ಚಿತ್ರೋದ್ಯಮದ ಚಿತ್ತಾರಗಳು -2

ಪುಸ್ತಕವನ್ನು ತೆಗೆದುಕೊಂಡು ಕತ್ತರಿಗುಪ್ಪೆಯ ಉಪೇಂದ್ರರವರ ಆಶೀರ್ವಾದ ಪಡೆಯಲು ಉಪೇಂದ್ರ ರವರ ಸ್ವಗೃಹ “ಸುಮನೆ” ಬಳಿ ನಿನ್ನೆ ಹೋದೆವು. ಬಿಡುವಿಲ್ಲದ ಸಿನಿಮಾ ಕೆಲಸ ಮತ್ತು ಯಾವುದೋ ಒಂದು ಮುಖ್ಯ ಚರ್ಚೆಯಲ್ಲಿ(ಆನ್ಲೈನ್) ಭಾಗಿಯಾಗಲೇಬೇಕಾದ ಅನಿವಾರ್ಯ ಕಾರಣದಿಂದಾಗಿ ಉಪೇಂದ್ರ ಅವರ ಸಮಯ ನಮಗೆ ದೊರಕಲಿಲ್ಲ…. ನಿರಾಸೆಯೇ ಆಯ್ತು. ಆದ್ರೆ ಅಲ್ಲೊಂದು ಟ್ವಿಸ್ಟ್ ಕಾದಿತ್ತು. ಉಪ್ಪಿಯವರು ಸಿಗದಿದ್ರೇನು? ಅವರ ಪ್ರೊಡ್ಯೂಸರ್ ಸಿಕ್ಕಿದ್ರು. ಅಂದ್ರೆ ಅವರ ತಂದೆಯವರು ಸಿಕ್ಕಿದ್ರು. ಬಂದ ವಿಷಯ ತಿಳಿಸಿದ ತಕ್ಷಣ, “ಓ ಹೌದಾ ಎಲ್ಲಿ ಬುಕ್ ಕೊಡಿ ನೋಡೋಣ” ಅಂತ ಹೇಳಿ ಹಾಗೇ ಎರಡು ಮೂರು ಹಾಳೆ ತಿರುಗಿಸಿ ಕೂತಲ್ಲೇ ಓದಲಾರಂಭಿಸಿದ್ರು. ಹಾಗೆ ಅವರು ಪುಸ್ತಕವನ್ನು ಮೆಲುಕು ಹಾಕುತ್ತಿದ್ದಾಗ ನಾ ಬಹಳ ವಿನಯದಿಂದ ಕೈ ಕಟ್ಟಿ ಅವರೆದುರು ನಿಂತಿದ್ದೆ.

2 ಅಂಕಣಗಳನ್ನ ಓದಿ, “ತುಂಬಾ ಚೆನ್ನಾಗ್ ಬಂದಿದೆ, ಬಹಳ ಚೆನ್ನಾಗಿ ಬರ್ದಿದ್ದೀರ” ಅಂದ್ರು. ತಕ್ಷಣ ನಾ ಹೇಳ್ದೆ “ಸರ್ ಈ ಪುಸ್ತಕವನ್ನ ಒಟ್ಟು ಆರೇಳು ಜನರ ತಂಡ ಲೇಖಕರು ಸೇರಿ ಬರ್ದಿರೋದು. ಚಿತ್ರೋದ್ಯಮ ವೆಬ್ಸೈಟಿನಲ್ಲಿ ಪ್ರಕಟವಾದ ಅಂಕಣಗಳ ಸಂಕಲನ. ಪ್ರತಿಯೊಬ್ಬರ ಉತ್ತಮ ಚಿಂತನೆಯ ಸಂಕಲನವೇ ಈ ಪುಸ್ತಕ” ಅಂದೆ… “ಓ ಹಾಗೇನೂ? ಅವ್ರೆಲ್ರಿಗೂ ಶುಭವಾಗ್ಲಪ್ಪ ಖಂಡಿತ ಈ ಪುಸ್ತಕಾನಾ ನಾ ಉಪೇಂದ್ರ ಕೈಗೆ ತಲುಪಿಸುವೆ, ಮತ್ತೊಮ್ಮೆ ಬನ್ನಿ ಭೇಟಿ ಕೂಡ ಮಾಡಿಸುವೆ” ಎಂದು ಮುಗುಳ್ನಗುತ್ತಾ ಆ ಹಿರಿ ಮರ ನೆರಳಿನ ಆಶೀರ್ವಾದದ ಜೊತೆಗೆ ಅವರ ತೋಟದಲ್ಲೇ ಬೆಳೆದ ಮಾವಿನಕಾಯಿನ್ನ ನನ್ನ ಕೈಗಿಟ್ಟರು, ಸುಮಾರು 20 ತೋತಾಪುರಿ ಕಾಯಿಗಳನ್ನು ನೀಡಿದ್ರು.

ಈ ಚಿತ್ರೋದ್ಯಮ ವೆಬ್ಸೈಟ್ ಮತ್ತು ಅಂಕಣಗಳನ್ನು ಪುಸ್ತಕವನ್ನಾಗಿ ಹೊರತರಲು ರುವಾರಿಯನ್ನು ಹೊತ್ತ ನಮ್ಮ ಮುಖ್ಯ ಸಂಪಾದಕರು “ಸುರೇಶ (ಟಿಎನ್ನೆಸ್)” ಅವರು ಮಲೇಶಿಯಾದಲ್ಲಿ ಉದ್ಯೋಗಿಯಾಗಿದ್ದು ಅಲ್ಲಿoದಲೇ ಎಲ್ಲವನ್ನು ನಿಭಾಯಿಸಿದ್ದಾರೆ ಎಂದು ಹೇಳಿದೆ. ಅದನ್ನು ಕೇಳಿ “oh very good” ಎಂದು ಹೇಳಿ ಸಂತಸ ವ್ಯಕ್ತಪಡಿಸಿದರು. ಪುಸ್ತಕ ಮತ್ತು ಸಿನಿಮಾ ಹೊರತುಪಡಿಸಿ ಸುಮಾರು ಮೂವತ್ತು ನಿಮಿಷಗಳ ಕಾಲ ಹಾಸ್ಯ ಭರಿತವಾಗಿ, ಲೋಕಾಭಿರಾಮವಾಗಿ ಮಾತನಾಡಿ ಅವರ ಜೀವನದ ಅನುಭವವನ್ನ ಹಂಚಿಕೊಂಡರು…ಆ ಮೂವತ್ತು ನಿಮಿಷಗಳು ಹೇಗೆ ಕಳೆಯಿತೋ ಗೊತ್ತೇ ಆಗಲಿಲ್ಲ…. ಉಪ್ಪಿ ಅವರ ತಂದೆ ಶ್ರೀಯುತ “ಮಂಜುನಾಥ್ ರಾವ್” ಅವರಿಗೆ ಚಿತ್ರೋದ್ಯಮ.ಕಾಂ ತಂಡದಿಂದ ಶತಕೋಟಿ ಪ್ರಣಾಮಗಳು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply