ಭಾರತ ಚಿತ್ರರಂಗದ ಷೋಮಾನ್ ಎಂದೇ ಕರೆಯಲ್ಪಡುವ ರಾಜಕಪೂರರ ಪುತ್ರ ,ಹಿರಿಯ ನಟ ರಿಷಿ ಕಪೂರ(67ವರ್ಷ) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.6 ವರ್ಷಗಳಿಂದ ಬೊನ್ ಮ್ಯಾರೋ ಕ್ಯಾನ್ಸರ್ನಿಂದಾಗಿ ಬಳಲುತ್ತಿದ್ದರು.ಉಸಿರಾಟದ ಸಮಸ್ಯೆ ಇರುವುದಾಗಿ ಹೇಳಿದ ಕಾರಣ 29 ತಾರಿಕಿನಂದು H. N ರೇಲಿಯಾನ್ಸ್ ಫೌಂಡೇಷನ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಪ್ರೀತಿಯಿಂದ ಚಿತ್ರರಂಗದವರು ಇವರನ್ನ “ಚಿಂಟು ಜಿ” ಅಥವ “ಚಿಂಟು ಸಾಬ್” ಅಂತ ಕರೆಯೋರು.ಎಲ್ಲರಿಗೂ ಪರಮ ಆಪ್ತ ..ಪರಮ ಪ್ರಿಯರಾದವರು . “ಹಮ್ ಕಿಸಿಸೇ ಕಮ ನಹೀ”,ಕರ್ಜ್,ಪ್ರೇಮ್ ಗ್ರಂಥ, ಸಾಗರ್,ನಾಗಿನ್ ಅಂತ ಸಾಲು ಸಾಲಿಗಿ ಎವೆರ್ಗ್ರೀನ್ ಹಿಟ್ ಫಿಲ್ಮ್ ಗಳ ನಾಯಕ.
17ನೆ ವಯಸ್ಸಿನಲ್ಲಿ ತಂದೆ ರಾಜ್ ಕಪೂರ್ ನಟಿಸಿ ನಿರ್ಮಿಸಿದ ” ಮೇರಾ ನಾಮ್ ಜೋಕರ್” ಸಿನಿಮಾದಿಂದ ಅಭಿನಯ ಪ್ರಾರಂಭವಾಯಿತು. ಆ ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯು ದೋರಕಿತು. ನಂತರ 1973ರಲ್ಲಿ ಬಿಡುಗಡೆಯಾದ “ಬಾಬಿ”(ನಾಯಕ ನಟನಾಗಿ ಮೊದಲ ಸಿನಿಮಾ) ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿತು.ಆ ಬಳಿಕ.. ನೀಲಿ ಕಣ್ಣಿನ, ಗುಂಡು ಕೆನ್ನೆಯ,ದುಂಡು ಪೋರ ರಿಷಿ ಕಪೂರ್ ಅವರು ಪಡ್ಡೆ ಹುಡುಗ ಹುಡುಗಿಯರ ಮೋಸ್ಟ್ ಫೆವರೇಟ್ ನಟರಾದರು.ತಂದೆಯನ್ನು ಹೆಚ್ಚಾಗಿ ಅನುಕರಿಸದೆ ತನ್ನದೇ ಆದ ಶೈಲಿಯನ್ನ ಬೆಳಸಿಕೊಂಡಿದ್ದರು.75 ಸಿನಿಮಾಗಳಲ್ಲಿ ಅಭಿನಯ. ಕೆಲವು ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು.ಆ ಪಾತ್ರಗಳಿಗೂ ಹೆಚ್ಚಿನ ತೂಕ ಮತ್ತು ಪ್ರಾಮುಖ್ಯತೆ ಇರುತ್ತಿತ್ತು. “ದೋ ದೂನಿ ಚಾರ್” ಮತ್ತೆ ” ಬೆವಕೋಫಿಯಾ” ಚಿತ್ರಗಳಲ್ಲಿನ ಪಾತ್ರ ಗಮನಾರ್ಹ ಹಾಗೂ ಶ್ಲಾಘನೀಯ.
