ಪದ್ಮಭೂಷಣ ಡಾ ರಾಜ್ ಕುಮಾರ್ ರವರ ಮುದ್ದಿನ ಮೊಮ್ಮಗ, ರಾಜವಂಶದ ಕುಡಿ, ಪೂಣಿ೯ಮಾ ಮತ್ತು ರಾಮ್ ಕುಮಾರ್ ರವರ ಸುಪುತ್ರ ಧೀರನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋದು ತುಂಬಾ ಸಂತಸ ತಂದಿದೆ.
ರಾಜಣ್ಣರಂತೆ ಶಕ್ತಿ 🦋 ಶಿವಣ್ಣರಂತೆ ಭಕ್ತಿ 😍 ಪುನೀತ್ ರಂತ ಪವರ್ 💥 ರಾಘಣ್ಣ ರಂತ ಪ್ರೀತಿ 💙 ರಾಮ್ ಕುಮಾರ್ ರಂತ ಗುಣ 🌺
ಈ 5 ಗುಣಗಳೂ ನಿಮ್ಮನ್ನು ಚಿತ್ರರಂಗದಲ್ಲಿ ಮುನ್ನಡೆಯಲು ಕಾರಣವಾಗುವುದು ಖಂಡಿತ 🌷ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಅಣ್ಣಾವ್ರ ಆಶೀವಾ೯ದ ನಿಮ್ಮ ಮೇಲಿರಲಿ 🌹
ನೀವು ಸಿನಿಮಾ ಜಗತ್ತಿಗೆ ಎಂಟ್ರಿ ಕೊಡ್ತಿರೋದು ಅಭಿಮಾನಿಗಳಿಗೆ ತುಂಬಾ ಸಂತೋಷ, ನಿಮ್ಮ “ಶಿವ 143” ಚಿತ್ರದ ಪ್ರತಿಯೊಂದು ಪೋಸ್ಟರ್ ಗಳು ಒಂದಕ್ಕಿಂತ ಒಂದು ವಿಭಿನ್ನ, ಆ ಟೆರ್ರರ್ ಲುಕ್, ಅಭಿಮಾನಿಗಳಿಗೆ ಕೊಡುತ್ತೆ ಕಿಕ್, ನಿಮ್ಮನ್ನು ಆದಷ್ಟು ಬೇಗ ಬೆಳ್ಳಿ ತೆರೆಯ ಮೇಲೆ ನೋಡಲು ಬಯಸುವ ಎಲ್ಲಾ ಅಭಿಮಾನಿಗಳಲ್ಲಿ ನಾನೂ ಒಬ್ಬ.
ನಿಮ್ಮ ಸಿನಿ ರಂಗದ ಪಯಣದಲ್ಲಿ ಎಲ್ಲಾ ಯಶಸ್ಸು ಕಾಣಲಿ ಎಂಬುವುದು ನಮ್ಮ ಆಶಯ, ನಿಮ್ಮ ಎಲ್ಲಾ ಚಿತ್ರಗಳಿಗೂ ಆಲ್ ದಿ ಬೆಸ್ಟ್
ಕಲೆಗಾಗಿ ಹುಟ್ಟಿರುವ ಕಲಾವಿದರ ಕುಟುಂಬ, ಕಲೆಗಾಗಿ ಮೀಸಲು ಅದುವೇ ರಾಜವಂಶದ ಕುಟುಂಬ, ರಾಜವಂಶದ ಅಭಿಮಾನಿಯಾಗಿರೋದಕ್ಕೆ ನಮಗೆ ಹೆಮ್ಮೆ ಇದೆ.
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ಪ್ರೇಮ್ ನಿರ್ದೇಶಿಸುತ್ತಿರುವ ಕೆ.ಡಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು, ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ…
ನಿಧಾನವಾಗಿ ಕನ್ನಡ ಚಿತ್ರರಂಗ ನಾಯಕ ಪ್ರಧಾನ ಚಿತ್ರಗಳಿಂದ ದೂರ ಸರಿಯುತ್ತಿರುವ ಸ್ಪಷ್ಟ ಸೂಚನೆ ದೊರಕುತ್ತಿರುವ ಈ ಸಂದರ್ಭದಲ್ಲಿ “ಅರಿಷಡ್ವರ್ಗ” ಸಿನೆಮಾ ಒಂದು ಜೀವಂತ ಉದಾಹರಣೆ ಎನಿಸುತ್ತದೆ. ಕಥೆಯೇ…