K. G. F.ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ, ರಾಕಿ ಭಾಯ್ ನ ಜೋಡಿ(ರೀನಾ) ಇಂದು ಅವರ ಹುಟ್ಟು ಹಬ್ಬವನ್ನು ಸಿನಿಮಾ ತಂಡದವರೊಡನೆ ಆಚರಿಸಿಕೊಂಡಿದ್ದಾರೆ. K.G.F 2 ಸಿನಮಾದ ಬಹು ಮುಖ್ಯ ಭಾಗದ ಚಿತ್ರಣ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಉಡುಪಿಯಲ್ಲಿ ಜರಗುತ್ತಿದೆ. ಬಿಡುವು ನೀಡದೆ ನಿರಂತರವಾಗಿ ಸಿನಿಮಾದ ಕೆಲಸ ನಡೆಯುತ್ತಿದ್ದು, ಶೂಟಿಂಗ್ ಸ್ಪಾಟ್ನಲ್ಲಿಯೇ ಕೇಕ್ ಕತ್ತರಿಸಿ, ಶ್ರೀನಿಧಿ ಶೆಟ್ಟಿ ಇಷ್ಟ ಪಡುವ ಕರಾವಳಿಯ ಸ್ಪೆಷಲ್ ಮೀನ್ ಸಾರು ಮತ್ತು ಫಿಶ್ ಫ್ರೈ ಅಡುಗೆ ಮಾಡಿಸಲಾಗಿತ್ತು. 2016 ಸಾಲಿನಲ್ಲಿ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು. K.G.F- 2 ಸಿನಿಮಾದ ಬಳಿಕ ತಮಿಳಿನ ವಿಕ್ರಂ ಜೊತೆಗೆ “ಕೋಬ್ರಾ” ಅನ್ನುವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಶ್ರೀನಿಧಿ ಶೆಟ್ಟಿ ಅಭಿಮಾನಿಗಳು ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹುಟ್ಟು ಹಬ್ಬದ ಶುಭಾಷಯಗಳನ್ನ ತಿಳಿಸಿ ಹರಸಿದ್ದಾರೆ.
ಜನುಮ ದಿನದ ಶುಭಾಷಯಗಳು ಶ್ರೀನಿಧಿ ಶೆಟ್ಟಿ.
