ಜಮೀರ್ ಅಹ್ಮದ್ ಪುತ್ರ ಈಗ ಹೀರೋ

ಚಾಮರಾಜಪೇಟೆ ಶಾಸಕರಾದ ಜಮೀರ್ ಅಹ್ಮದ್ ರವರ ಪುತ್ರ ಝಯಿದೆ ಖಾನ್ ರವರು ತಮ್ಮ ಹೊಸ ಚಿತ್ರ ಬನಾರಸ್ ಮೂಲಕ ಸ್ಯಾಂಡಲ್ವುಡ್ ಪ್ರವೇಶುಸುತ್ತಿದ್ದಾರೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು, ಚಿತ್ರದ ಯಶಸ್ವೀ ನಿರ್ದೇಶಕ ಜಯತೀರ್ಥ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಮಾಯೆಗಂಗೆ ಎಂಬ ಹಾಡೊಂದು ಬಿಡುಗಡೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಶೈಲಜಾ ನಾಗ್, ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಷ್, ಲಹರಿ ವೇಲು, ಮುಂತಾದವರು ಭಾಗಿಯಾಗಿದ್ದರು, ಈ ಚಿತ್ರದ ಮಾಯೆಗಂಗೆ ಎಂಬ ಹಾಡನ್ನು ವಿ ನಾಗೇಂದ್ರ ಪ್ರಸಾದ್ ರವರು ಅದ್ಭುತವಾಗಿ ಬರೆದಿದ್ದಾರೆಂದು ನಿರ್ದೇಶಕ ಜಯತೀರ್ಥರವರು ಹೇಳಿದರು.

ಈ ಚಿತ್ರವು ಪಾನ್ ಇಂಡಿಯಾ ಚಿತ್ರವಾಗಿದ್ದು ಎಲ್ಲ ಭಾಷೆಯಲ್ಲೂ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ, ಈ ಚಿತ್ರವೂ ನನ್ನ ಡ್ರೀಮ್ ಪ್ರಾಜೆಕ್ಟ್ ಆಗಿದ್ದು, ತಿಲಕರಾಜ್ ಬಲ್ಲಾಳವರು ಈ ಚಿತ್ರಕ್ಕೆ ಜೀವ ತುಂಬಿದ್ದಾರೆಂದು ಝಯಿದೆ ಖಾನ್ರವರು ಹೇಳಿದರು, ಈ ಚಿತ್ರಕ್ಕೆ ಅಜನೀಶ್ ಲೋಕನಾಥರವರು ಸಂಗೀತವನ್ನು ನೀಡಿದ್ದಾರೆ, ಈ ಚಿತ್ರದಲ್ಲಿ ಕಾಶಿಯ 84 ಘಾಟಿನಲ್ಲೂ ಚಿತ್ರೀಕರಣ ಮಾಡಿರುವದು ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ಹೆಗ್ಗಳಿಕೆಯಾಗಿದೆ, ಒಟ್ಟಿನಲ್ಲಿ ಚಿತ್ರವೂ ಬಹು ಬೇಗ ತೆರಯ ಮೇಲೆ ಬಂದು ಯಶಸ್ವೀ ಯಾಗಲೆಂದು ಹಾರೈಸುತ್ತೇವೆ.

Chitrodyama Updates

Chitrodyama Updates

Leave a Reply