ಚಿತ್ರ-ಚರಿತ್ರೆ

ರಾಜ್ಕುಮಾರ್

ಯಾವುದೇ ಸಂದರ್ಭಕ್ಕೆ ಅಣ್ಣಾವ್ರ ಒಂದು ಫೋಟೋ ಬೇಕೂಂತ ಹುಡುಕಿದಾಗ ಸಿಗುವ ಫೋಟೋಗಳಲ್ಲಿ ಫೈನಲ್ ಆಗೋದು ಈ ಚಿತ್ರ…

ಅದು ಅಣ್ಣಾವ್ರ ಕುಟುಂಬ ಮದರಾಸಿನಲ್ಲಿ ನೆಲೆಸಿದ್ದ ಸಮಯ…
ಯಾವುದೋ ಒಂದು ಪ್ರಾಜೆಕ್ಟಿಗೆ ಅವರು ವರದಪ್ಪನವರೊಂದಿಗೆ ಬೆಂಗಳೂರಿಗೆ ಬಂದು ರೇಸ್ ಕೋರ್ಸ್ ಸಮೀಪದ ಜನಾರ್ಧನ ಹೋಟೆಲಿನಲ್ಲಿ ಉಳಿದುಕೊಂಡಿದ್ದರಂತೆ…
ರಾತ್ರಿ ಊಟಮುಗಿಸಿ ಹಾಗೇ ಒಂದುಸುತ್ತು ವಾಯುವಿಹಾರ ಹೊರಟಿದ್ದಾರೆ…
ಸವಾರಿ ಅವೆನ್ಯೂರೋಡು ತಲುಪಿದಾಗ ಎಂಪೈರ್ ಸ್ಟುಡಿಯೋ ಬಾಲ್ಕನಿಯ ಮೇಲೆ ನಿಂತಿದ್ದ ಮಾಲಿಕರು ಅಣ್ಣಾವ್ರನ್ನ ಕರೆದಿದ್ದಾರೆ…
ಲೋಕಾಭಿರಾಮ ಮಾತುಕತೆಯ ನಡುವೆ ಅಣ್ಣಾವ್ರ ಕಣ್ಣು ಹೊಸಮಾದರಿ ಕೆಮೆರಾದ ಮೇಲೆ ಬಿದ್ದಿದೆ…ಮಾಲಿಕರು ಅದರ ಬಗ್ಗೆ ವಿವರಿಸಿ ‘ಬನ್ನಿ ಕೂತ್ಕೊಳಿ…ಇದರಲ್ಲಿ ನಿಮ್ಮದೊಂದು ಸ್ನ್ಯಾಪ್ ತೆಗೆಯೋಣ’ ಅಂದಿದಾರೆ…ರಿಲ್ಯಾಕ್ಸ್ ಮೂಡಿನಲ್ಲಿದ್ದ ಅಣ್ಣಾವ್ರ ಸಹಜ ಸುಂದರ ರೂಪ ಆ ಅಮೃತ ಘಳಿಗೆಯಲ್ಲಿ ಸೆರೆಸಿಕ್ಕಿದೆ…

ಲೇಖಕರು
ಸುದರ್ಶನ ರೆಡ್ಡಿ .D.N.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply