ಹೇಳಿ ಬೆಂಕಿಲಿ ನಡೆಸೋ ಸೀನ್ ಬಹಳಷ್ಟಿವೆ.
ನಮಗೆ ಮನಸ್ಸಿಗೆ ಬೇಜಾರಾದಾಗ ಇವರ ಕಾಮಿಡಿ ಸೀನ್ ನೋಡಿ ಖುಷಿ ಪಡಬಹುದು.
ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಲಿ.
ಅಣ್ಬುಳ್ಳ “ನಗಚ್ಚಿವೈ ಮಣ್ಣನ್ ” ಗೌಂಡಮಣಿ ಸರ್ ಪೊರುಂದ ನಾಲ್ ವಾಳ್ತುಕ್ಕಳ್ 💐💙💐