ಕನ್ನಡದ “ನಾಗರಹಾವು” ಚಿತ್ರವನ್ನ ಹಿಂದಿಯಲ್ಲಿ ರಿಶಿ ಕಪೂರಗಾಗಿ “ಜೆಹರಿಲ್ಲ ಇನ್ಸಾನ್” ಅನ್ನೋ ಹೆಸರಲ್ಲಿ ರೀಮೇಕ ಮಾಡಲಾಗಿತ್ತು,ರಾಮಾಚಾರಿ ಪಾತ್ರ ಅಲ್ಲಿ “ಅರ್ಜುನ್ ಸಿಂಗ್” ಆಗಿತ್ತು, ಅದಕ್ಕು ಪುಟ್ಟಣ್ಣ ಅವರೆ ನಿರ್ದೇಶಕರು. ದಿನಗಳು ಕಳೆದಂತೆ ವಿಷ್ಣುವರ್ಧನ್, ಅಂಬರಿಶ್ ಸೇರಿದಂತೆ ಕನ್ನಡದ ಹಲವು ನಟರ್ ಜೊತೆಗೆ ಒಳ್ಳೆಯ ಒಡನಾಟ ಇವರಿಗಿತ್ತು. ಹಿಂದಿಯ “ವೆಡ್ಡಿಂಗ್ ಪುಲಾವ್” ಅನ್ನೋ ಚಿತ್ರದಲ್ಲಿ ದಿಗಂತ್ ನಾಯಕನಾಗಿ ನಟಿಸಿದ್ದದು ಅವರ ಜೊತೆಗೆ ರಿಷಿ ಕಪೂರ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದರು, ಶೂಟ್ ನಡುವೆ ಬಿಡುವಿನ ಸಮಯದಲ್ಲಿ ಹಲವು ಕನ್ನಡ ಸಿನಿಮಾಗಳ ನೆನಪನ್ನ ಮೆಲಕು ಹಾಕುತ್ತಿದ್ದರಂತೆ ರಿಶಿ.. ಸಂದರ್ಶನ ಒಂದರಲ್ಲಿ ದಿಗಂತ್ ಹೇಳಿದ್ದರು. ಅಮಿತಾಬ್ ಬಚ್ಚನ್ ಮತ್ತು ಇವರ ಜೋಡಿ ಕೂಲಿ ಸಿನಿಮಾದಲ್ಲಿ ಜಾದೂ ಮಾಡಿತ್ತು, 35 ವರ್ಷಗಳ ಬಳಿಕ
“102 ನಾಟ್ ಔಟ್” ಸಿನಿಮಾದಲ್ಲಿ ಅದೇ ಮೋಡಿ ಮಾಡಿತ್ತು ಈ ಜೋಡಿ
ಇವರ ಇಡೀ ಕುಟುಂಬವು ಕಲಾ ಸೇವೆಯಲ್ಲಿ ತಒಡಗಿದ್ದರು .ತಂದೆ , ಚಿಕ್ಕಪ್ಪನಂದಿರು(ಶಮ್ಮಿ, ಶಶಿ ಕಪ್ಪೋರ್), ಪತ್ನಿ ನೀತೂ ಸಿಂಗ್,ಪುತ್ರ ರಣಬೀರ್ ಕಪೂರ್, ಸೋದರ ರಣಧೀರ ಕಪೂರ್ ಎಲ್ಲರು ನಟರೆ, ಘಟಾನುಘಟಿಗಳೇ ..ಕಲೆಯೇ ಇವರ ಮನೆ ದೇವ್ರು ..ಬಣ್ಣವೇ ಇವರ ಜೀವಾಳ..
ನಿನ್ನೆಯಷ್ಟೇ ನಟ ಇರ್ಫಾನ್ ಖಾನ್ ಅಗಲಿಕೆಯ ಸುದ್ದಿ ದೇಶದಾದ್ಯಂತ ಸಿನಿ ಪ್ರಿಯರಲ್ಲಿ ದೊಡ್ಡ ನೋವು ಉಂಟು ಮಾಡಿತ್ತು. ಇಂದು ರಿಷಿ ಕಪೂರ್ ಅದೇ ನೋವನ್ನು ಉಂಟುಮಾಡ ಪರಲೋಕ ಸೇರಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರೋದ್ಯಮ.ಕಾಂ ಕೋರುತ್ತದೆ