ಚಿತ್ರ ರಂಗದ ಮೊನಾಲಿಸಾ ಎಂದು ಪ್ರಸಿದ್ಧಿಯಾಗಿರುವ ನಟಿ ಅಂತರಾ ಬಿಸ್ವಾಸ್

 ಅಂತರಾ ಬಿಸ್ವಾಸ್ ಭಾರತ ಚಿತ್ರರಂಗದ ಬಹು ಭಾಷಾ ನಟಿಯಾಗಿದ್ದು ಮೊನಾಲಿಸಾ ಎನ್ನುವ ಹೆಸರಿನಿಂದಲೇ ಪ್ರಸಿದ್ದಿಯಾಗಿದ್ದಾರೆ.

      ನವೆಂಬರ್ ೨೧, ೧೯೮೨ ರಂದು ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ ಬಂಗಾಳಿಯ ಹಿಂದು ಕುಟುಂಬದಲ್ಲಿ ಜನಿಸಿದ ಇವರ ಮೂಲ ಹೆಸರು ಅಂತರಾ ಬಿಸ್ವಾಸ್ ಆದರೂ ತಮ್ಮ ಚಿಕ್ಕಪ್ಪನ ಸಲಹೆಯ ಮೇರೆಗೆ ಮೊನಾಲಿಸಾ ಎಂದು ಹೆಸರನ್ನು ಬದಲಾಯಿಸಿಕೊಂಡರು. ದಕ್ಷಿಣ ಕೋಲ್ಕತ್ತಾದ ಎಲ್ಜಿನ್ ರಸ್ತೆಯಲ್ಲಿರುವ ಜ್ಯೂಲಿಯನ್ ಡೇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಅಶುತೋಷ್ ಕಾಲೇಜಿನಲ್ಲಿ ಸಂಸ್ಕೃತ ವಿಷಯದಲ್ಲಿ ಬಿ.ಎ.ಪದವಿಯನ್ನು ಪಡೆದರು.

೧೯೯೭ ರಲ್ಲಿ ಚಿಕ್ಕ ಸಮಯದ ಧಾರಾವಾಹಿ ನಟಿ ಮತ್ತು ಇಂಡಿಯಾ ವೀಡಿಯೋ ಆಲ್ಬಂ ಗಳಲ್ಲಿ ರೂಪದರ್ಶಿಯಾಗಿ ತಮ್ಮ ಬಣ್ಣದ ಬದುಕು ಆರಂಭಿಸಿದ ಇವರು ಅಜಯ್ ದೇವಗನ್ ಮತ್ತು ಸುನೀಲ್ ಶೆಟ್ಟಿ ಅಭಿನಯದ ಬ್ಲ್ಯಾಕ್ ಮೇಲ್ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ಬಂಗಾಳಿ,ಓಡಿಯಾ, ತಮಿಳು ಮತ್ತು ತೆಲುಗು ಭಾಷೆಯ ಕಡಿಮೆ ಬಜೆಟ್ಟಿನ ಹಲವಾರು ಚಿತ್ರಗಳಲ್ಲಿ ನಟಿಸಿರುವ ಇವರು ಜಾಕಪಾಟ್ ಎಂಬ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ.

ಇದಲ್ಲದೆ ಕಿರುತೆರೆಯಲ್ಲಿ ಪ್ರಸಾರವಾದ ನಜರ್ ಎಂಬ ಧಾರಾವಾಹಿಯಲ್ಲಿ ಮೋಹನಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ನಜರ್ ೨ ಧಾರಾವಾಹಿಯಲ್ಲಿ ಮಧುಲಿಕಾ ಚೌಧರಿಯ ಪಾತ್ರವನ್ನು ನಿರ್ವಹಿಸುತ್ತಿದ್ದು ೨೦೧೬ ರಲ್ಲಿ ನಡೆದ ಇಂಡಿಯನ್ ಶೋ ಬಿಗ್ ಬಾಸ್ ೧೦ ರ ಸ್ಪರ್ಧಿಯಾಗಿದ್ದರು.

ಇವರು ಜನೆವರಿ ೧೨, ೨೦೧೭ ರಂದು ಭೋಜಪುರಿ ಚಿತ್ರ ನಟ ವಿಕ್ರಾಂತ್ ಸಿಂಗ್ ರಾಜಪೂತ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ವಿವಾಹವಾದರು. ೨೦೧೦ ರ ದಿ.ಹಿಂದು ವರದಿಯ ಪ್ರಕಾರ ಮೊನಾಲಿಸಾ ಎಂದು ಪ್ರಸಿದ್ಧಿಯಾಗಿರುವ ಇವರು ಚಿತ್ರ ರಂಗ ಪ್ರವೇಶಿಸಿ ಇಪ್ಪತ್ತೆರಡು  ವರ್ಷಗಳಾಗಿದ್ದರೂ ಇಂದಿಗೂ ಭೋಜಪುರಿ ಚಿತ್ರ ರಂಗದಲ್ಲಿ ಬಹಳ ಬೇಡಿಕೆಯಿರುವ ನಟಿಯಾಗಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply