ಆನಂದ ಚಿತ್ರದಲ್ಲಿ “ಟುವ್ವಿ ಟುವ್ವಿ”ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಇಂದು ಟಗರು ಚಿತ್ರದಲ್ಲಿನ ವಾರೆ ನೋಟ ನೋಡೈತೆ ಹಾಡಿಗೆ ಅಷ್ಟೇ ಹುಮ್ಮಸ್ಸಿನಿಂದ,ಲವ ಲವಿಕಿಯಿಂದ ಹೆಜ್ಜೆ ಹಾಕುತ್ತಾ ,ಮಾಸದ ಹುರುಪನ್ನು ಅಪ್ಪಿಕೊಂಡು ಸಾಗುತ್ತಿದ್ದಾರೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ !!
34 ವರ್ಷದ ಸುದೀರ್ಘ ಅವಧಿಯ ಬಣ್ಣದ ಲೋಕದ ಪಯಣದಲ್ಲಿ “ನೂರಾರು ಸಾಧನೆಗಳು”.
ಉತ್ತಮ ಅಭಿನಯಕ್ಕಾಗಿ-ರಾಜ್ಯ ಸರ್ಕಾರವು,ಫಿಲಂ ಫೇರ್, ಸೈಮಾ ಅವಾರ್ಡ್ಸ್,ಸೇರಿದಂತೆ 20ಕ್ಕು ಹೆಚ್ಚಿಗೆ ಪ್ರಶಸ್ತಿಗಳು ಲಭಿಸಿವೆ,80ಕ್ಕು ಹೆಚ್ಚಿಗೆ ನಾಯಕಿಯರೊಂದಿಗ ನಟನೇ. ಚಿತ್ರರಂಗದಲ್ಲಿ(ಬಾಕ್ಸ್ ಆಫೀಸ್) ಹೊಸ ದಾಖಲೆ ಸೃಷ್ಟಿಸಿದ ಓಂ,ಜೋಗಿ,ಜನುಮ ಜೋಡಿ,Ak-47,ನಮ್ಮೂರ ಮಂದಾರ ಹೂವೆ ಅಂಥಹ ಸೂಪರ್ ಹಿಟ್ ಸಿನಿಮಾಗಳನ್ನ ಸಮರ್ಪಿಸಿದ ಕೀರ್ತಿ, “ಭೂಮಿ ತಾಯಿಯ ಚೊಚ್ಚಲ ಮಗ”, ಜನುಮದಾತ, ಸಂತೆಯಲ್ಲಿ ನಿಂತ ಕಬೀರ, ಕವಚ ಮತ್ತು ಹಗಲುವೇಷ ದಂತಹ ಕಾಲತ್ಮಕ ಸಿನಿಮಾಗಳಲ್ಲಿ ಮನೋಜ್ಞ ಅಭಿನಯವ ಪ್ರದರ್ಶಿಸುತ್ತಾ,”ಆನಂದ ರಾಗವ ಹಾಡುತ್ತಾ ವಿಲ್ಲನ್ ಗಳಿಗೆ ಬೇಂಡು ಎತ್ತುತ್ತಾ”,ಗ್ರಾಮೀಣ ಸೊಗಡು ಮತ್ತು ಸಾಂಸಾರಿಕ ಚಿತ್ರಗಳಲ್ಲಿ ನಾಯಕನಾಗಿದ್ದು…ಸಿನಿ ರಸಿಕರಿಂದ ಫುಲ್ ಮಾರ್ಕ್ಸ್ ಪಡೆದಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ. ಲಾಂಗ್ ಹಿಡಿದು ಅಂಡರ್ ವರ್ಲ್ಡ್ ಡಾನ್ ಪಾತ್ರಕ್ಕೂ ಸೈ, ಅದೇ ಡಾನ್ಗಳಿಗೆ ಗನ್ ಹಿಡಿದು ಚಳಿ ಬಿಡಿಸುವ ಪೊಲೀಸಾಗಿಯೂ ಸೈ. ಕಲಾ ಸೇವೆಯಲ್ಲಿ ನಿರಂತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿವಣ್ಣ,ಹತ್ತುತ್ತಿರುವ ಒಂದುದು ಏಣಿಯ ಮೆಟ್ಟಲು ವರ್ಣರಂಜಿತ ಮತ್ತು ಯುವ ಪೀಳಿಗೆಗೆ ಮಾದರಿ. ಪ್ರಸ್ತುತದಲ್ಲಿ Rdx(r d ಕ್ಸೇವಿಯರ್ )ಚಿತ್ರದಲ್ಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಲು ಸಜ್ಜಾಗಿದ್ದಾರೆ, Rdx ಸಂಪೂರ್ಣ ಥ್ರಿಲ್ಲರ್ ಮತ್ತು ಆಕ್ಷನ್ ಚಿತ್ರವಾಗಿದ್ದು ಇದರ ನಿರ್ದೇಶನದ ಹೊಣೆಯನ್ನು “ರವಿ ಅರಸು” ನಿಭಾಯಿಸಲಿದ್ದಾರೆ.
ಶಿವಣ್ಣನವರ ಮುಂದಿನ ಎಲ್ಲಾ ಪ್ರೊಜೆಕ್ಟ್ ಗಳಿಗು ಶುಭವಾಗಲಿ ಎಂದು ಚಿತ್ರೋದ್ಯಮ.com ಹರಸುತ್ತೆ.
Author: P.Ghanashyam