ಚಿತ್ರರಂಗದ ಸಾಹಿತ್ಯ ರತ್ನ ಚಿ. ಉದಯ್ ಶಂಕರ್

ಆತ್ಮೀಯ ಸಾಹಿತ್ಯಾಭಿಮಾನಿಗಳೇ ಸಾಹಿತ್ಯ ಕುಟುಂಬದಲ್ಲಿ ಜನಿಸಿದ ಚಿ. ಉದಯ್ ಶಂಕರ್ ರವರು ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಹೆಸರಲ್ಲೇ ಇದೇ ಉದಯ ಅಂದರೆ ಸೂಯ೯ ಅಂದರೆ ಬೆಳಕು ಶಂಕರ ಅಂದರೆ ಶಿವ. ಶಿವ ತನ್ನ ಬತ್ತಳಿಕೆಯಿಂದ ಒಂದೊಂದಾಗಿ ಹಾಡಿನ ರೂಪದಲ್ಲಿ ಭಕ್ತರಿಗೆ ಅಂದರೆ ಕೇಳುಗರಿಗೆ ನೀಡಿರೋದು, ಸೂರ್ಯ ತಮ್ಮ ವಿಶಿಷ್ಟವಾದ ಕಥೆಗಳ ಹೊಂದಿಸುವಲ್ಲಿ ಎತ್ತಿದ ಕೈ ಸಾಹಿತ್ಯ ಮಾಂತ್ರಿಕ ಇವರು. ಹಲವಾರು ಚಿತ್ರಗಳಿಗೆ ಸಂಭಾಷಣೆಯನ್ನು ನೀಡಿದ್ದಾರೆ 🌹

“ಇಲ್ಲಿ ಅಣ್ಣಾವ್ರ ಮತ್ತು ಸಾಹಿತ್ಯ ರತ್ನರ ಬಾಂಧವ್ಯ ಸೋದರ ಸಂಬಂಧದಂತಿತ್ತು, ಯಾವುದೇ ಗೀತೆ ಚಿತ್ರಕ್ಕೆ ಹೊಂದುವ ಮತ್ತು ಕಥೆಗೆ ಹೋಲುವಹಾಗೆ ಬರೆಯುತ್ತಿದ್ದದ್ದು ಇವರ ವೈಶಿಷ್ಟ್ಯ, ನಾವು ಗಮನಿಸಬಹುದು ರೌದ್ರ, ಪ್ರಣಯ, ವಿರಹ, ಹಾಸ್ಯ ಮುಂತಾದ ರೀತಿಯ ಹಾಡುಗಳನ್ನು ನಾವು ಅಣ್ಣಾವ್ರ ಚಿತ್ರಗಳಲ್ಲಿ ಕಾಣಬಹುದು, ಇವರ ಜೊತೆ ಮಾಡಿರುವ ಅಷ್ಟೂ ಚಿತ್ರಗಳು ಅವರಿಬ್ಬರ ಪವಿತ್ರ ವಾತ್ಸಲ್ಯ ಎಂತಹುದು ಎಂಬುದು”.

ಮೊದಲೇ ಹೇಳಿದ ಹಾಗೆ ಇವರು ರಚಿಸಿರುವ ಹಲವಾರು ಗೀತೆಗಳಲ್ಲಿ ಕೆಲವು ಜನಪ್ರಿಯ ಸಾಲುಗಳು ನೆನಪಿಸಿಕೊಳ್ಳೋಣ….ನಿಮಗೆ ಅವರ ರಚನೆಯ ಯಾವ ಗೀತೆ ತುಂಬಾ ಇಷ್ಟ ಹಂಚಿಕೊಳ್ಳಿ..

ಯಾವುದೇ ಮನುಷ್ಯನಿಗಾಗಲಿ ಪ್ರಾರಂಭ ಒಂದು ಹಂತ ಅಂತ್ಯ ಕೊನೆಯ ಹಂತ ವಿಧಿ ಯಾರನ್ನೂ ಬಿಡುವುದಿಲ್ಲ, ಇದ್ದಷ್ಟು ದಿನ ನಾವು ಮಾಡುವ ಒಳ್ಳೆ ಕೆಲಸಗಳು ನಮ್ಮನ್ನು ಕೈ ಬಿಡದೆ ಕಾಪಾಡುವುದು.

ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ – ಸಾಹಿತ್ಯ ರತ್ನ

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply